ಏಪ್ರಿಲ್ ೧

ಏಪ್ರಿಲ್ ೧

ನಮಗೆಲ್ಲ ತಿಳಿದಿರುವಂತೆ ಇಂದು ಮೂರ್ಖರ ದಿನ... ಒಬ್ಬರನ್ನೊಬ್ಬರು ಬೇಸ್ತು ಬೀಳಿಸುತ್ತ ಸಮಯ ಕಳೆಯುವ ಮಕ್ಕಳಿಗೆ ದೊಡ್ಡವರನ್ನೂ ಮೂರ್ಖರಾಗಿಸುವ ಆಸೆ.... ಇಂಥದ್ದೆ ಒಂದು ದಿನ ಏಪ್ರಿಲ್ ೧,೧೯೯೮
ನನಗಾಗ ಇನ್ನು ೯ ವರ್ಷ ವಯಸ್ಸು... ಪರೀಕ್ಷೆ ಮುಗಿದು ಬೇಸಿಗೆ ರಜ ಬಂದಿತ್ತು. ಮನೆಯಲ್ಲಿ ನಾನು ನಮ್ಮಕ್ಕ ಸೇರಿ ಬೆಳಗಿನಿಂದ ನಮ್ಮಮ್ಮನನ್ನು ಮೂರ್ಖಳನ್ನಾಗಿಸಲು ಪ್ರಯತ್ನಿಸಿ ಸೋತಿದ್ದೆವು. ಸಂಜೆ ಸುಮಾರು ೪ ಘಂಟೆಗೆ ನಮ್ಮ ಚಿಕ್ಕಮ್ಮನೂ ಅವರ ಮಕ್ಕಳೂ ನಮ್ಮ ಮನೆಗೆ ಬಂದರು. ಅವರ ಮಕ್ಕಳ ಜೊತೆ ಸೇರಿ ಆಡಲು ಹೊರ ಹೋದೆವು. ಆಗ ನಮ್ಮ ಬೀದಿಗೆ ಟಾರ್ ಹಾಕುವ ಸಲುವಾಗಿ ನೆಲವನ್ನು ಸಮತಟ್ಟಾಗಿಸಲು ದೊಡ್ಡ ಜೆಲ್ಲಿ ಕಲ್ಲನ್ನು ಹರಡಿದ್ದರು. ಮನೆ ಮುಂದಿದ್ದ ಹೊಂಗೆ ಮರ ಏರಿ ನಮ್ಮ ಆಟ ಶುರುವಾಯ್ತು....
ಹೀಗೆ ಆಟ ಮುಂದುವರೀತಾ ಇತ್ತು. ಒಮ್ಮೆ ನಾನು ಬೇರೆಯವರನ್ನು ಅಟ್ಟಿಸಿಕೊಂಡು ಹೋಗುವಾಗು ಎಡವಿ ಬಿದ್ದು ಒಂದು ದೊಡ್ಡ ಕಲ್ಲು ನನ್ನ ಮೊಣಕಾಲಿಗೆ ತಗುಲಿ ಮಂಡಿಚಿಪ್ಪು ಕಾಣುವಷ್ಟು ಆಳವಾದ ಗಾಯ ಮಾಡಿತ್ತು.ಅಕ್ಕ ಮನೆಗೆ ಹೋಗಿ ಅಮ್ಮಂಗೆ ಇಂದುಗೆ ಈ ಥರ ಗಾಯ ಆಗಿದೆ ಅಂತ ಅಂದಾಗ ಅಲ್ಲಿಯೇ ಇದ್ದ ನಮ್ಮ ಚಿಕ್ಕಮ್ಮ "ಈ ಮಾತನ್ನು ನಂಬಬೇಡ ಬೆಳಿಗ್ಗೆ ನಿತ್ಯ ಮತ್ತೆ ದೇವಿಕಾ(ಅವರ ಮಕ್ಕಳು) ಇದೇ ರೀತಿ ನನ್ನನ್ನು ಮೂರ್ಖಳನ್ನಾಗಿಸಿದ್ರು " ಅಂತ ಅಂದ್ರು. ಅದೇ ಕಾರಣಕ್ಕೆ ಅಮ್ಮಾನೂ ಹೊರ ಬರಲಿಲ್ಲ . ಮೂರ್ಖಳನ್ನಾಗಿಸೋದಕ್ಕೆ ಏನೇನೆಲ್ಲ ಆಟ ಆಡ್ತೀರ ನೀವು ಅಂತ ನಕ್ಕು ಸುಮ್ಮನಾದ್ರು. ಅಷ್ಟು ಹೊತ್ತಿಗೆ ನಾನೇ ಕಾಲೆಲ್ಲ ರಕ್ತ ಮಾಡಿಕೊಂಡು ಮನೆಗೆ ಹೋದೆ. ನನ್ನ ಆ ಸ್ಥಿತಿ ಕಂಡು ಅಮ್ಮನ ಕಣ್ಣಲ್ಲೂ ನೀರು. ಅದೆ ಸಮಯಕ್ಕೆ ಅಪ್ಪ ಮನೆಗೆ ಬಂದ್ರು. ಕೂಡಲೆ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದ್ರು. ಅಲ್ಲಿ ವೈದ್ಯರು ಹೊಲಿಗೆ ಹಾಕಿದರು. ನಂತರ ೨ ವಾರ ಆ ನೋವನ್ನು ತಿಂದಿದ್ದಾಯ್ತು....
ಪ್ರತಿ ವರ್ಷ ಏಪ್ರಿಲ್ ೧ನೇ ತಾರೀಕು ತಪ್ಪದೇ ಈ ಪ್ರಸಂಗ ನೆನೆಪಾಗುತ್ತೆ....

Rating
No votes yet

Comments