ಶುರುವಾತಿನ ಪ್ರಲಾಪಗಳು...

ಶುರುವಾತಿನ ಪ್ರಲಾಪಗಳು...

ಇವು ನೋಡಿ ನಾ ಹುಡುಗನಾಗಿದ್ದಾಗ(ಈಗಲೂ ಹುಡುಗುತನ ಉಳಿಸಿೊಳ್ಳುವ ಪ್ರಯತ್ನದಲ್ಲಿಯೇ ಇರುವೆ) ಬರೆದ ಸಾಲುಗಳು. ಇವಕ್ಕೇನು ಹನಿ ಅನ್ನಬೇಕೋ
ಚುಟುಕ ಅಂತ ಕರೀಬೇಕೋ ಗುತ್ತಿಲ್ಲ. ಓದಿ ನೋಡ್ರಿ ಬ್ಯಾಸರಿಕಿ ಬಂದ್ರ ಬೈಯ್ಯುವುದು ಮರೀಬ್ಯಾಡ್ರಿ...

೧) ನನ್ನ ಮನದ ಖಾಲಿ
ಹಾಳೆಗಳ ಮೇಲೆ ನಿನ್ನ ನೆನಪು
ಕವಿತೆ ಬರೆದಿದೆ...

೨) ಗೆಳೆಯ, ಕಪ್ಪು ಮೇಘದ ಜತೆ
ಚಂದ್ರ ಸುರತ ಆಡುವುದು ನೀ ನೋಡಿಲ್ಲ...?
ಚಿಂತಿಸಬೇಡ
ನನ್ನವಳು ಹೆರಳ ಬೆನ್ನ ಮೇಲೆ
ಹರಡಿದುದ ನೋಡಿಬಿಡು ಸಾಕು....!

೩) ನಿನ್ನೆ ಸವೆಸಿದ ಹಾದಿಗುಂಟ ಹರಡಿದ
ಮುಳ್ಳಿನ ಗಾಯವಿನ್ನೂ ಮಾಸಿಲ್ಲ
ಆದರೂ ನಾಳೆಯ ಅನೂಹ್ಯಗಳ ಮಧ್ಯೆ
ನಿನ್ನನ್ನೇ ಹುಡುಕುತಿರುವೆ...

೪) ಮರಳಮೇಲೆ ನಿನ್ನ ಹೆಸರು ಬರೆದು
ನೋಡುತ್ತಿದ್ದೆ ಗಾಳಿ ಬಂದು ಅದು
ತೂರಿ ಹೋದಾಗ ನಿನ್ನಂತೆ
ಚಂಚಲವಾಗಿಹ ಗಾಳಿಯ ಮೇಲೆ
ಸಿಟ್ಟು ಬಂತು...!

೫) ಮರಳ ಮೇಲೆ ನೀನಿರಿಸಿ ಹೋದ
ಹೆಜ್ಜೆ ಗುರುತು ಜತನದಿ ಕಾಯುತ್ತಿರುವೆ
ನೀನಿಲ್ಲ ವಾದರೂ ನಿನ್ನ ಹೆಜ್ಜೆಯ
ಗುರುತಾದರೂ ನನ್ನದಾಗಿರಲಿ.....

Rating
No votes yet

Comments