'ಬಿರುಗಾಳಿ' ಹಾಡುಗಳು

'ಬಿರುಗಾಳಿ' ಹಾಡುಗಳು

ನಿನ್ನೆ ನನ್ನೊಬ್ಬ ಗೆಳೆಯನ ಜೊತೆ ಚಾಟ್ ಮಾಡ್ತಿದ್ದಾಗ "ಕನ್ನಡದಲ್ಲಿ ಹೊಸ ಹಾಡುಗಳಲ್ಲಿ ಯಾವುದು ಚೆನ್ನಾಗಿದೆ?" ಅಂತ ಕೇಳ್ದೆ. "ಬಿರುಗಾಳಿ ಮಗ" ಅಂದ ಅವನು. ಸರಿ ಕೇಳೊಣಾಂತ ಬಿರುಗಾಳಿ ಚಿತ್ರದ ಎಲ್ಲಾ ಹಾಡ್ಗಳ್ನ ಡೌನ್ಲೋಡ್ ಮಾಡಿ ಫೋನ್-ಗೆ ಹಾಕ್ಕೊಂಡೆ.
ಕೇಳಿದ್ಮೇಲ್ ನಂಗನಿಸಿದ್ದು:
1. "ಇದು ನ.....ನ್ನ ಕಥೆ" - ಅತಿ ಹೆಚ್ಚು ಇಷ್ಟವಾದ ಹಾಡು. ವಿಜಯ್ ಪ್ರಕಾಶ್ ಅವರ ಮತ್ತು ಬರಿಸುವ ಧ್ವನಿಯಲ್ಲಿ ಈ ಹಾಡು ತುಂಬಾ ಚೆನ್ನಾಗಿ ಬಂದಿದೆ. ಗಾಳಿಪಟ ಚಿತ್ರದ "ಕವಿತೆ, ಕವಿತೆ" ಹಾಡು ಕೇಳಿದಾಗಲೆ ನಾನು ವಿಜಯ್ ಅಭಿಮಾನಿಯಾಗಿದ್ದೆ. "ಇದು ನ..." ಹೇಳಿ, ಪೌಸ್ ಕೊಟ್ಟು "...ನ್ನ ಕಥೆ" ಎಂದು ಅವರು ಹಾಡುವಾಗ ಅದ್ಭುತವೆನಿಸಿತ್ತು.
2. "ಹೂವಿನ ಬಾಣದಂತೆ" :- ಕನ್ನಡದವಳೆ ಆಗಿ ಹೋಗಿರುವ ಶ್ರೇಯಳ ಕಂಠದಲ್ಲಿ ಇನ್ನೊಂದು ಮಧುರ ಗೀತೆ. ಹಾಡು ಶುರುವಾಗುವುದು ಒಂದು ಉದ್ದನೇ ರಾಗದಿಂದ. ಬೊಂಬಾಟ್ ಅಗಿದೆ.
3. "ಮಧುರ ಪಿಸುಮಾತಿಗೆ" :-ತುಂಬಾ ಇಂಪಾದ ಯುಗಳ ಗೀತೆ.. ಇದರ ವೀಡಿಯೊ ಕೂಡ ತುಂಬ ಚೆನ್ನಾಗಿದೆ.
ಉಳಿದ ಹಾಡುಗಳು ಅಷ್ಟು ವಿಶೇಷ ಅನ್ನಿಸ್ಲಿಲ್ಲ.
ಇನ್ನೂ ಕೇಳಿಲ್ಲ ಅಂದ್ರೆ ಈ ಹಾಡುಗಳ್ನ ಕೇಳಿ. ಖಂಡಿತ ಇಷ್ಟವಾಗತ್ತೆ.
ಅಂದ ಹಾಗೆ ವಿಜಯ್ ನಮ್ಮ ಮೈಸೂರಿನವರು. ನಾನೋದಿದ ಎಸ್ ಜೆ ಸಿ ಇ ಕಾಲೇಜಿನಲ್ಲೆ ಇವರೂ ಓದಿದ್ದು!! ಈಗಾಗಲೆ ಹಿಂದಿಯಲ್ಲಿ ತುಂಬ ಹೆಸರು ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗೆ ಇಲ್ಲಿ ನೋಡಿ.
http://en.wikipedia.org/wiki/Vijay_Prakash
ಪ್ರೀತಿಯಿಂದ,
ವಿನಯ್

Rating
No votes yet

Comments