ಗೆಳೆಯ ಸುಬ್ಬು ಗೆ ನನ್ನ ಅಂತಿಮ ನಮನ

ಗೆಳೆಯ ಸುಬ್ಬು ಗೆ ನನ್ನ ಅಂತಿಮ ನಮನ

ಇಂದು ಬೆಳಿಗ್ಗೆ ಆಫಿಸ್ ನಲ್ಲಿ ಕೂತು, ಕೆಲಸ ಶುರು ಮಾಡಿದ್ದೆ, ಗೆಳೆಯ ಗಣೇಶನಿಂದ ಇ-ಮೇಲ್ ಬಂತು, urgent ವಿಷಯ ಇದೆ ಕರೆ ಮಾಡು ಅಂತ, ಈ ರಾತ್ರಿ ವೇಳೆ ಏನಪ್ಪ ಎಂದು ಅನುಮಾನಿಸುತ್ತಾ ಕರೆ ಮಾಡಿದೆ,,  ಗಣೇಶ ಬಿಕ್ಕಳಿಸಿ ಅಳುತ್ತಿದ್ದ , ಎನು ಆಯಿತೋ ಅಂದೆ.. ಸುಬ್ಬು ಹೋಗಿಬಿಟ್ಟ ಕಣೋ ಎಂದು ಇನ್ನೂ ಅಳಲು ಶುರು ಮಾಡಿದ,  ನನಗೆ ಮಾತು ಹೊರಳದೆ ಮಾತೆಲ್ಲಾ ಅಳುವಾಗಿ ಗಳಗಳ ಅಳಲು ಶುರು ಮಾಡಿದೆ,,  ಬಹುಶಃ ನಮ್ಮ ತಾಯಿಯ ನೆನಪು ಬಂದಾಗ ಹಿಂದೆ ಒಮ್ಮೆ ಇಷ್ಟು ಅತ್ತಿದ್ದು ಜ್ನಾಪಕ ಅಷ್ಟೆ,,  ಎನಾಯಿತೊ ಎಂದು ಸಾವರಿಸ್ಕೊಂಡು ಕೇಳಿದೆ,, ಕಾರ್ ಅಪಘಾತದಲ್ಲಿ ಹೋಗಿಬಿಟ್ಟ ಕಣೊ ,ಲಾರಿಗೂ ಕಾರಿಗೂ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಹೋಗಿಬಿಟ್ಟನಂತೆ....  ಅಷ್ಟೆ,, ಫೋನ್ ಕಟ್ ಮಾಡಿದೆ,,,   ಚುರು ಸಮಾಧಾನ ಆದ ಮೇಲೆ ಗೆಳೆಯ ನಾಗರಾಜನಿಗೆ ಕರೆ ಮಾಡಿದೆ,  ಬಹುಶಃ ಅವನು ಮೀಟಿಂಗ ನಲ್ಲಿ ಇದ್ದನೇನೊ ಕಟ್ ಮಾಡಿದ, ಪುನಃ ೪ ಬಾರಿ ಕರೆ ಮಾಡಿದ ಮೇಲೆ ಏನೋ ಇದೆ ತುರ್ತು ಇದೆ ಎಂದೊ ಕರೆ ಮಾಡಿದ,  ಅವನಿಗೆ ಸುದ್ದಿ ತಿಳಿದು ಅಘಾತ , ಬಹುಶಃ ನಾವು ೫ ಜನ ಇದ್ದ ಅತ್ಮೀಯತೆ ನೋಡಿದರೆ ಅಘಾತ ಆಗುವುದು ಸಹಜವೇ ಸರಿ..   ಎಲ್ಲ ಕಷ್ಟ ಸುಖಗಳಲ್ಲಿ ಭಾಗಿಯಾಗಿದ್ದೆವು, ಜೀವನದ ೨೦ ವರ್ಷ ಒಟ್ಟಿಗೆ ನೋಡಿದ್ದೆವು....  ಮೈಸೂರಿನಲ್ಲಿ ಸುತ್ತದ ಜಾಗವಿರಲಿಲ್ಲ,  ಒಟ್ಟಿಗೆ ತಿನ್ನದ ಹೋಟೆಲ್ ಇರಲಿಲ್ಲ...  

ಸದಾ ಸತ್ಯ, ಆದರ್ಶ , ಎಂದೆಲ್ಲಾ ಹೇಳುತ್ತಿದ್ದ ಗೆಳೆಯ ಸುಬ್ಬು...   ನಿಷ್ಟೆಯಿಂದ ಕೆಲ್ಸ ಮಾಡಿ ಒಬ್ಬ ಒಳ್ಳೆ ವ್ಯಕ್ತಿ ಎನ್ನಿಸ್ಕೊಂಡಿದ್ದ... ದೇವರನ್ನು ನಂಬದ ವ್ಯಕ್ತಿ ಆತ, ಆದರೂ ಎಂದೂ ನಮ್ಮ ನಂಬಿಕೆಗೆ ಅಡ್ಡ ಬರುತ್ತಿರಲಿಲ್ಲ..  ದೇವಾಲಯದಿಂದ ತರುತ್ತಿದ್ದ ಪ್ರಸಾದವನ್ನು ಮಾತ್ರ ಬಿಡುತ್ತಿರಲಿಲ್ಲ..  ಮದುವೆಯೆ ಬೇಡ ಎಂದು ತೀರ್ಮಾನಿಸಿದ್ದ ಹುಡುಗ ಎಲ್ಲರ ಒತ್ತಾಯದ ಮೇರೆಗೆ ಒಪ್ಪಿಕೊಂಡಿದ್ದ, ಇದೆ ೧೯-೨೦ ರಂದು ಮದುವೆ ನಿಶ್ಚಯ ಆಗಿತ್ತು... ಆದರೆ ವಿಧಿಯ ಆಟವೇ ಬೇರೆ ಆಗಿತ್ತು..   "ದೇವರ ಆಟ ಬಲ್ಲವರಾರು..... "

೨ ತಿಂಗಳ ಹಿಂದೆ ಕರೆ ಮಾಡಿದ್ದೇ ಕಡೆ, ಇನ್ನು ನೋಡಬೇಕು ಅಂದರು ಸಿಗದ ಕಡೆ ಪಯಣ ಬೆಳೆಸಿದ... 

ಭಗವಂತ ಅವನ ಆತ್ಮಕ್ಕೆ ಶಾಂತಿ ಕೊಡಲಿ....  ಸುಬ್ಬು ನೀನು ಬಲಮುರಿಯಲ್ಲಿ ನಗುತ್ತಾ ನಿಂತು ತೆಗೆಸಿಕೊಂಡಿರುವ ಫೋಟೊ ನೋಡಿ ಅಳುತ್ತಾ ಇದ್ದಿನಿ.....

Rating
No votes yet

Comments