ಇದು ಯಾವ ಸ್ಥಳ??

ಇದು ಯಾವ ಸ್ಥಳ??

ಈಗ ಮೂರು ದಿನದ ಹಿಂದೆ ಒಂದು ಚಿತ್ರ ಹಾಕಿ ಇದು ಯಾವ ಸ್ಥಳ ಎಂದು ಕೇಳಿದ್ದೆ...

ಸಾಕಷ್ಟು ಪ್ರತಿಕ್ರಿಯೆಗಳು ಬಂದಿದ್ದರೂ ಸರಿಯಾದ ಉತ್ತರ ಯಾರೂ ಕೊಡಲಿಲ್ಲ

ಇದು ಆಂಧ್ರ ಪ್ರದೇಶದಲ್ಲಿದೆ...ದೇಶದ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾದ ಶ್ರೀ ಶೈಲಕ್ಷೇತ್ರದಲ್ಲಿದೆ.....
ಹನ್ನರಡೆನೆಯ ಶತಮಾನದ ಅನುಭಾವಿ ವಚನಕಾರ್ತಿ ಅಕ್ಕ ಮಹಾದೇವಿ ಚೆನ್ನಮಲ್ಲಿಕಾರ್ಜುನನನ್ನು ಒಲಿಸಿಕೊಂಡ ಸ್ಥಳ....ಇದಕ್ಕೆ ಅಕ್ಕ ಮಹಾದೇವಿ ಗುಹೆಯೆಂದೇ ಹೆಸರು....ಇದು ನಿಸರ್ಗ ನಿರ್ಮಿತ ಗುಹೆ.....
ಶ್ರೀ ಶೈಲದ ದರ್ಶನ ಮುಗಿಸಿಕೊಂಡು ನಾಗಾರ್ಜುನ ಅಣೆಕಟ್ಟು ಪ್ರದೇಶದ ಹಿನ್ನೀರಿನ ಮೂಲಕ ಮೋಟಾರ್ ಬೋಟ್ ಮೂಲಕ ಹೋಗಿ ಈ ಗುಹೆಯನ್ನು ಸಂದರ್ಶಿಸಬಹುದು....ಗುಹೆಯ ಒಳಗೆ ವಿದ್ಯುದ್ದೀಪದ ಸಂಪರ್ಕ ಇಲ್ಲ..ಮೇಣದ ಬತ್ತಿಯೊಂದೇ ಬೆಳಕಿನ ಮೂಲ..ಒಳಗೆ ಹೋಗುತ್ತಾ ಗುಹೆ ಕಿರಿದಾಗುತ್ತ ಹೋಗುತ್ತದೆ... ಒಳಗಿರುವ ಲಿಂಗವನ್ನು ದರ್ಶಿಸಲು ಮೈ ಮುದುರಿ ಹೋಗಬೇಕು... ಲಿಂಗದ ಸುತ್ತ ಹೋಗಲು ನನ್ನಂಥವರಿಗೆ ಹೋಗಲು ಸಾಧ್ಯವೇ ಇಲ್ಲ :( :(
ಕತ್ತಲೆಯ ಗವ್ವೆನ್ನುವ ಗುಹೆಯೊಳ್ಗೆ ಮಹಾದೇವನ ನಾಮ ಉದ್ಘೋಷ ನಿರಂತರವಾಗಿ ನಡೆಯುತ್ತಿರುವಾಗ ತಂಪಾಗಿರುವ ಆ ಗುಹೆಯೊಳಗೆ ತೆವಳಿಕೊಂಡು ಹೋಗುವುದು ಅದ್ಭುತ ಅನುಭವ....

ಅಕ್ಕ ಮಹಾದೇವಿ ಇಲ್ಲಿ ಕೆಲವು ತಿಂಗಳುಗಳ ಕಾಲ ತಪಸ್ಸು ಮಾಡಿ ನಂತರ ಇಲ್ಲಿಂದ ಸುಮಾರು ೧೦ ಕಿ.ಮೀ ಗಳಷ್ಟು ದೂರದಲ್ಲಿರುವ ಕದಳಿ ವನದಲ್ಲಿ ಚೆನ್ನಮಲ್ಲಿಕಾರ್ಜುನನೊಂದಿಗೆ ಲೀನವಾದಳು ಎಂಬುದು ಐತಿಹ್ಯ....

ಆಂಧ್ರ ಪ್ರದೇಶ ಪ್ರವಾಸೋದ್ಯಮ ಇಲಾಖೆಯವರು ಇಲ್ಲಿ ಒಳ್ಳೆಯ ಏರ್ಪಾಡುಗಳನ್ನು ಮಾಡಿದ್ದಾರೆ..
ರೋಪ್ ವೇ ಮೂಲಕ ಕೆಳಗಿಳಿದು ನಂತರ ದೋಣಿಯ ಮೂಲಕ ಗುಹೆಯನ್ನು ತಲುಪುವ ವ್ಯವಸ್ಥೆ ಇದೆ. ಇದಕ್ಕೆಲ್ಲಾ ಟಿಕೇಟನ್ನು ಹಿಂದಿನ ದಿನವೇ ಮುಂಗಡವಾಗಿ ಕಾದಿರಿಸುವುದನ್ನು ಮಾತ್ರ ಮರೆಯಬಾರದು...

ಒಮ್ಮೆ ರೋಪ್ ವೇ ಮೂಲಕ ಕೆಳಗಿಳಿದು ಹೋದರೆ ಕೆಲವು ಖಾಸಗಿ ದೋಣಿಗಳೂ ಸಿಗುವುದರಿಂದ ಹೆಚ್ಚಿನ ಯೋಚನೆಗಳಿಲ್ಲ...

ಜೀವನದಲ್ಲಿ ಒಮ್ಮೆಯಾದರು ಸಂದರ್ಶಿಸಬೇಕಾದ ಸ್ಥಳ ಅಕ್ಕ ಮಹಾದೇವಿ ಗುಹೆ..
ಯಾವ ರೀತಿಯ ಸೌಕರ್ಯಗಳು ಇಲ್ಲದ ಹನ್ನೆರಡನೆಯ ಶತಮಾನದಲ್ಲಿ ಏಕಾಂಗಿಯಾಗಿ ಬಸವ ಕಲ್ಯಾಣದಿಂದ ಕದಳಿವನದ ತನಕ ನಡೆದೇ ಹೋದ ಅಕ್ಕನ ಭಾವವೇ ಮನಸ್ಸೆಲ್ಲಾ ತುಂಬಿ ಹೋಗಿವಂತಹ ಜಾಗ ಅಕ್ಕ ಮಹಾದೇವಿ ಗುಹೆ............

Rating
No votes yet

Comments