ಪ್ರೋಗ್ರಾಮರ್ರಾ? ಜೀವಂದಲ್ಲ್ಮುಂದೇನ್ಮಾಡ್ಬೇಕಂತಿದೀರಾ?

ಪ್ರೋಗ್ರಾಮರ್ರಾ? ಜೀವಂದಲ್ಲ್ಮುಂದೇನ್ಮಾಡ್ಬೇಕಂತಿದೀರಾ?

ಇಲ್ಲ. ಇದು ರಿಸೆಷನ್ನು/ಮುಂದೆ ಬರೀ ಗೋಳು (ಆ ದರಿದ್ರ ಬಿಬಿಸಿ ಜಾಹೀರಾತಿನ್ತರ (ಲೋಕಲ್ಗ್ರೂಮ್ಸ್ ಆರ್ ಪ್ರಿಫೆರ್ಡ್ ಓವರ್ ಐಟಿ/ಎನ್ನಾರೈಸ್ , ಯಾಕಂದ್ರೆ ರಿಸೆಷನ್, ಅವ್ರೆಲ್ಲಾ ಕೆಲ್ಸ ಕಳ್ಕೊತಿದ್ದಾರೆ ಅಂತ್ಬರತ್ತಲ್ಲ ಅದು :) )) /ಕೆಲ್ಸ-ಗಿಲ್ಸ ಸಮಸ್ಯೆ ಅಂತ ಅದ್ರ ಬಗ್ಗೆ ಅಲ್ಲ್ವೇ ಅಲ್ಲ, ಮೊದ್ಲೇ ಹೇಳಿದೀನಿ.

ನಮ್ಸುತ್ತ ಬಹಳಷ್ಟು ಜನ ಐಟಿ/ಸಾಫ್ಟ್ವೇರ್ನೋರಿದ್ದಾರೆ. => ಸಾಕಷ್ಟು (ಹಾಲಿ/ಮಾಜಿ/ಭಾವಿ) ಪ್ರೋಗ್ರಾಮರ್ಗಳೂ ಇದ್ದಾರೆ.
ಎಲ್ಲಾ ಪ್ರೊಗ್ರಾಮರ್ ಬಂಧುಗಳಿಗೆ ಒಂದು ಪ್ರಶ್ನೆ.

ಇನ್ನೊಂದೈದ್/ಹತ್ತ್ವರ್ಷ್ದಲ್ಲಿ ನೀವು ಏನಾಗಿರಬಯಸುತ್ತೀರಿ?

ಹೌದು, ಇದೊಂದ್ ಹಳೇ ಇಂಟರ್ವ್ರ್ಯೂ ಸರಕು. ಇದ್ದ್ಬದ್ದ್ಕಡೆಯೆಲ್ಲಾ ಈ ಪ್ರಶ್ನೆ ಕೇಳೀಕೇಳೀ ಜನ ಇದಕ್ಕುತ್ರಸೋ ಕತೆಗಳ್ದು ಒಂದ್ಕಂಪೈಲೇಷನೇ ಮಾಡ್ಬೋದು. ಆದ್ರೂ, ತಮ್ಮಂತಾವು ಒಬ್ಬ ನಿಜವಾದ ಪ್ರೋಗ್ರಾಮರ್ ಅಂತ ಗುರುತಿಸಿಕೊಳ್ಳುವವರಿಗೆ ಇದೊಂದು ಪ್ರಶ್ನೆ ಹಾಕಬಯಸುತ್ತೇನೆ.

ಈ ಪ್ರಶ್ನೆಗೆ ಸಂಬಂಧವಾಗಿ ಜೆಫ್ ಎಟ್ವುಡ್ ಬರ್ದಿರೋ ಲೇಖ್ನ ಇದರ ಬಗ್ಗೆ ಒಳ್ಳೇ ವಿಷಯಗಳನ್ನು ಪ್ರಸ್ತಾಪಿಸುತ್ತೆ. ಎಂಟು ರೀತಿಯಾಗಿ ಪ್ರೋಗ್ರಾಮರ್ಗಳನ್ನು ವಿಂಗಡಿಸಿ, ಒಂದು ಪರಿಚಯ ಕೊಡುತ್ತೆ.

ಪ್ರಶ್ನೆ ತುಂಬಾ ಸಾಧಾರಣ್ವಾದದ್ದು, "ಜೀವಂದಲ್ಲ್ಮುಂದೇನ್ಮಾಡ್ಬೇಕಂತಿದೀರಾ?" ;)

Rating
No votes yet

Comments