ಈ ಬದುಕಿನ ಗುರಿ

ಈ ಬದುಕಿನ ಗುರಿ

ಸಂದೀಪನ ಬಗ್ಗೆ ಓದಿದಾಗ ಆತನ ತಂದೆತಾಯಿಯ ಬಗ್ಗೆ ಮರುಕವೆನ್ನಿಸಿದರೂ ಆತನ ಬಗ್ಗೆ ಆಹಾ! ಎಂತಹ ಅದೃಷ್ಟವಂತ ಎನ್ನಿಸಿತು. ಚಿಕ್ಕಂದಿನಲ್ಲೆ ಸೈನಿಕನಾಗಬೇಕೇಂಬ ಧ್ಯೇಯ, ದೇಶಕ್ಕಾಗಿ ಸಾಯಬೇಕೆಂಬ ಗುರಿ, ಇವನ್ನು ನೋಡಿದರೆ ಆತ ನಿಜಕ್ಕೂ ಬದುಕಿನ ಪ್ರತಿ ಕ್ಷಣವನ್ನೂ ತನಗೆ ಅತಿ ಹೆಚ್ಚು ಸಂತಸ ಕೊಡುವ ಕ್ರಿಯೆಯಲ್ಲೇ ಕಳೆದ ಅನ್ನಬಹುದು. ಈ ಮಾತು ಎಷ್ಟು ಜನರು ಹೇಳಲು ಸಾಧ್ಯ?

ನನ್ನ ಮಟ್ಟಿಗೆ ಹೇಳುವುದಾದರೆ ನನ್ನ ಬಾಳಿನ ಗುರಿಯೇನೆಂದು ನನಗಿನ್ನೂ ಸ್ಪಷ್ಟವಾಗಿಲ್ಲ. ಏನಿದ್ದರೂ ನನ್ನ ಚಿಕ್ಕ/ದೊಡ್ಡ ಆಸೆಗಳನ್ನು ಗುರಿಮುಟ್ಟಿಸಿದ್ದೀನಿ, ಅಷ್ಟೆ. ಈಗ ಹೋಗುತ್ತಿರುವ ದಾರಿಯಲ್ಲೆ ನನ್ನ ಬದುಕು ಕೊನೆಯವರೆಗೂ ಹೋದರೆ? ಈ ಯೋಚನೆ ಬಂದಾಗ, ಇಲ್ಲ, ಏನೋ ಸಾಧಿಸಿಲ್ಲ, ಏನೋ ಮುಗಿಸಿಲ್ಲ, ಏನೋ ಮಾಡಿಲ್ಲ, ಹೀಗೇನೆ ಮನಸ್ಸು ಹೇಳುತ್ತೆ.

ಈ ಬದುಕು ಒಂದು ಪಾಠಶಾಲೆಯಾದರೆ, ನಾನೇನು ಕಲಿಯಲು ಬಂದಿರುವುದು? ಯಾವುದನ್ನು ನನ್ನ ಬದುಕಿನ ಗುರಿಯಾಗಿ ಮಾಡಿಕೊಂಡರೆ, ನನ್ನ ಹುಟ್ಟು ಸಾರ್ಥಕವಾಗುತ್ತೆ?

ಅಥವ, ನನ್ನ ಹುಟ್ಟಿಗೆ ಯಾವುದೇ ಹೆಚ್ಚಿನ ಮಹತ್ವವಿಲ್ಲವೆ? ಸುಮ್ಮನೆ ಇದ್ದು, ಒಂದು ದಿನ ಸಾಯುವುದೇ ನನ್ನ ಗುರಿಯೇನು?

ಈ ಯೋಚನೆಗಳಿಗೆ ಒಂದು ನಿಲುಗಡೆ ಸಿಗಲು ದಾರಿ ಹುಡುಕುತ್ತಿದ್ದೇನೆ.

Rating
No votes yet

Comments