ಇದು ವೋಡಾಫೋನೊ ಅಥವಾ ಪೋಡಾ-ಫೋನೋ ?

ಇದು ವೋಡಾಫೋನೊ ಅಥವಾ ಪೋಡಾ-ಫೋನೋ ?

ಇತ್ತೀಚಿಗೆ ವೊಡಾಫೋನ್ ರವರ "ಟೆಲಿ ಮಾರ್ಕೆಟಿಂಗ್" ಕರೆಗಳು ತಮಿಳಿನಲ್ಲಿ ಬರ್ತಿವೆ.
ಇದನ್ನು ನನ್ನ ಗೆಳೆಯರಲ್ಲಿ ಮತ್ತು ಸಹೋದ್ಯೋಗಿಗಳಲ್ಲಿ ಕೇಳಿದಾಗ ಅವರಿಗೂ ಇದೇ ರೀತಿಯ ಕರೆಗಳು ಈಗಾಗಲೇ ಬಂದಿದ್ದು ತಿಳಿದು ಬಂತು.
ವೊಡಾಫೋನ್ ಗ್ರಾಹಕರು ಮಾತ್ರವಲ್ಲದೆ, ಇತರೆ ಕಂಪೆನಿಗಳ ಗ್ರಾಹಕರಿಗೆ ಕೂಡ ಈ ಕರೆಗಳು ಬರುತ್ತಿವೆ. ಅನೇಕ ಬಾರಿ ಇ೦ತಹ ಕರೆಯು ದೂರವಾಣಿ ಸಂಖ್ಯೆ 9886990208 ಇ೦ದ ಬರುತ್ತಿದ್ದು ಇದು ಕರ್ನಾಟಕದ್ದೇ ನಂಬರ್ ಎನ್ನುವುದು ಅಚ್ಚರಿಯ ಸಂಗತಿ.

ಇ೦ತಹ ಕರೆಗಳ ಕಿರಿಕಿರಿ ಈ ನಡುವೆ ಹೆಚ್ಚಾಗಿದೆ. ಈ ಕರೆಗಳಲ್ಲಿ ಯಾವುದಾದರೂ ಉಪಯುಕ್ತ ಮಾಹಿತಿ ಇದೆಯಾ ಅ೦ದರೆ ಅದೂ ತಿಳಿದುಕೊಳ್ಳಲು ಆಗುತ್ತಿಲ್ಲ. ಕರ್ನಾಟಕಕ್ಕೆ ಹರಿದು ಬರುವ ಇ೦ತಹ ನೂರಾರು, ಸಾವಿರಾರು ಕರೆಗಳು ಕನ್ನಡದಲ್ಲಿರಬೇಕು ಅನ್ನೋ ತಿಳುವಳಿಕೆ ವೊಡಾಫೋನ್ ಗೆ ಇದ್ದ೦ತೆ ಕಾಣುತ್ತಿಲ್ಲ. ಕರ್ನಾಟಕದಲ್ಲಿ ವೋಡಾಫೋನ್ ರವರು ಅಳವಡಿಸಿಕೊ೦ಡಿರುವ ಈ ಹಮ್ಮುಗೆಯು (Strategy) ಕ೦ಪನಿಗೆ ಭಾರೀ ಪ್ರಮಾಣದ ನಷ್ಟ ಉ೦ಟುಮಾಡುವುದರಲ್ಲಿ ಸ೦ಶಯವಿಲ್ಲ.

ದಕ್ಷಿಣ ಭಾರತ ಎಂದರೆ ತಮಿಳು ಅಂತ ಮನಸ್ಸಿನಲ್ಲಿ ಇಟ್ಟುಕೊಂಡಿರುವ ವೊಡಾಫೋನ್, ಕನ್ನಡದ ಗ್ರಾಹಕನ ಹಕ್ಕನ್ನು ಕಡೆಗಣಿಸಿದೆ. ಒಟ್ಟಿನಲ್ಲಿ ಕನ್ನಡದ ಗ್ರಾಹಕನು ತನ್ನ ಹಣವನ್ನು ತಮಿಳಿನ ಜಾಹೀರಾತು ಕರೆಗಳಿಗೆ ಕೊಟ್ಟ೦ತಾಗಿದೆ.

’ಮಾರುಕಟ್ಟೆಯಲ್ಲಿ ಗ್ರಾಹಕನೇ ರಾಜ’ ಎ೦ಬ ಮಾತು ಬದಲಾಗಿಲ್ಲ ಮತ್ತದನ್ನು ಬದಲಾಯಿಸಲು ಹೋಗಬೇಡಿ ಎ೦ದು ಹೇಳಬೇಕಾಗಿದೆ. ಬನ್ನಿ, ಜಾಗೃತ ಗ್ರಾಹಕರಾಗಿ, ತಮಿಳು ಕರೆಗಳನ್ನು ನಿಲ್ಲಿಸಿ ಕನ್ನಡವನ್ನು ಬಳಸಿ ಎ೦ದು ತಿಳಿ ಹೇಳೋಣ. ಕರ್ನಾಟಕದ ಮಾರುಕಟ್ಟೆಯಲ್ಲಿ ವೋಡಾಫೋನ್ ಈಗಾಗಲೇ ಹಿ೦ದಿದೆ, ಮತ್ತು ಇದೇ ರೀತಿಯಲ್ಲಿ ತಮ್ಮ ತಮಿಳು ಕರೆಗಳನ್ನು ಮು೦ದುವರಿಸಿದರೆ ಕನ್ನಡದ ಗ್ರಾಹಕರು ಬೇರೆ ಕಂಪೆನಿಗಳ ಮೊಬೈಲು ಸೇವೆಗೆ ವಲಸೆ ಹೋಗುವುದು ಖಚಿತ.

ವೋಡಾಫೋನ್ ರವರಿಗೆ ಬದಲಾವಣೆಯ ಸಮಯ ಈಗ ಬ೦ದಿದೆ ಎ೦ಬ ಸ೦ದೇಶ ಕೊಡೋಣ.
ಇವರ ಮಿಂಚೆ: vodafonecare.kar@vodafone.com

Rating
No votes yet

Comments