ನಾನಾದೇನು ಹಿಮಾಲಯ !

ನಾನಾದೇನು ಹಿಮಾಲಯ !

ಕವಿತೆ ಒಂದು Instinct. ನಾಲ್ಕು ಹೊತ್ತಗೆಗಳನ್ನು ಓದಿ, ದಾಖಲೆಗಳನ್ನು ಸಂಗ್ರಹಿಸಿ ಲೇಖನ ಬರೆದುಬಿಡಬಹುದು. ಕವಿತೆ ಪ್ರಸವಿಸಲು ಭಾವನೆಗಳು ಬೇಕು. ಮಾತುಗಳು ಎದೆಯಾಳದಿಂದ ಬರಬೇಕು. ಎಲ್ಲರಿಗೂ ಬರುತ್ತವೆ ಆದರೆ ಅದಕ್ಕೆ ಅಕ್ಷರ ರೂಪ ಕೊಡಲು ಗೊತ್ತಿರಬೇಕು!
ಇದು ನನ್ನ ಮೊದಲ ಕವಿತೆ. ಉಳುವಿಯ ಘೋರ ಕಾನನದ ನಡುವೆ ದಾರಿತಪ್ಪಿ ಬಳಲಿದಾಗ ಹೊಳೆದ ಸಾಲುಗಳಿವು. ನಾನು ಬರೆಯದಿದ್ದರೆ ಎಲ್ಲರಿಗೂ ಉಪಕಾರವಾಗುತ್ತದೆ ಎಂದು ಎನಿಸಿದರೆ ದಯವಿಟ್ಟು ಹೇಳಿಬಿಡಿ. ನಿಲ್ಲಿಸಿಬಿಡುತ್ತೇನೆ.

ಅರಿವುದೆಂತು ನೇಸರನ
ಹೆಬ್ಬಾಂದಳಗಳ ಕಾರ್ದೆರೆಯ ಸರಿಸಿ.
ಪುಟಕ್ಕಿಡಲೆಂತು ಹೊನ್ನ
ಇಳೆಯ ಕಡು ಎದೆಯಾಳವ ಬಗೆದು

ಹೆಕ್ಕಿ ತರಲೇ ಹುರಿಗಾಳ
ಘೋಂಡ ಕಾನದ ನಡುವೆ ನುಗ್ಗಿ
ಹುಡುಕಿ ತರಲೇ ಮುತ್ತ
ಕಡಲಾಳದ ಚಿಪ್ಪನೊಡೆದು

ಲಯವಾಗಬೇಕಂತೆ ಹಿಮ
ನಾ ಹಿಮಾಲಯವಾಗಲು
ಮುಸಿದ ಮಂಜ ಸರಿಸಿ
ಸ್ಥರದ ಹಿಮ ಕರಗಿಸಿ
ಭೊರ್ಗಲ್ಲ ನುರಿಸಿದೊಡೆ
ಕಾಣುವೆನೆ ನನ್ನ ನಾನು ?

Rating
No votes yet

Comments