ಸವಿನೆನಪುಗಳು ಬೇಕು ... ಸವಿಯಲೇ ಬದುಕು...
ಮಲೆನಾಡು ಅರಣ್ಯ ಪ್ರದೇಶ . ಗುಂಡಿನ ಸದ್ದು . ಹಕ್ಕಿಗಳು ಹಾರಿ ಹೋಗುವವು . ಒಂದು ಹೆಣ ನೋಡಿದೆ ಎಂದು ಗುಲ್ಲಾಗಿ ಪೋಲಿಸರು ಬಂದು ನೋಡುತ್ತಾರೆ . ಹೆಣ ನಾಪತ್ತೆ . ಮುಂದೆ ?
ಇದು ಇಂದು ಈ-ಟೀವಿಯಲ್ಲಿ ಬೆಳಗ್ಗೆ ೯.೩೦ ಗಂಟೆಗೆ ಪ್ರಸಾರವಾದ ಮತ್ತು ರಾತ್ರಿ ಮತ್ತೆ ೧.೩೦ ಗಂಟೆಗೆ ಪ್ರಸಾರವಾಗಲಿರುವ ಚಿತ್ರ . ಹೆಸರು ಅಪರಿಚಿತ . ಸುರೇಶ್ ಹೆಬ್ಳೀಕರ್ ಮತ್ತು ಶೋಭಾ ಇದ್ದಾರೆ . ಶೋಭಾ ರನ್ನು ಲೇಖಕ , ಪತ್ರಕರ್ತ , ನಿರ್ದೇಶಕ ಪಿ.ಲಂಕೇಶ್ ಬಹುವಾಗಿ ಮೆಚ್ಚುತ್ತಿದ್ದರು.
ಬಹುಶ: ಕಾಶೀನಾಥ್ ಅವರ ನಿರ್ದೇಶನದ ಮೊದಲ ಚಿತ್ರ . ೨೫ ವರ್ಷಗಳ ಹಿಂದಿನ ಚಿತ್ರ .
'ಈ ನಾಡ ಚೆಂದ' ಮತ್ತು 'ಸವಿನೆನಪುಗಳು ಬೇಕು' ಹಾಡುಗಳು ಈ ಚಿತ್ರದಲ್ಲಿವೆ .
ಛಾಯಾಗ್ರಹಣವೂ ಚೆನ್ನಾಗಿದೆ. ಒಳ್ಳೇಯ ಸಸ್ಪೆನ್ಸ್ ಭರಿತ ಚಿತ್ರ .
ನಂತರ ಹಿಂದಿಯಲ್ಲಿ ರಿಮೇಕ್ ಆಗಿದೆ ಅಲ್ಲಿ - ಮಿಥುನ್ ಚಕ್ರವರ್ತಿ ಮತ್ತು ಯೋಗಿತಾಬಾಲಿ ಇದ್ದಾರೆ . ಅದರ ಹೆಸರು ಬೇಶಕ್ .
ರಾತ್ರಿ ಎಚ್ಚರಾದರೆ ೧.೦೦/ ೧.೩೦ ಗಂಟೆಗೆ ಈ-ಟೀವಿ ನೋಡಿ .
Rating
Comments
ಉ: ಸವಿನೆನಪುಗಳು ಬೇಕು ... ಸವಿಯಲೇ ಬದುಕು...
In reply to ಉ: ಸವಿನೆನಪುಗಳು ಬೇಕು ... ಸವಿಯಲೇ ಬದುಕು... by ಶಿವ
ಉ: