ಸಂಪದ ಮಿಲನ ?????????????

ಸಂಪದ ಮಿಲನ ?????????????

ಅಲ್ಲ ಕಣ್ ಸಿವಾ ಅವೊತ್ತು ಅಷ್ಟೊಂದು ಪಿರೀತಿಯಿಂದ ನಮ್ಮೂರಿಗೆ ಬನ್ರಪ್ಪೋ ಬನ್ರಮ್ಮೋ ಅಂತಾ ಕರುದ್ರೆ ಹಿಂಗಾ ನೀವ್ ಮಾಡುದು...
ಬನ್ನೂರು ಕುರಿ , ಕನ್ನಂಬಾಡಿ ಮೀನು ಅದು ಇದು ಅಂತ ಯಾನೇನೋ ಮಾತಾಡ್ಬುಟ್ಟಿ ಮುಖ್ಯವಾದ ಇಚಾರನೇ ಗ್ಯಪ್ತಿ ಕಳ್ಕೊಂಡುಬಿಟ್ರೆ ಯಂಗೆ ಅಂತೀನಿ....
ನೀವು ಬತ್ತೀವಿ ಅಂದ್ರೆ ನಮ್ಗೂ ತಯ್ಯಾರಿ ಮಾಡ್ಕೊಳ್ಳಕ್ಕೆ ಭೋ ಕೆಲ್ಸ ಇರ್ತದಪ್ಪ.. ಏನ್ಮಾಡ್ತಿರಾ ಅಂತ ವಸಿ ಸರಿಯಾಗಿ ಯೋಳ್ಬಾರ್ದಾ??
ವಸಿ ಬಿರ್ನೆ ಯೋಳಿ... ಯಾವತ್ತು ಬರ್ತೀರಾ ಎನ್ಕಥೆ ಅಂತ....
ಪಾಪ ಸ್ರೀಧರಣ್ಣನೂ ಕರುದ್ರು ನಮ್ನೆಲ್ಲ ಅವ್ರುಗೂ ಹಿಂಗೆ ಮಾಡ್ಬುಟ್ರಿ....
ಈಗ ಆ ಪಂಚಾತ್ಕೆ ಎಲ್ಲ ಬ್ಯಾಡ...
ನಮ್ಮೂರ್ಗೆ ಬತ್ತೀರ ಆಸನದ್ ತಾಕ್ ಒಯ್ತೀರಾ ಯೋಳಿ ಮತ್ತೆ...
ನಾನು ಕಾಯ್ತಾವ್ನಿ ನಿಮುತ್ತ್ರಕ್ಕೆ...

ನನ್ನಿ
ದೃಶ್ಯ ಪ್ರದೀಪ :)

Rating
No votes yet

Comments