ಫರ್ಸ್ಟ್ ಟೈಮ್ ಲಂಚ

ಫರ್ಸ್ಟ್ ಟೈಮ್ ಲಂಚ

ನಾನು ಮೈಸೂರ್ ಇನ್ಫೋಸಿಸ್ನಿಂದ ಜಾಲಿಯಾಗಿ ಅಣ್ಣವರ "ಎಂದು ನಿನ್ನ ನೋಡುವೆ ಹಾಡನ್ನ" ಗುನುಗುತ್ತ ಸಿಟಿ ಕಡೆಗೆ ಬರ್ತಾ ಇದ್ದೆ. ಇದ್ದಕ್ಕಿದಂಗೆ ನಮ್ಮ ಟ್ರಾಫಿಕ್ ಪೋಲಿಸ್ ಕೈ ತ್ಹೊರ್ಸ್ದ, ನೋಡುದ್ರೆ ನಾನು ಯಾವ ಹೆಲ್ಮೆಟ್ಟು ಹಾಕಿರಲಿಲ್ಲ ಸರಿ ಎಂಗೂ ತಪ್ಪಿಸಿಕೊಳ್ಳ ಬೇಕಲ್ಲ ಎಂದು ನಾನು ಗಾಡಿನ ಹಿಂದಕ್ಕೆ ತಿರುಗಿಸಿ ವೇಗವಾಗಿ ಬಂದ್ರೆ ಅಲ್ಲಿ ಇನ್ನೊಬ್ಬ ಪೋಲಿಸ್ ನಿಂತಿದ್ರು "ಹೋದ್ಯ ಪಿಶಾಚಿ ಅಂದ್ರೆ ಬಂದ್ಯಾ ಗಾವಸ್ಕ್ಷಿ" ಅಂತ ಸಿಕ್ಕಿ ಹಾಕಿ ಕೊಂಡೆ, ನೋಡುದ್ರೆ ನಾನು ಬಂದಿದ್ದು ಒನ್ ವೇ ಹಾಗಿತ್ತು, ಸರಿ ಜಾಸ್ತಿ ತಕರಾರು ಮಾಡಿದರೆ ಕಷ್ಟ ಅಂತ ಆ ಪೋಲಿಸ್ ಕರ್ಕೊಂಡು, ಮುಂದೆ ಇದ್ದ ಪೋಲಿಸ್ ಕಡೆ ಬಂದೆ ಅವ್ನು ೨೦೦(ಒನ್ ವೇ+ ಹೆಲ್ಮೆಟ್) ಫೈನ್ ಕಟ್ಟಿ ಅಂದ, ಡೀ ಲ್ ಇಲ್ಲ ಅಂದ್ರೆ ೪೦೦, ಇನ್ಸೂರೆನ್ಸ್ ಇಲ್ಲ ಅಂತ ಆದ್ರೆ ೫೦೦ ಅಂತ ಹೇಳಿದ, ಪರವಾಗಿಲ್ಲ ಚೌಕಾಸಿ ಮಾಡೋಣ ಅಂತ ಏನು ಮಾತಾಡದೆ ಸುಮ್ನೆ ಡಿಕ್ಕಿಯಲ್ಲಿ ಪಪೆರ್ಸ್ ಹುಡುಕೂತ ಸ್ವಲ್ಪ ನಾಟಕ ಆಡಿದೆ. ಅಮೇಕೆ ಕೈಯಲ್ಲಿ ಎಷ್ಟು ಅಯ್ತೆ ಅಷ್ಟು ಕೊಟ್ಟು ಹೋಗ್ರಿ ಅಂತ ಹೇಳಿದ.... ಒಂದು ಅರ್ದ ತಾಸು ಆದ್ಮೇಲೆ ಅವ್ನೆ ಯಾಕ್ರೀ ಏನು ಇಲ್ವಾ ಅಂದ... ಅಣ್ಣ ನನ್ನತ್ರ....ನನ್ನ ಹತ್ರ ಒಂದು ನಯ ಪಯ್ಸಾನು ಇಲ್ಲ, ಪೆಪರ್ಸು ಇಲ್ಲ ಅಂದೇ, ನಿಮಗೆ ದುಡ್ಡು ಬೇಕಾದ್ರೆ ನನ್ ಗೆಳೆಯಾನಿಗೆ ಫೋನ್ ಮಾಡಿ ತರ್ಸಬೇಕು ಅಂದೇ, ಸರಿ ಪೆರ್ಮಿಸ್ಸಿಒನ್ ಕೊಟ್ಟ, ಫೋನ್ ಮಾಡಿ ಹೇಳಿದ್ದಕ್ಕೆ ನನ್ ಗೆಳಯ ಒಂದು ಅರ್ಧ ಗಂಟೆ ಬಿಟ್ಟು ಬರ್ತೀನಿ ಅಂದ ಆಗ್ಲೇ ಟೈಮ್ ೭ ಆಗಿತ್ತು, ನಮ್ ಪೋಲಿಸ್ ಅವ್ರ್ಗೂ ಮನೆ ಮಠ ಇರುತ್ತೆ ಅಲ್ವ ಅವ್ರ ಹೆಂಡ್ರು ಮಕ್ಳು ನೆನಪಾಗಿರಬೇಕು ಅದಕ್ಕೆ ಸ್ವಲ್ಪ ದ್ವನಿನ ಜೋರಾಗಿ ಮಾಡಿ "ಬೇಗ ಬರೆಕೆ ಹೇಳ್ರಿ ನಿಮ್ ಗೆಳಯನ್ನ ಆಗಲೇ ಟೈಮ್ ಆಯಿತು ಅಂತ ಬಯ್ಯೋದಕ್ಕೆ ಶುರು ಮಾಡದ ಸರಿ ಸುಮಾರು ೪೫ ನಿಮಿಷಗಳ ಕಾಲ ಹಾಗೆ ಸತಾಯ್ಸಿ ಮೇಲೆ ನನ್ನ ಗಾಡಿ ಜೊತೆಗೆ ಸ್ಟೇಷನ್ಗೆ ಕರ್ಕೊಂಡು ಹೋದ್ರು , ನೋಡುದ್ರೆ ನನ್ ಗೆಳಯ ಅಲ್ಲೇ ಇದ್ದ ೨೦೦ ಗಿಂಬಳ ಕೊಟ್ಟು....ಹೊರಗೆ ಬದ್ರೆ ನನ್ಗೆಲ್ಯ ನಮ್ಮ ಕುಮಾರಣ್ಣಗೆ(ದೇವೇಗೌಡರು ಸನ್ನು) ಫೋನ್ ಮಾಡಿದರೆ ಚೆನಾಗಿರ್ತಿತ್ತು ಅಂದ ಅದಕ್ಕೆ ಯಾಕಣ್ಣ ಸುಮ್ಕೆ ಅವರಿಗೆ ದೊಡ್ಡ ಕೆಲ್ಸಾದಗೆ ಬ್ಯುಸಿ ಅವ್ರೆ ಈತರ ಸಣ್ಣ ವಿಷಯಕ್ಕೆ ಯಾಕೆ ಡಿಸ್ಟರ್ಬ್ ಮಾಡೋದು ಅಂತ ಹೇಳಿ ಸುಮ್ನೆ ಮನೆಗೆ ಬಂದೆ...:) ಜೀವನಾದಗೆ ಫರ್ಸ್ಟ್ ಟೈಮ್ ಪೋಲಿಸ್ಗೆ lunch ತಪ್ಪು ತಪ್ಪು ಲಂಚ ಕೊಟ್ಟಿದು ಅಂತ ಸಂತೋಷ ಆಯಿತು.

Rating
No votes yet

Comments