ಲಿನಕ್ಸಾಯಣ - ೪೯ - ಉಬುಂಟು ೯.೦೪ (ಹೊಸ ಆವೃತ್ತಿ) ಮತ್ತು ಓಪನ್ ಆಫೀಸ್ ನಲ್ಲಿ ಕನ್ನಡ

ಲಿನಕ್ಸಾಯಣ - ೪೯ - ಉಬುಂಟು ೯.೦೪ (ಹೊಸ ಆವೃತ್ತಿ) ಮತ್ತು ಓಪನ್ ಆಫೀಸ್ ನಲ್ಲಿ ಕನ್ನಡ

ಇನ್ನು ಕೆಲವೇ ದಿನಗಳಲ್ಲಿ ಉಬುಂಟು ೯.೦೪ (ಜಾಂಟಿ ಜಕ್ಲೋಪ್/ Jaunty Jacklope) ಬಿಡುಗಡೆಯಾಗಲಿದೆ. ಹತ್ತು ಹಲವು ಹೊಸದಾದ ಹಾಗೂ ಪರಿಷ್ಕರಿಸಿದ ತಂತ್ರಾಂಶಗಳನ್ನು ನಿಮಗಾಗಿ ಈ ಆವೃತ್ತಿ ತರಲಿದೆ.

ಗ್ನು/ಲಿನಕ್ಸ್ ಬಗ್ಗೆ ಆಗಾಗ ಬರೆದು ನಿಮಗೆ ತಿಳಿಸ್ಬೇಕಾದ್ರೆ ಹೊಸದಾಗಿ ಬರುವ ತಂತ್ರಾಂಶಗಳನ್ನು ಮೊದಲು ನನ್ನ ಲ್ಯಾಪ್ಟಾಪ್ ನಲ್ಲಿ ಪರೀಕ್ಷಿಸೋದು ನನ್ನ ಅಭ್ಯಾಸ, ಕಳೆದ ೫ ತಿಂಗಳಿನಿಂದ ಉಬುಂಟು ೯.೦೪ ದ ಬೀಟಾ(Beta) ಆವೃತ್ತಿಯನ್ನು ಬಳಸ್ತಿದ್ದೀನಿ. ಹೀಗೆ ಬಳಸುವಾಗ, ಲಿನಕ್ಸಾಯಣದ್ದೇ ಒಂದು ಲೇಖನ ಬರೆಯುವಾಗ ಓಪನ್ ಆಫೀಸ್ ಬಳಸಿದೆ. ಭಾನುವಾರ ಚರ್ಚೆಯ ಸಮಯದಲ್ಲಿ ಓಪನ್ ಆಫೀಸ್ ನಲ್ಲಿನ ಕೆಲ ಬಗ್ (bug)ಗಳ ಬಗ್ಗೆ ಮಾತಾಡಿದ್ದೇ ಇದಕ್ಕೆ ಒಂದು ಕಾರಣ. ಇರಲಿ ಮತ್ತೊಮ್ಮೆ ಪರೀಕ್ಷಿಸಿ ಬಿಡೋಣ ಅಂತ ಟೈಪ್ ಮಾಡ್ಲಿಕ್ಕೆ ಶುರುಮಾಡಿದೆ. ಆಗ ನನಗೇ ಆಶ್ಚರ್ಯ. ಇತರೆ ಟೆಕ್ಸ್ಟ್ ಎಡಿಟರ್ಗಳಂತೆ ಆರಾಮಾಗಿ ನಾನು ಕನ್ನಡ ಟೈಪಿಸ್ಲಿಕ್ಕೆ ಸಾಧ್ಯ ಆಯ್ತು.ಅದರ ಒಂದು ಸ್ಕ್ರೀನ್ ಶಾಟ್ ಕೆಳಗಿದೆ ನೋಡಿ. ಪ್ಯಾಂಗೋ ಬಗ್ ಇತ್ಯಾದಿಗಳು ಇಲ್ಲಿ ಕಾಣ್ತಾಇಲ್ಲ ಅನ್ನೊದು ಇನ್ನೂ ಸಂತಸದ ವಿಷಯ

ಉಬುಂಟು ೯.೦೪ ಯಾವಾಗ ನಿಮಗೆಲ್ಲ ಡೌನ್ಲೋಡ್ಗೆ ಸಿಗುತ್ತೆ ಅನ್ನೋದನ್ನ ಕೆಳಗಿನ ಚಿತ್ರ ತೋರಿಸುತ್ತದೆ.

ಉಬುಂಟು ೯.೦೪ ನಲ್ಲಿ ಏನೆಲ್ಲಾ ವಿಶೇಷತೆಗಳಿವೆ ಅನ್ನೋದನ್ನು ಇನ್ನೊಂದು ಲೇಖನದಲ್ಲಿ ತಿಳಿಸ್ತೇನೆ.

Rating
No votes yet

Comments