ಇದು - ಮಣಿಪಾಲದ "ಎಂಡ್ ಪಾಯಿಂಟ್"

ಇದು - ಮಣಿಪಾಲದ "ಎಂಡ್ ಪಾಯಿಂಟ್"

ಈ ಸುಂದರ "ಪಾರ್ಕ್" ಯಾವ ಊರಿನಲ್ಲಿದೆ? ಇದರ ಬಗ್ಗೆ ಆ ಮೇಲೆ ಬರೆಯುತ್ತೇನೆ. ಇದು ಹೊಸದಾಗಿ ನಿರ್ಮಿಸಲ್ಪಟ್ಟಿದ್ದು. ಕರ್ನಾಟಕದ ಒಳಗೇ ಇದೆ. ೮ ಎಪ್ರಿಲ್ ೨೦೦೯, ಬುಧವಾರ ಈ "ಪಾರ್ಕ್" ಮಣಿಪಾಲದ "ಎಂಡ್ ಪಾಯಿಂಟ್" ನಲ್ಲಿದೆ. ಬರೇ ಕಲ್ಲು ಮುಳ್ಳುಗಳಿಂದ ತುಂಬಿದ್ದ ಆ ಗುಡ್ಡೆಯಲ್ಲಿ ಇಷ್ಟೊಂದು ಸುಂದರವಾದ "ಪಾರ್ಕ್" ನಿರ್ಮಾಣವಾಗಬಹುದು ಎಂದು ಯಾರೂ ಊಹಿಸಿರಲೇ ಇಲ್ಲ. ಅಲ್ಲಿ ಒಂದೂವರೆ ಕಿಲೋಮೀಟರ್ ಉದ್ದದ "ಜಾಗಿಂಗ್ ಟ್ರ್ಯಾಕ್" ಇದೆ. ಮುಂಜಾನೆ ಮತ್ತು ಸಾಯಂಕಾಲ ವಾಯುವಿಹಾರಕ್ಕೆ ಹೋಗಲು ಪ್ರಶಸ್ತವಾದ ಸ್ಥಳ. ಇಲ್ಲಿಂದ ಸೂರ್ಯಾಸ್ತಮಾನದ ದೃಶ್ಯ ಎಷ್ಟು ರಮಣೀಯವೋ ಸೂರ್ಯೋದಯದ ದೃಶ್ಯವೂ ಅಷ್ಟೇ ಮನಮೋಹಕ. ಈ ನೋಟಗಳನ್ನು ಸವಿಯುವುದಕ್ಕಾಗಿ ಅಲ್ಲಲ್ಲಿ ಕೂರುವ ವ್ಯವಸ್ಥೆಗಳನ್ನು ಮಾಡಲಾಗಿದೆ. ಇಲ್ಲಿಂದ ಪಶ್ಚಿಮಕ್ಕೆ ನೋಡಿದರೆ ಉಡುಪಿ ನಗರ ಮತ್ತು ಅರಬ್ಬೀ ಸಮುದ್ರದತ್ತ ಕಣ್ಣು ಹಾಯುತ್ತದೆ. ಉತ್ತರದ ಇಳಿಜಾರಿನಲ್ಲಿ ಸುವರ್ಣ ನದಿ ಹರಿಯುತ್ತಿರುತ್ತದೆ. ಪೂರ್ವದ ಇಳಿಜಾರಿನಲ್ಲಿ ಪರ್ಕಳ ಪೇಟೆ ಇದೆ. ದಕ್ಷಿಣಕ್ಕೆ ಮಣಿಪಾಲದ ಕಟ್ಟಡಗಳು ಕಣ್ಣಿಗೆ ಬೀಳುತ್ತವೆ. ಇಲ್ಲಿಗೆ ಹೋಗುವ ದಾರಿಯಲ್ಲೇ ಉಡುಪಿ ಜಿಲ್ಲಾಧಿಕಾರಿಗಳ ಕಛೇರಿ ನಿರ್ಮಾಣವಾಗುತ್ತಲಿದೆ. ವಿಶಾಲವಾದ ಆಟದ ಮೈದಾನವೂ ಇದೆ. ಆಟದ ಮೈದಾನಕ್ಕೆ ಹೊನಲು ಬೆಳಕಿನ ವ್ಯಸ್ಥೆಯನ್ನೂ ಒದಗಿಸಲಾಗಿದೆ. ಮಣಿಪಾಲ ಎನ್ನುವ, ಮುರಕಲ್ಲು ಮತ್ತು ಅಜ್ಜಿಮುಳ್ಳುಗಳಿಂದ ಆವೃತ್ತವಾಗಿದ್ದ ಗುಡ್ಡೆ ಇಂದು ಅಂತರರಾಷ್ಟ್ರೀಯ ಮಟ್ಟದ ನಗರವಾಗಿ ಕಂಗೊಳಿಸುತ್ತಿರುವುದನ್ನು ನೋಡುವಾಗ, ನನ್ನ ಮನಸ್ಸು, ಮಣಿಪಾಲದ ಶಿಲ್ಪಿ ಪದ್ಮಶ್ರೀ ಡಾ. ತೋನ್ಸೆ ಮಾಧವ ಅನಂತ ಪೈಯವರನ್ನು (ಡಾ. ಟಿ. ಎಂ. ಎ. ಪೈ) ನೆನೆಯದೇ ಇರುವುದಿಲ್ಲ. ಅವರಿಗೆ ಅನಂತಾನಂತ ನಮನಗಳು. ಉಡುಪಿಯತ್ತ ಹೋದರೆ ಇಲ್ಲಿಗೆ ಭೇಟಿ ಕೊಡುವುದನ್ನು ಮರೆಯದಿರಿ. ಸುವರ್ಣ ನದಿಯ ಚಿತ್ರಗಳು ಇಲ್ಲಿವೆ http://sampada.net/image/18832 http://sampada.net/image/18833 http://sampada.net/image/18834

Rating
No votes yet

Comments