ಮಿನಗೆ ನಕ್ಕಡ ಷಾಬೆ ತೊಗ್ಗಾ?

ಮಿನಗೆ ನಕ್ಕಡ ಷಾಬೆ ತೊಗ್ಗಾ?

ಯಾನಿ ಥಕೆ

ಟೋಮುಲಾಕು ಟಾಕುಯಾನಿ

ಟೇಪೆ ದೀಬಿ ಟಾದುಗಾವ

ಟಾಸೆ ಡುಮ್ತ ದೊಮ್ನ ಡಮ್ಕು ತಿಮ್ನು ಟಿತ್ತಿಬು|

ಟೋತಿ ಬೊಯ್ಯ ಟಾಸೆ ಡುಮ್ತಿ

ದಿಮ್ನ ಡಯಿಬೆ ಟೋಮುಲಾಕ

ಡಬಿದು ಡೊಮ್ಕು ಣ್ರಾಪ ಟಿತ್ತಿಬು||

 

ಸಂಪದಿಗರೆ...ನನ್ನ ಬಾಲ್ಯದ ಒಂದು ನೆನಪ ಸೊಗಡ ನಿಮ್ಮೊಡನೆ ಹಂಚಿಕೊಳ್ಳಬಯಸುತ್ತೇನೆ. ಅದುವೇ ನಕ್ಕಡ ಷಾಬೆ. ಹಾಗೆಂದರೇನು ಎಂದು ಬುದ್ದಿವಂತರಾದ ನೀವು ಮೇಲಿನ ಪದ್ಯವನ್ನು ಓದುತ್ತಲೇ ಅರ್ಥ ಮಾಡಿಕೊಂಡಿರುವಿರಿ ಎಂದು ನಾನು ಭಾವಿಸುವೆ.

ನಮ್ಮ ಕನ್ನಡ ಆಡು ಮಾತಿನ ಶಬ್ಧಗಳ ಉಚ್ಚಾರಣೆಯನ್ನು ತಿರುಗ ಮುರುಗ ಮಾಡಿ ಮಾತನಾಡುವುದೇ ನಕ್ಕಡ ಷಾಬೆ. ಇಲ್ಲಿ ಉಚ್ಚಾರಣೆಯನ್ನು ತಿರುಗ ಮುರುಗ ಮಾಡಬೇಕು. ಅಕ್ಷರಗಳನ್ನಲ್ಲ ಎಂಬುದನ್ನು ನೆನಪಿನಲ್ಲಿಡಬೇಕು. ಉದಾ: ಬೆಂಗಳೂರು ಎನ್ನುವುದು ನಕ್ಕಡ ಷಾಬೆಯಲ್ಲಿ ಗೆಂಬರೂಳು ಆಗುತ್ತದೆ. ರುಳೂಗಬೆಂ ಆಗುವುದಿಲ್ಲ. ಇಂತಹ ರಚನೆ ಕಷ್ಟ. ಆದರೆ ಸುಲುಭವಾಗಿ ಕಂಡು ಹಿಡಿಯಬಹುದು. ಅದರ ಬದಲಿಗೆ ಎರಡು-ಮೂರು ಕ್ಷರಗಳನ್ನು ತಿರುವು ಮುರುವು ಮಾಡಿ ಹೇಳುವುದು ಸುಲುಭವಾಗುತ್ತದೆ. ನಕ್ಕಡ ಷಾಬೆಯನ್ನು ವೇಗವಾಗಿ ಮಾತ್ಗ್ತನಾಡಿದಾಗ, ಅದು ಪರಿಪೂರ್ಣ ಅಪರಿಚಿತ ಭಾಷೆ ಎಂದು ಅನಿಸುತ್ತದೆ. ನಾವು ಕೆಲವರು ಮಾತ್ರ ಈ ಭಾಷೆಯನ್ನು ಕಲಿತು ಮಾತನಾಡುತ್ತಿದ್ದೆವು. ಯಾರಿಗಾದರೂ ಬೈಯ್ಯಬೇಕಾದರೆ, ಟೀಕೆ ಟಿಪ್ಪಣಿಗಳನ್ನು ಮಾಡಬೇಕಾದರೆ, ಗುಟ್ಟಿನ ವಿಷಯಗಳನ್ನು ಮಾತನಾಡಿಕೊಳ್ಳಬೇಕಾದರೆ ನಕ್ಕಡ ಷಾಬೆಯನ್ನು ಬಳಸುತ್ತಿದ್ದೆವು. ಇದನ್ನು ಸದಾ ಬಳಸುತ್ತಿರಲಿಲ್ಲ್ಲ. ಏಕೆಂದರೆ ನಿಮ್ಮಂತಹ ಬುದ್ಧಿವಂತರು ಇದನ್ನು ಕಲಿತುಕೊಂಡು ಬಿಟ್ಟರೆ ನಮಗೇ ತೊಂದರೆ ಅಲ್ಲವೆ!? :)

ಮೇಲೆ ಬರೆದಿರುವ ನಕ್ಕಡ ಷಾಬೆಯ ಪದ್ಯವನ್ನು ರಚಿಸಿದವರು ಹಿರಿಯ ವಿಜ್ಞಾನ ಬರಹಗಾರರು, ಸಂಗೀತ ತಜ್ಞರು, ರಾಜ್ಯೋತ್ಸವ ಪ್ರಶಸ್ತಿ ವಿಜೇತರು ಆದ ಶ್ರೀಜಿ.ಟಿ.ನಾರಾಯಣರಾಯರು. ಈ ಮೇಲಿನ ಪದ್ಯವು ಇಂದಿಗೆ ಸುಮಾರು ೭೫ ವರ್ಷಗಳ ಹಿಂದೆ ಪ್ರಕಟವಾದ ಒಂದು ಮಗ್ಗಿ ಪುಸ್ತಕದಲ್ಲಿದೆಯಂತೆ. ಅದನ್ನು ನಕ್ಕಡ ಷಾಬೆಗೆ ಪರಿವರ್ತಿಸಿ ತಾಳಬದ್ಧವಾಗಿ ವಾಚಿಸಿದಾಗ ಮಕ್ಕಳಿಗೆ ಖುಷಿಯೋ ಖುಷಿ!! :)

ಅಕ್ಕಪಕ್ಕದಲ್ಲಿ ಯಾರೂ ಇಲ್ಲವೆಂದರೆ, ಒಮ್ಮೆ ಜೋರಾಗಿ ಪದ್ಯವನ್ನು ಓದಿ. ಅದರೆ ಮಜಾ ಏನು ಎಂಬುದು ನಿಮಗೇ ತಿಳಿಯುತ್ತದೆ. :) 

ಮೇಲಿನ ಪದ್ಯದ ಮೂಲ ರೂಪ ಈ ಕೆಳಕಂಡಂತಿದೆ.

ನಾಯಿ ಕಥೆ

ಮೋಟುಕಾಲು ಕಾಟು ನಾಯಿ

ಪೇಟೆ ಬೀದಿ ದಾಟುವಾಗ

ಸಾಟೆ ತುಂಡನೊಂದ ಕಂಡು ನಿಂತು ಬಿಟ್ಟಿತು|

ತೋಟಿಯೊಬ್ಬ ಸಾಟೆ ತುಂಡಿ

ನಿಂದ ಬಡಿಯೆ ಮೋಟುಕಾಲ

ಬಡಿದುಕೊಂಡು ಪ್ರಾಣ ಬಿಟ್ಟಿತು||

ಪಂಸಗಿರದು ನಿಯ್ಯು ದುಮ್ನೆ ನಕ್ಕಡ ಷಾಬೆಯಲ್ಲಿ ತಾಮು ತಕೆ ಡಾಮ್ತಾರ ಡೋನ ಕೇಬಾದಿಗೆ.

-ಸೋನಾ

www.yakshparashne.org

 

Rating
No votes yet

Comments