ಮರೆಯದ ಹಾಡು

ಮರೆಯದ ಹಾಡು

ನಿನ್ನೆ ಬೆಳಿಗ್ಗೆ ಆಫೀಸಿಗೆ ಕಾರಿನಲ್ಲಿ ಹೋಗುತ್ತಿರುವಾಗ ಎಫ್ ಎಮ್ ಕಾಮನಬಿಲ್ಲು ೧೦೧.೩ರಲ್ಲಿ ಬರುವ ಚಿತ್ರಗೀತೆಗಳನ್ನು ಕೇಳ್ತಿದ್ದೆ.
ಅದರಲ್ಲಿ ಒಂದು ಹಾಡು ಬರ್ತಿತ್ತು. ಈ ಹಾಡು ಕೇಳಿ ಬಹಳ ದಿನಗಳಾಗಿದ್ದವು. ಈ ಹಾಡು ಬಂದೊಡನೆಯೇ Volume ಜೋರು ಮಾಡಿದೆ.
ಈ ಹಾಡನ್ನು ಕೇಳ್ತಿದ್ರೆ ಕೇಳ್ತಾನೇ ಇರ್ಬೇಕು ಅಂತ ಅನ್ಸುತ್ತೆ. ಅಷ್ಟು ಚೆನ್ನಾಗಿದೆ ಈ ಹಾಡು. ಯಾವುದೋ ಲೋಕಕ್ಕೆ ಕರೆದೊಯ್ಯುವ ಶಕ್ತಿ ಈ ಹಾಡಿಗಿದೆ.

ಜಿ. ಕೆ. ವೆಂಕಟೇಶ್ ಅವರ ಸಂಗೀತ ತುಂಬಾ ಇಂಪಾಗಿದೆ.
ಆರ್. ಎನ್. ಜಯಗೋಪಾಲ್ ಅವರ ಸಾಹಿತ್ಯ ಕೂಡ ತುಂಬಾ ಚೆನ್ನಾಗಿದೆ.
ಎಸ್. ಜಾನಕಿ ಅವರ ಗಾಯನ ಸುಮಧುರವಾಗಿದೆ.

ನಿನ್ನೆಯಿಂದ ಈ ಹಾಡನ್ನು ಗುನುಗುತ್ತಿರುವೆ.
ಯಾವ ಹಾಡು ಅಂತ ಯೋಚನೆ ಮಾಡ್ತಿದ್ದೀರಾ?

ಚಿತ್ರ: ಮರೆಯದ ಹಾಡು
ಸಂಗೀತ: ಜಿ. ಕೆ. ವೆಂಕಟೇಶ್
ಸಾಹಿತ್ಯ: ಆರ್. ಎನ್. ಜಯಗೋಪಾಲ್

ಹಾಡಿನ ಸಾಹಿತ್ಯ ಕೆಳಗೆ ಬರೆದಿರುವೆ.

||ಸುಖದಾ ಸ್ವಪ್ನಗಾನ ಎದೆಯಾ ಆಸೆತಾನ|
||ಒಲವಾ ಭಾವವೀಣಾ ನೀ ಮಿಡಿಯೆ ನಾ ನುಡಿಯೆ ಅದುವೆ ಜೀವನ..||

||ಸ್ವರವೇಳು ಕಲೆತ ರಾಗ ಸ೦ಪೂರ್ಣ ಜೀವರಾಗ|
||ಉಸಿರೆರಡು ಬೆರೆತ ವೇಗ ಅನುರಾಗ ಭಾವಯೋಗ||
||ಜನುಮ ಜನುಮದಾ ಬ೦ಧಾ ಅನುಬ೦ಧಾ ನಮ್ಮದೂ|
||ತಪಸಿನಾ ಫಲವಿದೂ ದೈವದಾ ವರವಿದೂ ಆ..ಆ..||೧||

||ಶೃತಿಲಯದ ಮಿಲನದಲ್ಲೇ ದೈವೀಕನಾದ ಲೀಲೆ|
||ಸತಿಪತಿಯ ಒಲವಿನಲ್ಲೇ ಸ೦ಸಾರ ನೌಕೆ ತೇಲೆ||
||ನೆನಪಿನ ತೋಟದ ಮಲ್ಲೇ ಹೂ ಮಾಲೆ|
||ಎ೦ದಿಗೂ ಬಾಡದಾ ಹೂವಿದು ಮುಗಿಯದಾ ಹಾಡಿದು ಆ..ಆ..||೨||

||ಸವಿ ಮುರಳಿ ಕರೆದ ವೇಳೆ ಆ ರಾಧೆ ಓಡಿದ೦ತೆ|
||ಮಾಧವನ ನೆನಪಿನಲ್ಲೇ ಆ ಮೀರಾ ಹಾಡಿದ೦ತೆ||
||ನಿನ್ನೊಲವಿನಲ್ಲೆ ಮಿ೦ದೂ ನಾನಿ೦ದೂ|
||ಹಾಡುವೇ ನನ್ನನೇ ಮರೆಯುವೇ ನಿಮ್ಮಲೇ ಬೆರೆಯುವೆ ಆ..ಆ..||೩||

ಈ ಹಾಡು ನಿಮಗೂ ಇಷ್ಟವಾಗಬಹುದು ಎಂದು ತಿಳಿದು ಹಾಡಿನ ಸಾಹಿತ್ಯವನ್ನು ಇಲ್ಲಿ ಪೋಸ್ಟ್ ಮಾಡಿದ್ದೀನಿ.

ಅಂತರ್ಜಾಲದಲ್ಲಿ ಈ ಹಾಡಿನ .mp3 Format ಮತ್ತು ಈ ಹಾಡಿನ ವೀಡಿಯೋ ಹುಡುಕುತ್ತಿರುವೆ. ಆದರೆ ಸಿಗುತ್ತಿಲ್ಲ. :(

ಈ ಹಾಡಿನ .mp3 Format ಯಾರ ಬಳಿಯಾದರೂ ಇದ್ದರೆ ಇಲ್ಲಿ ಹಂಚಿಕೊಳ್ಳಿ.

-ಅನಿಲ್.

Rating
No votes yet

Comments