ನನ್ನ ಚೊಚ್ಚಲ ಕವನ ( ನನಗೆ ಜ್ಙಾಪಕವಿರುವಂತೆ)

ನನ್ನ ಚೊಚ್ಚಲ ಕವನ ( ನನಗೆ ಜ್ಙಾಪಕವಿರುವಂತೆ)

ಆಸು ಹೆಗ್ಡೆಯವರು ಈವತ್ತು ಬ್ಲಾಗ್ನಲ್ಲಿ ಒಂದು ಕವನ ಹಾಕಿ ಚಿಕ್ಕ ವಯಸ್ಸಿನಲ್ಲಿ ಬರೆದದ್ದು ಅಂದಾಗ ಜ್ಙಾಪಕ ಬಂತು. ನಾನು 6-7ನೇ ಕ್ಲಾಸ್ನಲ್ಲಿರೋವಾಗ ಬಾಯಿಗ್ ಬಂದಿದ್ದು ಗೀಚ್ತಾ ಇದ್ದೆ.
ಆವಾಗ ಬರೆದು ಹರಿದು ಹಾಕಿದ ಕವನ(!!)ಗಳೆಷ್ಟೋ?
ಯಾವುದೂ ನನ್ನ ಹತ್ರ ಇಲ್ಲ. ಆದ್ರೆ ಈ ಚುಟುಕ ನನಗೆ ತುಂಬಾ ಚೆನ್ನಾಗಿ ಜ್ನಾಪಕ ಇದೆ. ಯಾಕೆ ಅಂತ ತಿಳಿಯೋಕೆ ಕವನದ ಕೆಳಗೆ ನೋಡಿ.

ಮಳ್ಳಿ.. ಮಿಂಚುಳ್ಳಿ.
ನಕ್ಕಾಗ ನೀನು ಮಿಂಚಿನ ಬಳ್ಳಿ..
ಏನ್ ಚಂದ ನಿನ್ ಕೆನ್ನೆ ಮೇಲಿರೋ ಗುಳಿ!
ಇಷ್ಟ್ ಅಂದಾನ ಎಲ್ಲೇ ಕದ್ದೆ?? ಕಳ್ಳೀ!!

ಓದಿ ನಗು ಬರ್ತಾ ಇದ್ಯ?
ಇದನ್ನ ಒಂದು ನೋಟ್ ಪುಸ್ತಕದ ಕೊನೆ ಹಾಳೆಲಿ ಬರೆದು ಇಟ್ಟಿದ್ದೆ. ಅದು ಹೇಗೊ ನಮ್ ಗಣಿತ ಮಾಸ್ಟರ್ ಶಂಭುಲಿಂಗು ಅವ್ರಿಗೆ ಸಿಕ್ಬಿಟ್ಟಿತ್ತು. ಅವರು ಅದನ್ನ ಎಲ್ಲ 'ಮಿಸ್'ಗಳಿಗೂ ತೋರ್ಸಿ ನಗ್ತಾ ಇದ್ರು. ಚಡ್ಡಿ ಹಾಕಳಕ್ ಬರಲ್ಲ ಹುಡುಗೀರ್ ಮೇಲೆ ಹಾಡ್ ಬರೀತಿಯ ಅಂತ ಎಲ್ರು ಗೇಲಿ ಮಾಡ್ತಾ ಇದ್ರು.. ನಾನಂತು ನಾಚ್ಕೊಂಡ್ ಮಾತೇ ಬರ್ದೆ ತಲೆ ಬಗ್ಗಿಸ್ಕೊಂಡ್ ಗಿಂಚ್ತಿದ್ದೆ.
ನಮ್ ಮನೇಲು ಎಲ್ಲಾರ್ಗು ಗೊತ್ತಾಯ್ತು. ನನ್ ತಂಗಿ ಈಗ್ಲು ರೇಗಿಸ್ತಿರ್ತಾಳೆ.. ಯಾರ ಮೇಲೆ ಈ ಹಾಡು ಬರ್ದಿದ್ದು ಅಂತ ಮಾತ್ರ ಯಾರಿಗು ಗೊತ್ತಾಗ್ಲಿಲ್ಲ..

Rating
No votes yet

Comments