ಧರ್ಮ ಮತ್ತು ಮತ ಎರಡೂ ಸಮಾನಾರ್ಥಕ ಪದಗಳೇ?

ಧರ್ಮ ಮತ್ತು ಮತ ಎರಡೂ ಸಮಾನಾರ್ಥಕ ಪದಗಳೇ?

ಪ್ರಸ್ತುತದಲ್ಲಿ ನನಗೆ ಧರ್ಮ ಅನ್ನುವ ಪದವು ಬಳಕೆಯಾಗುತ್ತಿರುವ ರೀತಿಯ ಬಗ್ಗೆ ಸ್ವಲ್ಪ ಅಸಮಾಧಾನವಿದೆ. ಧರ್ಮವನ್ನು ಮತ  (ರಿಲಿಜನ್) ಅನ್ನುವ ಪದಕ್ಕೆ  ಸಮಾನಾಂತರವಾಗಿ ಉಪಯೋಗಿಸ್ತಾ ಇರೋದನ್ನ ಎಷ್ಟೋ ಕಡೆ ನೋಡಿರ್ತೀರಿ.  ಧರ್ಮ ಅಂದರೆ ಕರ್ತವ್ಯ, a code of conduct ಅಂತ ಅರ್ಥೈಸಿದರೆ ಸರಿಹೋಗದೆ?  ಹಿಂದೂ (ಅಥವಾ ಇನ್ಯಾವುದೇ ಹೆಸರಿನ) ಜೀವನ ಪದ್ಧತಿಯು ಧರ್ಮದ  ಮೂಲ ರೂಪದಲ್ಲಿ ಶುರುವಾಗಿ ಕಾಲಕ್ರಮೇಣ ವಿಭಿನ್ನ ಮತಗಳಾಗಿ ಕವಲಾಗಿ ಒಡೆದು ತೆಳುವಾಯಿತು ಅಂತ ನನ್ನ ಅನಿಸಿಕೆ. ನಾನು ಅರ್ಥೈಸಿದ್ದು ಸರಿಯಲ್ಲವೆನಿಸಿದರೆ ತಿಳಿದವರು ದಯವಿಟ್ಟು ಹೇಳಿ, ತಿದ್ದುಕೊಳ್ಳುತ್ತೇನೆ.

--------------------------

ಚರ್ಚೆಯ ಫಲಶ್ರುತಿ:
Religion = ಧರ್ಮ - ಒಪ್ಪುತ್ತೇನೆ
ಧರ್ಮ= ಮತ  -  ಒಪ್ಪುವುದಿಲ್ಲ - ( ಒಪ್ಪುವ ಅಗತ್ಯ ಕಾಣಲಿಲ್ಲ ಅಷ್ಟೇ, ಹೆಚ್ಚಿನವರಿಗೆ ಧರ್ಮ, ಮತ ಎಂಬ ಪದಗಳು ಬೇರೆ ಬೇರೆ ಅರ್ಥ ಕೊಡುವಾಗ ಎರಡೂ ಒಂದೇ ಎಂದು ಭಾವಿಸುವ ಔಚಿತ್ಯವೇನು? ಭಾಷೆಯ ಸಂಪತ್ತನ್ನು ಹೆಚ್ಚಿಸುವ ಎರಡು ಅರ್ಥ ಸೂಚಿಸುವ ಎರಡು ಪದಗಳು ಇರುವಾಗ, ಅವನ್ನು ಒಂದರ ಬದಲಾಗಿ ಇನ್ನೊಂದು ಎನ್ನುವಂತೆ  ಉಪಯೋಗಿಸಿ ಭಾಷೆಯ ಬಲವನ್ನು ಕುಗ್ಗಿಸಬೇಕಾಗಿಲ್ಲ)

ಇಲ್ಲಿಗೆ ಈ ಚರ್ಚೆ ನಿಲ್ಲಿಸೋಣವೇ?  ನಮಸ್ಕಾರ

ಶಾಮಲ

 

Rating
Average: 1 (1 vote)

Comments