ಬಿಸಿಲಿನ ಬೇಗೆ

ಬಿಸಿಲಿನ ಬೇಗೆ

Comments

ಬರಹ

ಉತ್ತರ ಕರ್ನಾಟಕದಲ್ಲಿ ಬಿಸಿಲು ಸಿಕ್ಕಾಪಟ್ಟೆ ಜಾಸ್ತಿಯಾಗಿದೆ ಎಂದು ಇವತ್ತಿನ ಬೆಳಿಗ್ಗೆಯ ಪತ್ರಿಕೆಯಲ್ಲಿ ಹಲವರು ಓದಿರುತ್ತೀರಿ. ಬೆಂಗಳೂರಿನಲ್ಲೇ ಶೆಖೆ ಹತ್ತಿರುವಾಗ ಉತ್ತರ ಕರ್ನಾಟಕದ ಪರಿಸ್ಥಿತಿ ಅರ್ಥವಾಗದೆ ಇರದು. ಆದರೆ ನನಗೆ ಕಾಡುವ ಪ್ರಶ್ನೆಯೆಂದರೆ ಕಳೆದ ಹಲವು ವರ್ಷಗಳಲ್ಲಿ ಮಾತ್ರ ಹೀಗಾಗುತ್ತಿದೆಯೋ, ಮುಂಚೆಯೂ ಹೀಗೆಯೇ ಇತ್ತೊ ಎಂಬುದು.

ಮುಂಚೆಯೂ ಹೀಗಿತ್ತು ಎಂಬುದಾದರೆ ಹಿಂದಿನವರು ಇದಕ್ಕೇನು ಮಾಡುತ್ತಿದ್ದರು?

ಮುಂಚೆ ಹೀಗಿರಲಿಲ್ಲ ಎಂಬುದಾದರೆ, ಇತ್ತೀಚೆಗೆ ಹೀಗಾಗುವುದಕ್ಕೆ ಕಾರಣವೇನು? ಮರಗಳು ಕಡೆದದ್ದೊ, ಕಾಡು ನಾಶವಾಗಿದ್ದೊ ಅಥವ ಗ್ಲೋಬಲ್ ವಾರ್ಮಿಂಗ್ ತನ್ನ ಪ್ರಭಾವ ಬೀರುತ್ತಿದೆಯೊ. ಅಥವ ನದಿಗಳ ಅವನತಿ ಇದರ ಹಿಂದಿರುವ ಕಾರಣವೊ.

ನಿಮ್ಮೆಲ್ಲರ ಅಭಿಪ್ರಾಯಗಳೇನೇನು? ತಿಳಿಯುವ ಕುತೂಹಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet