ಮರೆಯಾದ ಕೊಂಡಿ...

ಮರೆಯಾದ ಕೊಂಡಿ...

ಪೇಪರ್ ನಲ್ಲಿ ಮೂಲೆಯಲ್ಲಿದೆ ಆ ಸುದ್ದಿ ಶಕ್ತಿ ಸಾಮಂತ್ ಇನ್ನಿಲ್ಲ ಎಂದು. ಹೊಸ ಪೀಳಿಗೆಗೆ ಇವರ ಬಗ್ಗೆ ಅಷ್ಟು ಗೊತ್ತಿರಲಿಕ್ಕಿಲ್ಲ. ರಾಜೇಶಖನ್ನನಿಗೆ ಸುಪರ್ ಸ್ಟಾರ್ ಪಟ್ಟ ತಂದುಕೊಟ್ಟವ ಹಾಗೂ ಅನೇಕ ಹಿಟ್ ಸಿನೆಮಾ ಕೊಟ್ಟವರು ಶಕ್ತಿ ಸಾಮಂತ್. ಮೂಲತಃ ಬಂಗಾಳಿ ಬಾಬು ಆ ಪ್ರದೇಶದ ಸೊಬಗು, ಸಂಗೀತ
ಎಲ್ಲ ಉಣಬದಿಸಿದರು. ಸಂಗೀತ ಇವರ ಸಿನೇಮಗಳ ಪ್ರಮುಖ ಆಕರ್ಷಣೆ. ಹೆಚ್ಚಿನ ಚಿತ್ರಗಳಿಗೆ ಪಂಚಮ್ ಅಂದ್ರೆ ಆರ್ ಡಿ ಬರ್ಮನ್ ಸಂಗೀತ.
ಆ ದಿನಗಳ ಕಾಂಬಿನೇಶನ್ ನೋಡಿ ಶಕ್ತಿ ಸಾಮಂತ್ ಚಿತ್ರ, ತೆರೆ ಮೇಲೆ ರಾಜೇಶಖನ್ನ, ಪಂಚಮ್ ಸಂಗೀತ, ಆನಂದ ಬಕ್ಷಿ ಬರೆದ ಹಾಡು, ಕಿಶೋರ್ ಗಾಯನ.
ಸದಾಕಾಲ ನೆನಪಿಡುವ ಕಾಂಬಿನೇಶನ್-----"ಚಿಂಗಾರಿ ಕೋಯಿ ಭಡಕೆ..."," ಯೇ ಶಾಮ್ ಮಸ್ತಾನಿ...",ಆತೆ ಜಾತೆ ಖುಬಸೂರತ್..","ಕುಛ್ ತೋ ಲೋಗ್ ಕಹೆಂಗೆ.." ಮುಂತಾದ ಹಾಡುಗಳು ಅಮರ. ಶಕ್ತಿ ಸಾಮಂತ್ ಒಮ್ಮೆ ’ಜಯಮಾಲಾ’ದಲ್ಲಿ ಮಾತನಾಡುತ್ತ ಹೇಳಿದ್ದರು. ಹಾಡುಗಳು ನಮ್ಮ ಸಿನೇಮಾಗಳ
ಆತ್ಮಇದ್ದ ಹಾಗೆ. ನಿಜವೇ ಹಾಡುಗಳಿಲ್ಲದ ಸಿನೇಮಾಗಳು ಸ್ವಲ್ಪ ಬೋರೆ.... ಅವರ ಚಿತ್ರದ ಅನೇಕ ಹಾಡು ಕಿಶೋರ್,ರಫಿ ಹಾಡಿದ್ದಾರೆ ಆದರೆ ಮುಕೇಶ್ ಹಾಡಿದ "ಜಿಸ್ ಗಲಿ ಮೇ ತೇರಾ ಘರ್ ನ ಹೋ ಬಾಲಮಾ..." ಸ್ವತಃ ಶಕ್ತಿ ಸಾಮಂತ್ ಗೆ ಪ್ರಿಯವಾದ ಹಾಡು.

ಅವರ ಚಿತ್ರಗಳು ಒಂಥರಾ ಭಾವನಾತ್ಮಕ. ಆರಾಧನಾದಲ್ಲಿ ವಿಮಾನಇಳಿದು ಬರುವ ಮಗನ ಮುಖ ತದೇಕವಾಗಿ ನೋಡುವ ತಾಯಿ, ಅಮರ್ ಪ್ರೇಮ್ ಚಿತ್ರದಲ್ಲಿ ಗುರ್ಗಾ ಪೂಜೆಯದಿನ ತನ್ನ"ತಾಯಿ"ಯನ್ನು ಟಾಂಗಾದಲ್ಲಿ ಕೂಡಿಸಿಕೊಂಡು ಹೋಗುವ ಮಗ, ಕಟೀ ಪತಂಗ ಚಿತ್ರದ ಬಿಳಿಸೀರೆ ಧರಿಸಿದ
ಹೆಣ್ಣಿನ ತೊಳಲಾಟ.....ಈ ದೃಶ್ಯಗಳು ಎಂದಿಗೂ ಮರೆಯಲಾರದವುಗಳು.

ನಿಜ ಅವರ ಅಗಲಿಕೆಯಿಂದ ಹಳೆಯನೆನಪಿನ ಕೊಂಡಿ ಕಳಚಿದೆ......!

Rating
No votes yet

Comments