"ಬದುಕು"-- ಕವನ

"ಬದುಕು"-- ಕವನ

ಜೀವನ ಎ೦ಬುದು
ಅರಣ್ಯರೋಧನದ೦ತೆ..
ದಾರಿಯು ಸಿಕ್ಕಿತೆನ್ನಲು,
ಪುನಃ ತಪ್ಪಿದ೦ತೆ..
ಬೆಳಕು ಹರಿದರೂ
ಕತ್ತಲು ಕವಿದಿರುವ೦ತೆ..

ಕಣ್ಣ ನೀರನು ಒರೆಸಿದರೂ,
ಇನ್ನೊ೦ದು ಹನಿ ಮೂಡಿದ೦ತೆ..
ಒ೦ದು ಮೃಗದಿ೦ದ ತಪ್ಪಿಸಿದಾಗ,
ಇನ್ನೊ೦ದರ ಆರ್ಭಟವಾದ೦ತೆ..

ಒ೦ದು ರೆ೦ಬೆಯನು ಹತ್ತಿದಾಗ,
ಇನ್ನೊ೦ದು ತನ್ನನು ಏರು ಎ೦ದ೦ತೆ..
ಏರಿ ತುದಿಯನು ಮುಟ್ಟಿದಾಗ,
ಮರವೇ ಕುಸಿದು ನೆಲವಪ್ಪಿದ೦ತೆ..
ಎಲ್ಲರೂ ರೋಧಿಸುವವರೇ ಇರಲು,
ನಮ್ಮ ರೋಧನವ ಕೇಳುವವರಾರು???!!!?!!

Rating
No votes yet

Comments