ಸುಮ್ನೆ ತಮಾಶೆಗೆ...

ಸುಮ್ನೆ ತಮಾಶೆಗೆ...

ನೆನ್ನೆ ರಾತ್ರಿ ಹಾಸಿಗೆಗೆ ಹೋದಾಗ ನಿದ್ದೆ ಬರ್ತಾ ಇರ್ಲಿಲ್ಲ... ಎನೊ ಯೋಚನೆ ಮಾಡ್ಕೊಂಡು ನಾನು ನಗ್ತಾ ಇದ್ದೆ... ನನ್ನ ಆ ಯೋಚನೆಗಳಿಗೆ ನಿಮ್ಗೆ ನಗು ಬಂದ್ರೆ ನೀವು ಅದನ್ನ ಜೋಕ್ಸ್ ಅಂತ ಕರೀಬಹುದು..

1) ಯೆಡಿಯೂರಪ್ಪನವರ ಮುಂದಿನ ಬಜೆಟ್ 2 ಮುಖ್ಯಾಂಶಗಳು:

-3 ಲಕ್ಷಕ್ಕೂ ಕಡಿಮೆ ವಾರ್ಷಿಕ ಆದಾಯ ಇರುವ ಸಾಫ್ಟ್ ವೇರ್ ಇಂಜಿನಿಯರಗಳನ್ನು 'ಚಿಕ್ಕ ಸಾಫ್ಟ್ ವೇರ್ ಇಂಜಿನಿಯರಗಳೆಂದು' ಮತ್ತು 3 ಲಕ್ಷಕ್ಕೂ ಜಾಸ್ತಿ ಆದಾಯ ಇರುವ ಇರುವ ಸಾಫ್ಟ್ ವೇರ್ ಇಂಜಿನಿಯರಗಳನ್ನು 'ದೊಡ್ಡ ಸಾಫ್ಟ್ ವೇರ್ ಇಂಜಿನಿಯರಗಳೆಂದು' ಸರ್ಕಾರ ಪರಿಗಣಿಸಿ 'ಚಿಕ್ಕ ಸಾಫ್ಟ್ ವೇರ್ ಇಂಜಿನಿಯರಗಳ' ಸಂಪೂರ್ಣ ಕ್ರೆಡಿಟ್ ಕಾರ್ಡ್ ಸಾಲವನ್ನು ಮನ್ನ ಮಾಡಲಾಗುವುದು, ಮತ್ತು 'ದೊಡ್ಡ ಸಾಫ್ಟ್ ವೇರ್ ಇಂಜಿನಿಯರಗಳ' ಶೇಕಡಾ 50% ಕ್ರೆಡಿಟ್ ಕಾರ್ಡ್ ಸಾಲ ಮನ್ನ ಮಾಡಲಾಗುವುದು.

-- ಕಳೆದ ಬಾರಿ ಐ.ಪಿ.ಎಲ್. 20-20 ಯಲ್ಲಿ ದುಡ್ಡು ಕಳೆದು ಕೊಂಡ 'ವಿಜಯ್ ಮಲ್ಲ್ಯ' ರವರ ನಷ್ಟವನ್ನು ಸರ್ಕಾರವು ತುಂಬಿಕೊಟ್ಟು ಕ್ರೀಡೆಗೆ ಪ್ರೋತ್ಸಾಹ ನೀಡಲಾಗುವುದು.

2) ಮೈಸೂರು ಅರಮೆನೆ ಮುಂಬಾಗಿಲ ಮುಂದೆ ಈ ರೀತಿ ಪಲಕ ಹಾಕಲಾಗಿತ್ತು.
'ವಾಸ್ತು ಶಾಸ್ತ್ರಜ್ಞರಿಗೆ ಪ್ರವೇಶವಿಲ್ಲ'

ಕಾರಣ ಎನು ಅಂದ್ರೆ ಮೊನ್ನೆ ಯಾರೊ 'ವಾಸ್ತು ಶಾಸ್ತ್ರಜ್ಞರು' ಒಡೆಯರ್ ಅವರನ್ನು ಕಂಡು ಮೈಸೂರು ಅರಮೆನೆ ವಾಸ್ತು ಪ್ರಕಾರ ಇಲ್ಲ. ಆದನ್ನು ಕೆಡವಿ ವಾಸ್ತು ಪ್ರಕಾರ ಹೊಸ ಪ್ಲಾನ್ ಹಾಕಿ ಕೊಡುತ್ತೇನೆ ಎಂದು ಒಡೆಯರ್ ಅವರಿಗೆ ದುಂಬಾಲು ಬಿದ್ದಿದ್ದನಂತೆ.

3) 'ಬಿ.ಜೆ.ಪಿ. ಯ 'ಆಪರೇಶನ್ ಕಮಲ' ದಿಂದ 15 ಶಾಸಕರು ಬಿ.ಜೆ.ಪಿ. ಯ ತೆಕ್ಕೆಗೆ. ಎಲ್ಲರಿಗು ಸಂಪುಟ ದರ್ಜೆಯ ಸ್ಥಾನಮಾನ ಯೆಡಿಯೂರಪ್ಪ ಭರವಸೆ.'

ಇದರಿಂದ ಪ್ರೇರಿತರದ 'ವಿಪ್ರೊ' ಅಧ್ಯಕ್ಷ 'ಅಜೀಂ ಪ್ರೇಂಜಿ' ಯವರಿಂದ 'ಆಪರೇಶನ್ ಸೂರ್ಯಕಾಂತಿ' ಗೆ ಚಾಲನೆ. 'ಇನ್ಫೋಸಿಸ್' ನ 100 ಜನ 'ಟೀಮ್ ಲೀಡ್' ಗಳು 'ವಿಪ್ರೊ' ತೆಕ್ಕೆಗೆ. ಎಲ್ಲರಿಗು 'ಪ್ರಾಜೆಕ್ಟ್ ಮ್ಯಾನೆಜರ್' ದರ್ಜೆಯ ಸ್ಥಾನಮಾನ 'ಅಜೀಂ ಪ್ರೇಂಜಿ' ಭರವಸೆ.'

-- ಹರ್ಷ

Rating
No votes yet

Comments