ಸ್ವಲ್ಪನಗಿ

ಸ್ವಲ್ಪನಗಿ

ಗುಂಡ: ಪಕ್ಕದ್ಮನೆ ರಾಣಿಗೆ ಇಂಗ್ಲಿಷ್ ಬರಲ್ಲ..... ಕಣೋ ರಾಜೇಶ.
ರಾಜೇಶ: ನಿನಗೆ ಹೇಗೆ ಗೊತ್ತಾಯ್ತ?
ಗುಂಡ: ರಾಣಿಗೆ 1 ಕಿಸ್ ಕೊಡು ಅಂದೆ.....ಅದಕ್ಕೆ ಕೆನ್ನೆಗೆ ಹೊಡೆದ್ಲೂ ..... :)

ಜಿಪುಣ ಗುಂಡ ಒಮ್ಮೆ ಹಣ್ಣಿನ ಅಂಗಡಿಗೆ ಹೋಗಿ ಬಾಳೆಹಣ್ಣಿನ ಬೆಲೆ ವಿಚಾರಿಸಿದ. ಅಂಗಡಿ ಮಾಲೀಕ ಒಂದು ಬಾಳೆ ಹಣ್ಣಿಗೆ ಒಂದು ರೂಪಾಯಿ ಅಂದ.
ಗುಂಡ: 60 ಪೈಸೆಗೆ ಕೊಡ್ತಿಯಾ?
ಅಂಗಡಿ ಮಾಲೀಕ: 60 ಪೈಸೆಗೆ ಬಾಳೆ ಹಣ್ಣಿನ ಸಿಪ್ಪೆ ಮಾತ್ರ ಬರತ್ತೆ .......ಎಂದ
ಗುಂಡ ಒಂದು ನಿಮಿಷ ಯೋಚಿಸಿ
ಗುಂಡ: ಸರಿ 40 ಪೈಸೆ ಕೊಡ್ತೀನಿ, ಹಣ್ಣು ಕೊಟ್ಟು ಸಿಪ್ಪೆ ನೀನೆ ಇಟ್ಟುಕೋ ಅಂದ. :)

ಹೊಸದಾಗಿ ಪಡೆದುಕೊಂಡಿದ್ದ ಬೈಕ್ ಗೆ ಪೆಟ್ರೋಲ್ ಹಾಕಿಸಲು ಗುಂಡ ಪೆಟ್ರೋಲ್ ಬಂಕ್ ಗೆ ಹೋದ.
ಅಲ್ಲಿ ಹೀಗೆ ಬರೆದಿತ್ತು, "ಇಲ್ಲಿ ಮೊಬೈಲ್ ಉಪಯೋಗಿಸುವುದನ್ನು ನಿಷೇದಿಸಲಾಗಿದೆ" ಎಂಬ ಬೋರ್ಡ್ ಹಾಕಲಾಗಿತ್ತು.
ತಕ್ಷಣ ಅಲ್ಲೇ ತನ್ನ ಮೊಬೈಲ್ ತೆಗೆದು ತನ್ನ ಪರಿಚಿತರೆಲ್ಲರಿಗೂ ಪೋನ್ ಮಾಡಿ ಹೇಳಿದ- 'ನಾನೀಗ ಪೆಟ್ರೋಲ್ ಬಂಕ್ ನಲ್ಲಿ ಇದ್ದೇನೆ ಯಾರು ನನಗೆ ಪೋನ್ ಮಾಡಬೇಡಿ' :)

ರೈಲು ಬಂದು ನಿಂತಿತ್ತು. ಗುಂಡ ಪ್ಲಾಟ್ ಪಾರಂ ನಲ್ಲಿ ಆಚೀಚೆ ಸುತ್ತಾಡ್ತಾ ಇದ್ದ. ಅಷ್ಟರಲ್ಲಿ ಟ್ರೈನ್ ಕಿಟಕಿಯಿಂದ ವ್ಯಕ್ತಿಯೊಬ್ಬರು ಕೈಮಾಡಿ ಕರೆದಿದ್ದನ್ನು ನೋಡಿದ.
ಗುಂಡ ಅ ವ್ಯಕ್ತಿಯ ಬಳಿ ಹೋಗಿ ಏನೆಂದು ಕೇಳಿದ.
ವ್ಯಕ್ತಿ: ಸಾರ್ ಇದು ಯಾವ ಸ್ಟೇಷನ್ ಹೇಳ್ತಿರಾ?
ಗುಂಡ: ರೈಲ್ವೆ ಸ್ಟೇಷನ್ ಅಷ್ಟು ಗೊತ್ತಾಗಿಲ್ವೇನ್ರಿ... :)

Rating
No votes yet

Comments