ನನ್ನ ಪೆನ್ನು ಬರೆದ ಪನ್ನು.

ನನ್ನ ಪೆನ್ನು ಬರೆದ ಪನ್ನು.

ಮೊನ್ನೆ ಪನ್ನು ಬರೆಯುವ ಮನಸಾಯ್ತು,
ಹಾಳೆ ಮೇಜಿನ ಮೇಲಿಟ್ಟೆ,
ಪೆನ್ನ ಹೊರತೆಗೆದೆ.
"ಬರೆ ಪೆನ್ನು" ಎಂದೆ.
ಪೆನ್ನು ಸುಮ್ಮನಿತ್ತು.
"ಬರೆ ಪೆನ್ನು" ಎಂದೆ ಇನ್ನೊಮ್ಮೆ.
ನಾನಿನ್ನು ಬರೆಯಲೊಲ್ಲೆ, ಎಂದಿತು ಪೆನ್ನು.
ಕೊನೆಯ ಬಾರಿಯೋ ಎಂಬಂತೆ,
"ಬರೆ ಪೆನ್ನು" ಎಂದೆ ಗಟ್ಟಿಯಾಗಿ.
ಪೆನ್ನು ಸ್ಫೋಟಿಸಿತು.
ಹೂಡುವೆ ಮಾನ ನಷ್ಟ ಮೊಕದ್ದಮೆ,
ಬರೆ ಪೆನ್ನು ಎಂದು ಹೀಯಾಳಿಸಿದರೆ ಇನ್ನೊಮ್ಮೆ.
ನನಗರ್ಥವಾಯ್ತು, "ಬರೆ, ಪೆನ್ನು" ಎಂದೆ ಪ್ರೀತಿಯಿಂದ.
ಇದೋ ಸ್ವೀಕರಿಸಿ ನನ್ನ ಪೆನ್ನು ಬರೆದ ಪನ್ನು.

(ಇದು ಮೇಲಿನಂತೆ ಚೆನ್ನವೋ, ಗದ್ಯವಾಗಿ ಚೆನ್ನವೋ ಹೇಳಿ)
(ಬರೆ ಪೆನ್ನು = just a pen; ಬರೆ, ಪೆನ್ನು = write, my dear pen, write)

Rating
No votes yet

Comments