ಹುಸಿ ಮುನಿಸಿನ ಹುಡುಗಿ

ಹುಸಿ ಮುನಿಸಿನ ಹುಡುಗಿ

ನಾನು ನನ್ನ ಹೊಸ ಡಿಜಿ SLR ಝಳಪಿಸುತ್ತಿದ್ದ ಸಮಯ ಅದು. ಈ ಪುಟ್ಟ ಹುಡುಗಿ ನನಗೊಂದು ಮದುವೆಯಲ್ಲಿ ಸಿಕ್ಕವಳು. ಅವಳಿಗೊಂದು ಪುಟ್ಟ ಸೀರೆ, ಕೊರಳು ತುಂಬ ಅಸಲಿ ಚಿನ್ನ, ತಲೆಗೆ ಹೂವು ಮುಡಿಸಿದ್ದರು ಅವಳ ಹೆತ್ತವರು. ಅವಳು ಸುಳಿದಲ್ಲೆಲ್ಲ ನೆರೆದವರು ನೋಡುವವರೇ. ಅವಳ ತಾಯಿ ನನಗೆ ಚಿತ್ರಗಳನ್ನು ತೆಗೆಯಲು ತುಂಬ ಸಹಕರಿಸಿದರು. ನಾನು ಅವರಿಗೆ ಈ ಚಿತ್ರದ ಪ್ರಿಂಟ್ ಗಳನ್ನು ಕೊಟ್ಟು ಕಳಿಸಿದ್ದೆ..

ಬೆಳಗಿನ ಹೊತ್ತಿನಲ್ಲಿ ಒಳ್ಳೆಯ ಬೆಳಕು ಮತ್ತು ಹಿಂದೆ ಮದುವೆ ಛತ್ರದ ನೆರಳು ಸೇರಿ ನನಗೆ ಟೆಕ್ನಿಕಲಿ ಒಳ್ಳೆ ಚಿತ್ರ ಸಿಕ್ಕಿದವು (ನಾನು ಕ್ಲಿಕ್ಕಿಸುತ್ತ ಹೋದೆ). ಚಿತ್ರದ ಬಗ್ಗೆ ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ.

ExposureTime - 1/40 seconds (ಫ್ಲ್ಯಾಶ್ ಇಲ್ಲದೆ)
FNumber - 8.00
ISO - 200

ವಸಂತ್ ಕಜೆ.

Rating
No votes yet

Comments