Ficus krishnae

Ficus krishnae

ಮೇಲ್ನೋಟಕ್ಕೆ ಗೋಳಿಮರದಂತೆ ಕಂಡರೂ, ಈ ಮರದ ಎಲೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಎಲೆಯ ಕೆಳ ಭಾಗದಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಜೇಬಿನಂತಹ ರಚನೆ ನೋಡಬಹುದು. ಶ್ರೀಕೃಷ್ಣ ಬೆಣ್ಣೆ ಕದ್ದು ಇದೇ ಮರದ ಎಲೆಯಲ್ಲಿ ತುಂಬಿಸಿ ತಿನ್ನುತ್ತಿದ್ದನೆಂಬುದು ಜನರ ನಂಬುಗೆ. ಮಳೆಗಾಲದಲ್ಲಿ ಈ ರೀತಿಯ ಎಲೆಗಳು ನೀರನ್ನು ಒಮ್ಮೆಲೆ ಭೂಮಿಗೆ ಬಿಡದೆ, ತನ್ನ ಎಲೆಯಲ್ಲಿ ಹಿಡಿದಿಟ್ಟುಕೊಂಡು ಸ್ವಲ್ಪ ಸ್ವಲ್ಪವೇ ಬಿಡುವುದು. ನೀರಿಲ್ಲದ ಕಾಲದಲ್ಲಿ ತನ್ನ ಉಳಿವಿಗಾಗಿ ಹಂತ ಹಂತವಾಗಿ ಮಾರ್ಪಾಡಿಸಿಕೊಂಡ ಈ ರಚನೆ (ಈಚೆಗಿನ ನೀರಿಂಗಿಸುವಿಕೆ, ಹನಿನೀರಾವರಿಗಳನ್ನು ನೆನಪಿಸಿಕೊಳ್ಳಬಹುದು) ಎಷ್ಟು ಸುಂದರ ಅಲ್ಲವೇ?

ಚಿತ್ರ ಕೃಪೆ: ನಾನೆ ತೆಗ್ದಿದ್ದು

Rating
No votes yet

Comments