ಸಾವಿಗೆ ಹೆದರದೇ ಹೋದಾಗ..

ಸಾವಿಗೆ ಹೆದರದೇ ಹೋದಾಗ..

ಇದು ನನ್ನ ಅನುಭವಕ್ಕೆ ಬಂದ ಘಟನೆ. ಸುಮಾರು ಹನ್ನೆರಡು ವರ್ಷದಹಿಂದಿನ ಮಾತದು. ನಮ್ಮ ಇಡೀ ಕುಟುಂಬದ ನಾಲ್ಕೂ ಜನರಿಗೆ ನನ್ನ ಕೆಲಸವೊಂದೇ ಆಧಾರವಾಗಿದ್ದಿತು. ಬಡ ಮಧ್ಯಮ ವರ್ಗದಲ್ಲಿ ಬೆಳೆದು ಬಂದ ನನಗೆ
ನನ್ನ ವಿಧ್ಯಾಭ್ಯಾಸ, ಉದ್ಯೋಗ ಎಷ್ಟು ಮುಖ್ಯಮುಂದೆ ಎಂಬುದು ಸುಮಾರು ೧೩ ವರ್ಷದ ಹುಡುಗನಿದ್ದಾಗಲೇ ಅನುಭವಕ್ಕೆ ಬಂದಿತ್ತು. ಹಾಗಾಗಿ ೧೩ ವರ್ಷದ ವರೆಗೂ ತೀರ ಪುಸ್ತಕ ಮುಟ್ಟದೆ ಆಟವಾಡಿ ಕಾಲ ಕಳೇಯುತ್ತಿದ್ದವನು
೭ನೇ ತರಗತಿಗೆ ಬಂದೊಡನೇ ಆಟ-ಹರಟೆಗಳನ್ನೇಲ್ಲಾ ಬದಿಗಿಟ್ಟು ಸೀರಿಯಸ್ಸಾಗಿ ಓದತೊಡಗಿದ್ದೆ. ಮನೆಯಲ್ಲಿ ನಡೆದ ಕೆಲವು ಘಟನೆಗಳೂ ಕಾರಣವಿದ್ದವು. ಕಷ್ಟಪಟ್ಟು ಇಂಜಿನಿಯರಿಂಗು ಮುಗಿಸಿದೆ. ಒಳ್ಳೇಯ ಅಂಕ ಗಳಿಸಿದ್ದಾಗ್ಯೂ
ಸುಮಾರು ೩ ವರ್ಷ ಸರಿಯಾದ ಉದ್ಯೋಗ ಸಿಗಲಿಲ್ಲ. ಅದಕ್ಕೆ ತಕ್ಕಂತೆ ನಮ್ಮಪ್ಪನಿಗೂ ಉದ್ಯೋಗದಿಂದ ನಿವೃತ್ತಿಯಾಯಿತು. ಬೆಂಗಳೂರಿನಲ್ಲಿ ೨೦೦೦ ರೂ ಬಾಡಿಗೆಗೆ ಒಂದು ಸಣ್ಣ ಮನೆಯಲ್ಲಿ ವಾಸವಿದ್ದೆವು. ಮೊದಲಿನಿಂದಲೂ
ಅಮ್ಮ ಹೇಗೋ ಯಾರಿಗೂ ಊಟ ತಿಂಡಿಗಳ ಕೊರತೆಯಾಗದ ಹಾಗೆ ಸಂಸಾರ ನಿಭಾಯಿಸುತ್ತಿದ್ದಳು. ಭಾನುವಾರ ಎಲ್ಲರೂ ಮನೆಯಲ್ಲಿರುತ್ತಿದ್ದವೆಂದು ಸಿಂಪಲ್ಲಾಗಿ ಒಂದು ವಿಷೇಶ ಅಡಿಗೆ ಮಾಡಿ ಬಡಿಸುತ್ತಿದ್ದಳು. ಆದರೆ ಎಷ್ಟು ದಿನ ಇವೆಲ್ಲಾ ನಡೆದೀತು.
ಆರ್ಥಿಕ ಮುಗ್ಗಟ್ಟಿನಿಂದ ಕಂಗೆಟ್ಟಿದ್ದಾಗ ಅಮ್ಮ ಅವತ್ತು ನೇರ ಹೇಳಿಯೇ ಬಿಟ್ಟಿದ್ದಳು..’ಇನ್ನು ಸರಿಯಾಗಿ ಅಡಿಗೆ ಮಾಡಲು ಆಗುವುದಿಲ್ಲ..ಡಬ್ಬಗಳೆಲ್ಲಾ ಖಾಲಿ..ಖಾಲಿ’ ಎಂದು. ಅವತ್ತೇ ನನ್ನ ಕರುಳು ಚುರುಗುಟ್ಟಿದ್ದು. ಬಡತನ ಎಂಬುದನ್ನು
ಕೇವಲ ಕತೆಗಳಲ್ಲಿ, ಚಲನ ಚಿತ್ರಗಳಲ್ಲಿ ಓದಿದ್ದವನಿಗೆ ನಿಜಕ್ಕೂ ಅನುಭವಕ್ಕೆ ಬಂದಿತ್ತು.

ಆಗಲೇ ನಾನು ಯಾರ್ಯಾರಿಂದಲೋ ಸಾಲ ಸೋಲ ಮಾಡಿ ಒಂದು ಸಾಫ್ಟ್ವ್ವೇರ್ ತರಬೇತಿ ಪಡೆದು ಸಣ್ಣದೊಂದು ಕೆಲಸಕ್ಕೆ ಸೇರಿದ್ದು. ಆಗ ತಾತ್ಕಾಲಿಕವಾಗಿ ಒಂದು ಸಣ್ಣ ನೆಮ್ಮದಿ ಸಿಕ್ಕಿತ್ತು ನನಗೆ, ನಮ್ಮ ಕುಟುಂಬಕ್ಕೆ. ಆದರೆ ನಾನು ಕಳೆದ ೩ ವರ್ಶಗಳಲ್ಲಿ
ಊರೂರು ಅಲೆದು ಹತ್ತು ಹಲವು ಕೆಲಸ ಸಿಕ್ಕಿಯೂ ಯಾವುದೋ ಕಾರಣಗಳಿಂದ ಬಿಟ್ಟುಬರುತ್ತಿದ್ದೆ. ಛೆ! ಇಂತಹ ಕೆಲಸ ಮಾಡಲಿಕ್ಕೆ ಇಂಜಿನಿಯರಿಂಗು ಓದಬೇಕಿತ್ತಾ ಅನಿಸಿದ್ದೂ ಉಂಟು. ಒಂದು ಹಳ್ಳಿಗೆ ಹೋಗಿ ಶಾಲಾಶಿಕ್ಷಕನಾಗಿ ದುಡಿದರೂ ಹತ್ತು ಪಟ್ಟು ನೆಮ್ಮದಿಯ
ಜೀವನ ಸಾಗಿಸಬಹುದು ಎನಿಸಿತ್ತು. ಹೀಗೆ ವರ್ಷಗಳ ನಿರಂತರ ಅಲೆದಾಟ, ಬದುಕಿಗೆ ನಿರ್ಧಿಷ್ಟ ನೆಲೆ ಇಲ್ಲದಿರುವಿಕೆಯಿಂದ ಮನಸ್ಸು, ದೇಹಗಳು ಹೈರಾಣಾಗಿ ಹೋಗಿದ್ದವು. ಹಾಗಾಗಿ ಒಂದು ಉತ್ತಮ ಕೆಲಸದೊರಕಿದ್ದರೂ ನನ್ನ ಕಲಕಿದ ಮನಸ್ಥಿತಿಯಿಂದ ಹೊರಬರಲು ಕೆಲವು ತಿಂಗಳುಗಳೇ ಹಿಡಿದವು. ಹಾಗೂ ಹೀಗೂ ಸುಮಾರು ೩ ವರ್ಷ ಚೆನ್ನಾಗಿಯೇ ನಡೆಯಿತು ಸವಾರಿ. ಆದರೆ ಮತ್ತೆ ಕಂಪೆನಿಯ ವ್ಯವಹಾರಗಳಲ್ಲಿ ಆರ್ಥಿಕ ಮುಗ್ಗಟ್ಟು ಕಾಣಿಸಿಕೊಂಡಿತ್ತು ನೋಡಿ. ನನಗೆ, ಸಹೋದ್ಯೋಗಿಗಳಿಗೆ ಎಲ್ಲರಿಗೂ ಒಂದು ರೀತಿಯ ಭಯ ಆವರಿಸಿತ್ತು.್

ನನಗಾಗಲೀ ನಮ್ಮ ಬಂಧುಗಳು-ಸಮೀಪದ ಮಿತ್ರರಿಗಾಗಲೀ ವ್ಯಾಪಾರ, ವ್ಯವಹಾರ ಮಾಡಿ ಅಭ್ಯಾಸವಿರಲಿಲ್ಲ. ಎಲ್ಲರೂ ನೌಕರಿ-ಚಾಕರಿ ಮಾಡಿಕೊಂಡು ಬದುಕಿದವರೇ..ನಮ್ಮ ಕುಟುಂಬವೋ ಮೇಷ್ಟ್ರುಗಳ ಕುಟುಂಬ!
ವ್ಯಾಪಾರ ಅಂತ ಹೆಸರು ಕೇಳಿದರೆ ಬೆಚ್ಚಿಬೀಳುತ್ತಿದ್ದರು. ಆಗಲೇ ನನಗೆ ಬಂದ ಯೋಚನೆ..ಈ ನೌಕರಿಯೂ ಹೋದರೆ ಏನು ಮಾಡುವುದು??
ಯೋಚನೆ ಮಾಡಿ ಮಾಡಿ ಮನಸ್ಸು ಒಂದು ಗಟ್ಟಿ ನಿರ್ಧಾರಕ್ಕೆ ಬಂದು ಬಿಟ್ಟಿತ್ತು. ಹಣೆಬರಹ ಇದ್ದಂತಾಗಲಿ.. ಬದುಕಿದ್ದರೆ ಈಗಿನಷ್ಟೇ ಸುಸ್ಥಿತಿಯಲ್ಲಿ ಬದುಕಬೇಕು..ಇಲ್ಲದಿದ್ದರೆ ಬದುಕಿನಿಂದಲೇ ನಿವೃತ್ತಿ ಪಡೆಯಬೇಕು. ಅದೊಂದು ನಿರ್ಧಾರ ಮನಸ್ಸನ್ನು
ಎಷ್ಟು ಕಠಿಣ ಮಾಡಿಬಿಟ್ಟಿತ್ತು ಎಂದರೆ ಆದಿನಗಳ ನಂತರ ಬದುಕು ಎಷ್ಟು ಕರಾರುವಾಕ್ಕಾಗಿ ವ್ಯಾಪಾರೀ ಮನೋಭಾವದಲ್ಲಿ ನಡೆಯುತ್ತಾ ಬಂತು. ಕುಟುಂಬದಲ್ಲಿ ವೈಮನಸ್ಯಗಳು ಶುರುವಾದವು. ಒಂದು ಕೈಯಲ್ಲಿ ಸಾವು ಒಂದು ಕೈಯಲ್ಲಿ ಬದುಕು ಹಿಡಿದುಕೊಂಡು
ಜೀವನ ಮಾಡುವುದೆಂದರೆ, ನಾನುಂಟೋ ಮೂರ್ಲೋಕ ಉಂಟೋ ಎಂಬ ಮನೋಭಾವ ಬಂದುಬಿಡುತ್ತದೆ. ಅಂತಹ ವ್ಯಕ್ತಿಯ ಸುತ್ತಮುತ್ತಲಿನವರಿಗೆ ಎಷ್ಟು ಕಿರಿ-ಕಿರಿಯಾಗುತ್ತದೆ ಎಂದು ಗೊತ್ತಾದದ್ದು ಆಗಲೇ.

ನನಗೆ ನನ್ನದೇ ಆದ ಕೆಲವು ಬಲಹೀನತೆಗಳಿವೆ. ಕೆಲವು ಸ್ವಭಾವಕ್ಕೆ ಸಂಭಂದಿಸಿದ್ದಾದರೆ ಕೆಲವು ದೈಹಿಕ ಬಲಹೀನತೆಗಳು. ನಾನು ಎಲ್ಲರಂತೆ ಸತತ ಎಂಟು-ಹತ್ತು ಘಂಟೆ ಶ್ರಮಪಟ್ಟು ಕೆಲಸಮಾಡಲಾರೆ. ವಿಪರೀತ ಬೆವರುವಿಕೆ, ಕೈಕಾಲು ಸೋಲು ಬರುವುದು. ಇವು ಬಾಲ್ಯದಿಂದಲೇ ಇದ್ದ ಬಲಹೀನತೆ. ದೇಹದಲ್ಲಿ ಯಾವುದೋ ಧಾತು ಕೊರತೆಇದ್ದರೆ ಹೀಗಾಗುತ್ತದಂತೆ ಅಂತ ಚಿಕ್ಕಂದಿನಲ್ಲಿ ಡಾಕ್ಟರು ಹೇಳಿದ್ದಾಗಿ ಅಮ್ಮ ಹೇಳುತ್ತಿದ್ದಳು. ಹತ್ತು ಹಲವು ಔಷಧಕೊಟ್ಟು ಸರಿಮಾಡಲು ಯತ್ನಿಸಿದ್ದುಂಟು. ಕೆಲವೊಮ್ಮೆ ಇದೆಲ್ಲಾ ನೆನೆಸಿಕೊಂಡು
ನನಗೆ ನನ್ನ ಬದುಕಿನಮೇಲೆ ಬೇಸರ ಬಂದಿದ್ದೂ ಉಂಟು. ಕೆಲಸದಲ್ಲಿ ಎಲ್ಲರಂತೆ ಉತ್ಸಾಹದಲ್ಲಿ ಭಾಗಿಯಾಗಲು ಆಗುತ್ತಿಲ್ಲವಲ್ಲಾ ಎಂಬ ವ್ಯಥೆ. ಒಂದು ಮುರುಕಲು ಕಾರು ಕೊಟ್ಟು ರೇಸಿನಲ್ಲಿ ಎಲ್ಲರೊಟ್ಟಿಗೆ ನೂರುಮೈಲು ವೇಗದಲ್ಲಿ ಓಡಿಸು ಎಂದು ಹೇಳಿದಂತಾಗಿತ್ತು ನನ್ನ ಪರಿಸ್ಥಿತಿ!!

ಎಂಟು ವರ್ಷದ ಹಿಂದಿನ ಪರಿಸ್ಠಿತಿ ಇದೀಗ ಮತ್ತೆ ತಲೆದೋರಿದೆ. ಆದರೆ ಅವತ್ತಿನಷ್ಟು ಧೈರ್ಯಗೆಟ್ಟಿಲ್ಲ. ಆದರೆ ಅವತ್ತು ಒಡೆದು ಹೋದ ಕೆಲವು ಮನಸ್ಸುಗಳು ಇವತ್ತಿಗೂ ಸರಿಹೋಗಿಲ್ಲ !

Rating
No votes yet

Comments