ಅಲ್ಲಮ ಹೆಸರಿನಲ್ಲಿನ ’ಮ’ ಬಗ್ಗೆ

ಅಲ್ಲಮ ಹೆಸರಿನಲ್ಲಿನ ’ಮ’ ಬಗ್ಗೆ

ನಿನ್ನೆ ಮಾಸ್ತಿಯವರ ಪುಸ್ತಕ - ನಮ್ಮ ನುಡಿ ತಿರುವಿ ಹಾಕುತ್ತಿದ್ದಾಗ ಕಂಡದ್ದು . ಇವತ್ತು ’ಅಲ್ಲಮ’ ಹೆಸರಿನ ಬಗ್ಗೆ ಇಲ್ಲೆಲ್ಲೊ ಟಿಪ್ಪಣಿ ನೋಡಿ ನಾನು ಓದಿದ್ದನ್ನು ಹಾಕಬೇಕೆನಿಸಿತು .

’ಅಮ್ಮ ’ ಗಂಡಸರ ಹೆಸರಿನ ತುಣುಕಾಗಿ ಪೂರ್ವದ ಹೆಸರುಗಳಲ್ಲಿ ಕಾಣುತ್ತದೆ . ಈಗಲೂ ಕೃಷ್ನಮಾಚಾರ್ಯ , ಕೃಷ್ಣಮನಾಯಿಡು ಮುಂತಾದ ಹೆಸರುಗಳಲ್ಲಿ ಉಳಿದಿದೆ . ಜೈಮಿನೀ ಭಾರತದ ಲಕ್ಷ್ಮೀಶಕವಿ ತಾನು ಅಣ್ಣಮಾಂಕನ ಸುತ ಎಂದು ಹೇಳಿಕೊಂಡಿದಾನೆ . ’ಅಣ್ಣಮ’ ದ ’ಮ’ ಈ ’ಅಮ್ಮ’ ಪದವು ಪಡೆದ ರೂಪ . ಅಲ್ಲಮದ ’ಮ’ ಹೀಗೆಯೇ .

Rating
No votes yet

Comments