ಜಾಗೃತ ಕನ್ನಡ ಮತಗಳು ಎಲ್ಲೆಲ್ಲಿ ಎಷ್ಟು?

ಜಾಗೃತ ಕನ್ನಡ ಮತಗಳು ಎಲ್ಲೆಲ್ಲಿ ಎಷ್ಟು?

ನಮಸ್ಕಾರ ಸ್ನೇಹಿತರೆ,
ಈ ಲೇಖನವನ್ನ ಓದಿ, ನಿಜಕ್ಕೂ ನಿಮಗೆ ಆಶ್ಚರ್ಯವಾಗತ್ತೆ, ಇವತ್ತು ಎಲ್ಲ ರಾಜಕೀಯ ಪಕ್ಷಗಳು ತಮ್ಮ ಕೀಳು ರಾಜಕೀಯ ಮತ್ತು ಒಡೆದು ಆಳುವ ತಂತ್ರ ಉಪಯೋಗಿಸಿ ಪ್ರಚಾರ ಮಾಡ್ತಿದ್ರೆ, ನಮ್ಮ ಕರ್ಣಾಟಕದ ಒಂದು ಗುಂಪು ಇದನೆಲ್ಲ ತನ್ನ ನಿರ್ಲಿಪ್ತ ಮತ್ತು ಎಚ್ಚರಿಕೆಯ ಕಣ್ಣುಗಳಿಂದ ನೋಡ್ತಿದೆ. ಈ ಗುಂಪು ಏನು ೧೦ ಅಥವಾ ೧೦೦ ಅಥವಾ ಸಾವಿರದ ಲೆಕ್ಕದಲ್ಲಿಲ್ಲ. ಇದು ಒಂದು ದೊಡ್ಡ ಶಕ್ತಿ. ಈ ಗುಂಪಿನ ಸಂಖ್ಯೆ ಕರ್ನಾಟಕ ಜನಸಂಖ್ಯೆಯ ಶೇ ೧೩ ರಷ್ಟಿದೆ.

ಈ ಗುಂಪು ನಿಜಕ್ಕೂ ಕರ್ಣಾಟಕದ ಕಾಳಜಿಗಾಗಿ ಮಿಡಿಯುತ್ತೆ ಮತ್ತು ದುಡಿಯುತ್ತೆ, ಈ ಸಾರಿಯ ಚುನಾವಣೆಯಲ್ಲಿ ಗುಂಪು ಯಾರನ್ನ ಬೆಂಬಲಿಸುತ್ತೋ ಅವರ ಗೆಲುವು ಖಂಡಿತ. ಹಾಗಂತ ಈ ಗುಂಪಿನ ಮತದಾರರನ್ನ ದುಡ್ದೋ ಅಥವಾ ಮತ್ತೊಂದೋ ಕೊಟ್ಟು ಖರಿದಿಸೋಕೆ ಸಾಧ್ಯವಿಲ್ಲ.
ಇಷ್ಟೆಲ್ಲಾ ಮಾತನಾಡಿದ ಮೇಲೆ ಈ ಗುಂಪು ಯಾವುದು ಅಂತ ತಿಳ್ಕೊಬೇಕು ಅಂತ ಅನ್ನಿಸ್ತಿದೆಯಾ? ಈ ಗುಂಪಿನ ಹೆಸರು ಜಾಗೃತ ಕನ್ನಡ ಮತದಾರರು. ಹೌದು ಈ ಮತದಾರರು ನಿಜಕ್ಕೂ ಜಾಗೃತ ಯಾಕಂದ್ರೆ ಮೇಲೆ ಹೇಳಿದಂತೆ ಇವರು ಯಾವ ಆಮಿಷಕ್ಕೂ ಬಗ್ಗುವವರಲ್ಲ. ಕೇವಲ ಕನ್ನಡ ಕರ್ನಾಟಕ ಮತ್ತು ನಾಡು ನುಡಿಯ ಬಗ್ಗೆ ಒಲವಿರುವ ಅಭ್ಯರ್ಥಿಗಳಿಗೆ ಮಾತ್ರ ಮತ ಹಾಕುತ್ತಾರೆ. ಇವರಿಗೆ ಯಾವ ಪಕ್ಷ ಅನ್ನೋದು ಮುಖ್ಯ ಅಲ್ಲ.

ಮುನ್ನೋಟ ವಿಶ್ಲೇಷಣೆ ತಂಡ ಅನ್ನೋ ಒಂದು ಸಂಸ್ಥೆ ಈ ಕುತೂಹಲಕಾರಿ ಅಂಶಗಳನ್ನ ರಾಜ್ಯದ ಎಲ್ಲಾ ಜಿಲ್ಲೆಗಳ ಅಂಶಗಳನ್ನು ಗಣನೆಗೆ ತಗೆದುಕೊಂಡು ಈ ವರದಿಯನ್ನ ಸಿದ್ಧಪಡಿಸಿದ್ದಾರೆ.

ಕೆಳಗೆ ಕೊಟ್ಟಿರುವ ಕೊಂಡಿಯನ್ನ ಒಮ್ಮೆ ನೋಡಿ ಇದರಲ್ಲಿ ಪ್ರತಿ ಜಿಲ್ಲೆಯಲ್ಲೂ ಈ ಜಾಗೃತ ಮತದಾರರ ಶೇಕಡವಾರು ಅಂಶಗಳು ಸಿಗುತ್ತವೆ :
========================================================================
ಕನ್ನಡದ ನಾಡು, ನುಡಿ ಮತ್ತು ಸ್ವಾಭಿಮಾನದ ವಿಷಯ ಬಂದಾಗ ಕರ್ನಾಟಕ ರಕ್ಷಣಾ ವೇದಿಕೆ ತನ್ನ ಹೋರಾಟಗಳ
ಮೂಲಕ ಕನ್ನಡ ಪರ ಕಾಳಜಿಯನ್ನ ವ್ಯಕ್ತಪಡಿಸುತ್ತಾ ಬಂದಿದೆ. ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ ಬಂದಾಗಲೂ ಕೂಡ
ಕನ್ನಡಿಗರ ಪರವಾಗಿ ಕರ್ನಾಟಕ ರಕ್ಷಣಾ ವೇದಿಕೆ ನಿಂತಿದೆ. ಇದರ ಪರಿಣಾಮವೇ ಕನ್ನಡಿಗರಲ್ಲಿ ಕನ್ನಡತನದ ಜಾಗೃತಿ
ಆಗಿದೆ ಅಂದರೆ ತಪ್ಪಾಗಲಾರದು. ಈ ಜಾಗೃತಿಯೇ ಇವತ್ತು ಒಂದು ಅದ್ಭುತ ಶಕ್ತಿಯಾಗಿ ಬೆಳೆದಿದೆ ಅಂದ್ರೆ ಅದೇನು
ಅತಿಶಯೋಕ್ತಿ ಅಲ್ಲ. ಇಂತಹ ಜಾಗೃತಿ ಇಂದ ನಮ್ಮ ನಾಡಿನಲ್ಲಿ ಜಾಗೃತ ಕನ್ನಡಿಗರು ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದಾರೆ.

ಜಾಗೃತ ಕನ್ನಡಿಗನೆಂದರೆ ಪಕ್ಷ ಯಾವುದೇ ಇರಲಿ, ಕನ್ನಡ ನೆಲ, ಜಲ ಮತ್ತು ಭಾಷೆಗಳ ಬಗ್ಗೆ ಕಳಕಳಿ ಇರುವ ಅಭ್ಯರ್ಥಿಗಳಿಗೆ
ಮಾತ್ರ ಮತ ಹಾಕುವಂತವರು. ಈ ಜಾಗೃತ ಕನ್ನಡಿಗರು ಯಾವ ಆಮಿಶಗಳಿಗೂ ಬಗ್ಗುವವರಲ್ಲ, ಯಾವ ಪಕ್ಷದ ಓಲೈಕೆಗು
ತಲೆದೂಗುವವರಲ್ಲ.

ಕೆಳಗೆ ಕೊಟ್ಟಿರುವ ಕೊಂಡಿಯಲ್ಲಿರುವ ಅಂಕಿ ಅಂಶಗಳನ್ನ ನೋಡಿ, ಪ್ರತಿಯೊಂದು ಜಿಲ್ಲೆಯಲ್ಲೂ ಈ ಜಾಗೃತ ಕನ್ನಡಿಗ
ಮತದಾರ ತನ್ನ ಸ್ಥಾನವನ್ನ ಗಟ್ಟಿಯಾಗಿಸಿಕೊಂಡಿದ್ದಾನೆ, ಇಲ್ಲಿ ಯಾವುದೇ ಅಭ್ಯರ್ಥಿ ಗೆಲ್ಲಬೇಕೆಂದರು ಈ ಜಾಗೃತ
ಕನ್ನಡಿಗ ಮತದಾರನ ಕೃಪಾಶಿರ್ವಾದ ಬೇಕೇ ಬೇಕು.

http://karave.blogspot.com/2009/04/jagruta-matagalu.html

Rating
No votes yet

Comments