ಅಬ್ಬಾ ಒಂದು ಓಟು ಹಾಕಲು ಎಷ್ಟೊಂದು ಕಷ್ಟ!

ಅಬ್ಬಾ ಒಂದು ಓಟು ಹಾಕಲು ಎಷ್ಟೊಂದು ಕಷ್ಟ!

"ಬೇಗಾ ಬಾ ಓಟು ಹಾಕೋ ಟೈಮ್ ಮುಗಿದು ಹೋಗುತ್ತೆ " ಅಂತ ಇವರು ಆತುರ ಪಡಿಸಿದರು
ಎಲ್ಲೋ ಇಟ್ಟಿದ್ದ ಓಟರ್ ಐಡಿ ಕಾರ್ಡ್ ಹುಡುಕಿ ತೆಗೆದುಕೊಂಡೆವು
ನನ್ನ ಒಂದೊಂದೂ ಓಟು ಎಷ್ಟು ಅಮೂಲ್ಯ ಎನ್ನುವುದನ್ನು ನೆನೆದುಕೊಂಡು ಬೇಗ ಬೇಗ ಹೊರಟಿದ್ದಾಯ್ತು
ಮತ ಕಟ್ಟೆಗೆ ಹೋದ ನಂತರ ಲಿಸ್ಟ್‌ನಲ್ಲಿ ನಮ್ಮಗಳ ಹೆಸರೇ ಇರಲಿಲ್ಲ
ಅದ್ಯಾರೋ ಪುಣ್ಯಾತ್ಮ ಒಂದು ಚೀಟಿ ಬರೆದುಕೊಟ್ಟು ೨೧೨ ಹೋಗಿ ಬೂತಿಗೆ ಹೋಗಿ ಓಟ್ಮಾಡಿ ಎಂದ
ಅಲ್ಲಿಗೆ ಹೋದರೆ ಸಾರಿ ಮೇಡಮ್ ಇಲ್ಲ್ಯಾವುದೋ ಬೇರೆ ಹೆಸರಿದೆ ನೀವು ಅಲ್ಲೇ ಹೋಗಿ ಕೇಳಿ ಎಂದರು
ಮತ್ತೆ ಅವನ ಬಳಿಯೇ ಹೋದೆವು
ಆಗಿನಿಂದ ಹುಡುಕಾಟ ಶುರು ಆಯ್ತು. ಅಲ್ಲೇ ನಿಂತಿದ್ದ ನೂರಾರು ಜನಕ್ಕೂ ಇದೇ ಗತಿ . ಮತದಾರರ ಹೆಸರನ್ನು ಹುಡುಕುವ ಕ್ರಮ ನೋಡಿ ತುಂಬಾ ಬೇಜಾರಾಯ್ತು.
ನಾವು ನಮ್ಮಂಥ ಸಣ್ಣ ಸಂಸ್ಥೆಯಲ್ಲಿಯೇ ವಿದ್ಯಾರ್ಥಿಗಳನ್ನು ಹುಡುಕಲು ಕಷ್ಟ ಎಂದು ಒಂದು ಡಾಟಾಬೇಸ್ ಮಾಡಿಕೊಂಡು ಸಾಫ್ಟವೇರ್ನಲ್ಲಿ ಹೆಸರು ಹಾಕಿ ಹುಡುಕಿ ಎತ್ತುತ್ತೆಎ
ಕೋಟ್ಯಾಂತರ ಜನರಿರುವ ಮತದಾನದಂತಹ ಅಮೂಲ್ಯ ಕೆಲಸ. ಇಲ್ಲಿ ಮತದಾರರ ಹೆಸರನ್ನು ಹುಡುಕಲು ಅಂತಹ ಡಾಟಾಬೇಸ್ ಇರಲಿ ಕಂಪ್ಯೂಟರ್ ಸಹ ಇಲ್ಲ.
ಮತದಾನದ ಕೆಲಸಕ್ಕೆ ಕುಳಿತಿದ್ದ ಕೆಲವರಂತೂ ಈ ಹುಡುಕುವ ಕೆಲಸವನ್ನು ನಮಗೇ ಕೊಟ್ಟು ಹರಟೆಗೆ ತೊಡಗಿದ್ದರು ಮತದಾರದ ಪಟ್ಟಿಗಳು ಎಲ್ಲೆಂದರಲ್ಲಿ ಬಿದ್ದು ರಾರಾಜಿಸುತ್ತಿದ್ದವು. ಒಂದೊಂದು ಪುಟಗಳು ದಿಕ್ಕಾಪಾಲಾಗಿದ್ದವು.
ನಾನಿದ್ದ ಸಮಯದಲ್ಲಿಯೇ ನೂರಾತು ಜನರಿಗೆ ತಮ್ಮ ಹೆಸರು ಸಿಗಲಿಲ್ಲ . ನನ್ನ್ನ ಹೆಸರು ಸಿಕ್ಕಿತು. ನಾನು ಮತದಾನ ಮಾಡಿದೆ.
ಆದರೆ ನನ್ನವರಿಗೆ ಆ ಭಾಗ್ಯ ದೊರಕಲಿಲ್ಲ
ಅವರೂ ತುಂಬಾ ಬೇಸರಿಸಿಕೊಂಡರು.
ಅವ್ಯವಸ್ಥೆಯ ಬಗ್ಗೆ ಮಾತಾಡುತ್ತಲೆ ಮನೆಗೆ ಹೋದೆವು.

Rating
No votes yet

Comments