ಘಮ - ಘಮ - ಘಮಾಡುಸ್ತಾವ ಮಲ್ಲಿಗಿ!!! (ದ. ರಾ. ಬೇಂದ್ರೆಯವರ ಘಮ ಘಮಿಸುವ ಕವನ)

ಘಮ - ಘಮ - ಘಮಾಡುಸ್ತಾವ ಮಲ್ಲಿಗಿ!!! (ದ. ರಾ. ಬೇಂದ್ರೆಯವರ ಘಮ ಘಮಿಸುವ ಕವನ)

ಘಮ ಘಮ ಘಮಾಡುಸ್ತಾವ ಮಲ್ಲಿಗಿ
ನೀ ಹೊರಟ್ಟಿದ್ದೀಗ ಎಲ್ಲಿಗಿ
ನೀ ಹೊರಟ್ಟಿದ್ದೀಗ ಎಲ್ಲಿಗಿ ||ಘಮ ಘಮ||

ತುಳಕ್ಯಾಡುತಾವ ತೂಕಡಿಕಿ
ಎವಿ ಅಪ್ಪುತ್ತಾವ ಕಣ್ ದುಡುಕಿ
ಕನಸು ತೇಲಿ ಬರುತಾವ ಹುಡುಕಿ
ನೀ ಹೊರಟ್ಟಿದ್ದೀಗ ಎಲ್ಲಿಗಿ
ನೀ ಹೊರಟ್ಟಿದ್ದೀಗ ಎಲ್ಲಿಗಿ ||ಘಮ ಘಮ||

ಚಿಕ್ಕಿ ತೋರುಸ್ತಾವ ಚಾಚಿ ಬೆರಳ
ಚಂದ್ರಾಮ ಕನ್ನಡಿ ಹರಳ
ಮನಸೋತು ಆಯಿತು ಮರುಳ
ನೀ ಹೊರಟ್ಟಿದ್ದೀಗ ಎಲ್ಲಿಗಿ
ನೀ ಹೊರಟ್ಟಿದ್ದೀಗ ಎಲ್ಲಿಗಿ ||ಘಮ ಘಮ||

ನೆರಳಲ್ಲಾಡುತಾವ ಮರದ ಬುಡಕ
ಕೆರಿತೇರಿ ನೂಗುತಾವ ದಡಕ
ಹಿಂಗ ಬಿಟ್ಟು ಇಲ್ಲಿ ನನ್ನ ನಡಕ
ನೀ ಹೊರಟ್ಟಿದ್ದೀಗ ಎಲ್ಲಿಗಿ
ನೀ ಹೊರಟ್ಟಿದ್ದೀಗ ಎಲ್ಲಿಗಿ ||ಘಮ ಘಮ||

ನನ್ನ ನಿನ್ನ ಒಂದು ತನದಾಗ
ಹಾಡು ಉಕ್ಕಿ ಒಂದು ಮನದಾಗ
ಬೆಳದಿಂಗಳಾತು ಬನದಾಗ
ನೀ ಹೊರಟ್ಟಿದ್ದೀಗ ಎಲ್ಲಿಗಿ
ನೀ ಹೊರಟ್ಟಿದ್ದೀಗ ಎಲ್ಲಿಗಿ ||ಘಮ ಘಮ||

ಬಂತ್ಯಾಕ ನಿನಗ ಇಂದ ಮುನಿಸು
ಬೀಳಲಿಲ್ಲ ನನಗ ಇದ್ರ ಕನಸು
ರಾಯ ತಿಳಿಯಲಿಲ್ಲ ನಿನ್ನ ಮನಸು
ನೀ ಹೊರಟ್ಟಿದ್ದೀಗ ಎಲ್ಲಿಗಿ
ನೀ ಹೊರಟ್ಟಿದ್ದೀಗ ಎಲ್ಲಿಗಿ ||ಘಮ ಘಮ||

Rating
No votes yet

Comments