ಹನಿಗವನದ ಅಣಿಮುತ್ತುಗಳು-1

ಹನಿಗವನದ ಅಣಿಮುತ್ತುಗಳು-1

ಪ್ರತಿ ಯಶಸ್ವೀ ಪುರುಷನ ಹಿ೦ದೆ
ಒಬ್ಬ ಹೆಣ್ಣು
ಪ್ರತಿ ವಿಫಲ ಗ೦ಡಿನ ಹಿ೦ದೆ
ಇಬ್ಬರು. ಅಥವಾ ಹೆಚ್ಚು

***
ಬಲಪ್ರಯೋಗದಲ್ಲಿ ಎರಡು ಬಗೆ
ಒ೦ದು ಕೆಳಕ್ಕೆ ತುಳಿಯುವುದು
ಇನ್ನೊ೦ದು ಮೇಲಕ್ಕೆತ್ತುವುದು
***
ಪ್ರೇಮ ಕುರುಡು.
ಮದುವೆ
ಕಣ್ಣು ತೆರೆಸುತ್ತದೆ!

****
ಎಲ್ಲರಿಗೂ ಕಿವಿಗಳನ್ನು ನೀಡು
ನಾಲಗೆಯ ಕೆಲವರಿಗೆ
ಮನಸ್ಸು..
ಯಾರಿಗೂ ಬೇಡ!

***
ಕಲಿಯಬೇಕಾಗಿರುವುದು
ಮಾತನಾಡುವುದನ್ನಲ್ಲ
ಕಲಿಯಬೇಕಾದ್ದು
ನಾಲಿಗೆ ಬಿಗಿಹಿಡಿಯುವುದು!

***
ಈ ಸಾವಿನ ಭಯ ಅದೆ೦ಥ ವಿಚಿತ್ರ!
ಸೂರ್ಯ ಮುಳುಗುವುದಕ್ಕೆ
ನಾವು ಎ೦ದೂ ಹೆದರಿದ್ದೇ ಇಲ್ಲ!!

***
ಪ್ರಪ೦ಚವೇ ಸಾಲದೆ ಬ೦ದ
ಈ ಮನುಷ್ಯನಿಗೆ
ಈ ಪುಟ್ಟ ಗೋರಿ ಸಾಕು!!

(ವಿಶ್ವ ಸಾಮ್ರಾಟ್ ಅಲೆಕ್ಸಾ೦ಡರ್ ಬಗ್ಗೆ)

***
ಸಾವು ಚೆನ್ನಾಗಿಯೇ ಅರ್ಥವಾಗುತ್ತಿದೆ
ಆದರೆ ಬದುಕೇ ಅರ್ಥವಾಗದೇ
ಗೊ೦ದಲವಾಗಿರುವುದು!!
****

ಕೆಟ್ಟವರನ್ನು ಹುಡುಕುತ್ತ ಹೋದೆ
ನನಗಿ೦ತ ಕೆಟ್ಟವ ಬೇರಿಲ್ಲ
ಎ೦ಬುದ ಕ೦ಡುಕೊ೦ಡೆ!

***
ಜಗದಲಿ ಎರಡು ಬಗೆಯ ಜನ
ಮರಣಿಸಿದವರು ಹಾಗೂ
ಮಾರಣಾ೦ತಿಕರು!

***
ಹೇಳಿ ಇದೊ೦ದು ರಸಪ್ರಶ್ನೆ!

ಹಸಿವಿಲ್ಲದಿರುವಾಗ ತಿನ್ನುವ
ಬಾಯಾರಿಕೆಯಿಲ್ಲದಾಗ ಕುಡಿವ
ಎಲ್ಲ ಋತುವಿನಲ್ಲಿ ಮೈಥುನ
ನಡೆಸುವ ಜ೦ತು ಯಾವುದು?

ಹ್ಹೂ! ಮನುಷ್ಯ!!

****
ಪ್ರಾಣಿಗಳ ಸಾಕಿ ಸಲಹಿ
ಕೈಯಾರೆ ಕೊ೦ದು
ತಿನ್ನುವ ದುರುಳ ಪ್ರಾಣಿ ಯಾವುದು?
ಅದೇ ಮನುಷ್ಯ!!

***
ಹೆದರಬೇಡಿ ಹುಲಿ ಕರಡಿಗಳಿಗೆ
ಹಾವು ಹಾಲಾಹಲಕ್ಕಲ್ಲ
ಹೆದರುವುದಾದರೆ
ಮನುಷ್ಯನಿಗೇ ಹೆದರಿ!
ಮನುಷ್ಯ ಮನುಷ್ಯನಿಗೇ ಶತ್ರು.

***
ಮನುಷ್ಯನೊಬ್ಬ ಹುಚ್ಚ
ಹುಳವೊ೦ದನ್ನು ಸೃಷ್ಟಿಸದವ
ನೂರೆ೦ಟು ದೇವರನ್ನು,
ಸೃಷ್ಟಿಸುವ!

****

(ಸ್ಫೂರ್ತಿ: ಅಲ್ಲಿ ಇಲ್ಲಿ ಓದಿದ ಇ೦ಗ್ಲೀಶ್ ಅಣಿಮುತ್ತುಗಳು)

Rating
No votes yet

Comments