ಪ್ರೇಮಕವಿಯ ಪ್ರೇಮ ಗೀತೆ

ಪ್ರೇಮಕವಿಯ ಪ್ರೇಮ ಗೀತೆ

ಹಾಡು: ಅಂತಿಂಥ ಹೆಣ್ಣು ನೀನಲ್ಲ
ಚಿತ್ರ : ತುಂಬಿದ ಕೊಡ
ಗಾಯಕರು : ಶ್ರಿ ಪಿ. ಕಾಳಿಂಗರಾಯರು
ಸಂಗೀತ : ಜಿ. ಕೆ. ವೆಂಕಟೇಶ್
ರಚನೆ: ಕೆ. ಎಸ್. ನರಸಿಂಹಸ್ವಾಮಿ

ಅಂತಿಂಥ ಹೆಣ್ಣು ನೀನಲ್ಲ
ನಿನ್ನಂಥ ಹೆಣ್ಣು ಇನ್ನಿಲ್ಲ
ಹೆಡೆ ಹೆಡೆಯ ಸಾಲು ತುರುಬೆಲ್ಲ
ಕುಡಿನಿಂದ ಹೂವು ಮೇಲೆಲ್ಲ
ತೆರೆತೆರೆಯ ಹೊರಳು ಕುರುಳೆಲ್ಲ
ಸುಳಿಮಿಂಚು ಕಣ್ಣ ಹೊರಳೆಲ್ಲ

ಎದೆ ಮಟ್ಟ ನಿಂತ ಹೂಬಳ್ಳಿ
ಎಷ್ಟೊಂದು ಹೂವು ಅದರಲ್ಲಿ
ಉಸಿರುಸಿರು ಮೊಗ್ಗು ಹೂವೆಲ್ಲ
ನೀ ಬಳ್ಳಿ ಬೆಳಕು ಬದುಕೆಲ್ಲ

ನಡುದಾರಿಯಲ್ಲಿ ನನ್ನೂರು
ಕುಡಿಮಿಂಚಿನೂರು ಹೊನ್ನೂರು
ಮುನ್ನೂರು ಮಿಂಚು ಹೊಳೆದಂತೆ
ನೀ ಬಂದರೆನಗೆ ಸಿರಿವಂತೆ

ಬಲು ದೂರ ದೂರ ನೀನಾಗಿ
ಹೊಂಗನಸು ನಡುವೆ ದನಿತೂಗಿ
ಕಾದಿರಲು ನಾನು ನಿನಗಾಗಿ
ನೀ ಬರುವೆ ಚೆಲುವೆ ಹೊಳೆಯಗಿ

ಅಂತಿಂಥ ಹೆಣ್ಣು ನೀನಲ್ಲ
ನಿನ್ನಂಥ ಹೆಣ್ಣು ಇನ್ನಿಲ್ಲ
ಹೆಡೆ ಹೆಡೆಯ ಸಾಲು ತುರುಬೆಲ್ಲ
ಕುಡಿನಿಂದ ಹೂವು ಮೇಲೆಲ್ಲ
ತೆರೆತೆರೆಯ ಹೊರಳು ಕುರುಳೆಲ್ಲ
ಸುಳಿಮಿಂಚು ಕಣ್ಣ ಹೊರಳೆಲ್ಲ

ಈ ಹಾಡು ನನ್ನ ಅಚ್ಚುಮೆಚ್ಚಿನ ಹಾಡು. ಸಾಹಿತ್ಯಕ್ಕಾಗಿ ಅಂತರ್ಜಾಲದಲ್ಲಿ ಬಹಳ ಹುಡುಕಿದೆ ಆದರೆ ಸಿಗಲಿಲ್ಲ, ಆದ್ದರಿಂದ ಹಾಡನ್ನು ಕೇಳಿ ಸಾಹಿತ್ಯವನ್ನು ಬರೆದಿದ್ದೇನೆ ತಪ್ಪಿದ್ದರೆ ದಯವಿಟ್ಟು ಕ್ಷಮಿಸಿ...

ಅದ್ಭುತವಾಗಿ ಹಾಡಿರುವ ಕಾಳಿಂಗರಾಯರಿಗು, ಇಂಪಾದ ಸಂಗೀತ ನೀಡಿರುವ ಜಿ. ಕೆ. ವೆಂಕಟೇಶ್ ರವರಿಗು, ಹಾಗು ಅತ್ಯುತ್ತಮ ಸಾಹಿತ್ಯ ಒದಗಿಸಿರುವ ಕೆ. ಎಸ್. ನ ರವರಿಗು ನನ್ನ ಅನಂತಾನಂತ ಪ್ರಣಾಮಗಳು....

( ಚಿತ್ರದ ಕೃಪೆ: ಗೂಗಲ್ )

Rating
No votes yet

Comments