ವರ್ಚುವಲ್ ಬಾಕ್ಸ್(ಕಾಲ್ಪನಿಕ ಪೆಟ್ಟಿಗೆ) ಏನಿದು??

ವರ್ಚುವಲ್ ಬಾಕ್ಸ್(ಕಾಲ್ಪನಿಕ ಪೆಟ್ಟಿಗೆ) ಏನಿದು??

ನಿಮ್ಮ ಗಣಕಯ೦ತ್ರದಲ್ಲಿ ಒಂದರಿಂದ ಜಾಸ್ತಿ ಅಪರೇಟಿಂಗ್ ಸಿಸ್ಟಮ್ ಇದೆಯೆಂದಾದರೆ... ಒ೦ದೇ ಸಮಯದಲ್ಲೇ ಎರಡರನ್ನೂ ಪ್ರಾರಂಭಿಸಲು ಸಾಧ್ಯವೇ...?
ಮೊದಲು "ಇಲ್ಲ" ಎಂದಾಗಿತ್ತು...
ಆದರೆ "ಕಾಲ್ಪನಿಕ ಪೆಟ್ಟಿಗೆ"(ವರ್ಚುವಲ್ ಬಾಕ್ಸ್)ಇಂದ ಇದು" ಸಾಧ್ಯ"... :)
ಈ ವರ್ಚುವಲ್ ಬಾಕ್ಸ್ ನಿಮಗೊಂದು "ಕಾಲ್ಪನಿಕ ವ್ಯವಸ್ಥೆ" (ವರ್ಚುವಲ್ ಸಿಸ್ಟಮ್) ಅನ್ನು ಒದಗಿಸುತ್ತದೆ..
ನಿಮ್ಮ ಕಂಪ್ಯೂಟರ್ ನಲ್ಲೇ ಮತ್ತೊಂದು ಕಾಲ್ಪನಿಕ ಕಂಪ್ಯೂಟರ್ ಅನ್ನು ಸೃಷ್ಟಿಸಿ , ನಿಮ್ಮ ಪಕ್ಕದಲ್ಲೇ ಇರುವ ಮತ್ತೊಂದು ಭೌತಿಕ (physical) ಕಂಪ್ಯೂಟರ್ ಅನ್ನು ಚಲಾಯಿಸಿದ ಅನುಭವನ್ನು ನೀಡುತ್ತದೆ

ಇದನ್ನು ಕಾರ್ಯ ರೂಪಕ್ಕೆ ತರಲು.. ನಿಮ್ಮ ಗಣಕಯಂತ್ರದ ಯವುದಾದರೂ ನಿಮಗಿಷ್ಟವಾದ ಅಪರೇಟಿಂಗ್ ಸಿಸ್ಟಮನ್ನು ಈ ಕಾಲ್ಪನಿಕ ಯಂತ್ರ(ವರ್ಚುವಲ್ ಮೆಶಿನ್) ದಲ್ಲಿ ಸ್ಥಾಪಿಸಿ.
ವರ್ಚುವಲ್ ಬಾಕ್ಸ್ ನಿಮ್ಮ ಇರುವ ಸಿಸ್ಟಮ್ನ ಸಂಪನ್ಮೂಲವನ್ನು ಉಪಯೋಗಿಸಿಕೊಂಡು ಒಂದು ಕಾಲ್ಪನಿಕ ಗಣಕಯಂತ್ರವನ್ನೂ,ಕಾಲ್ಪನಿಕ ಯಂತ್ರಾಂಶವನ್ನು ರಚಿಸುತ್ತದೆ; ಯಾವರೀತಿಯೆಂದರೆ ನೀವು ಸಹಜವಾದ ಮತ್ತೊಂದು ಕಂಪ್ಯೂಟರ್ ಉಪಯೋಗಿಸುವಂತೆಯೇ...!
ಕಾಲ್ಪನಿಕ ಯಂತ್ರವನ್ನು ಅಳವಡಿಸಲು, ಕಾಲ್ಪನಿಕ ಪೆಟ್ಟಿಗೆಯನ್ನು ಕೆಳಗಿಳಿಸಿ ನಿಮ್ಮ ಗಣಕಯಂತ್ರದಲ್ಲಿ ಸ್ಥಾಪಿಸಿ.
ವರ್ಚುಅಲ್ ಬಾಕ್ಸ್ ಅಳವಡಿಸಲು, ಮೊದಲು ಅದನ್ನು ಡೌಲೋಡ್ ಮಾಡಿಕೊಂಡು ನಿಮ್ಮ ಸಿಸ್ಟಂನಲ್ಲಿ ಇಸ್ನ್ಟಾಲ್ ಮಾಡಿಕೊಳ್ಳಿ. ನಂತರ ಅದರಲ್ಲಿ ಹೊಸದೊಂದು ವರ್ಚುಯಲ್ ಬಾಕ್ಸ್ ರಚಿಸಿಕೊಳ್ಳಬಹುದು. ತುಂಬಾ ಸುಲಭ. New ಬಟನ್ ಪ್ರೆಸ್ ಮಾಡಿ ಮುಂದೆ ಅದು ಕೇಳುವ ಪ್ರಶ್ನೆಗಳನ್ನು ಉತ್ತರಿಸುತ್ತಾ ಹೋಗಿ. ನಿಮ್ಮ ಬಳಿಯಿರುವ ಇತರೆ ಆಪರೇಟಿಂಗ್ ಸಿಸ್ಟಂಗಳನ್ನು ಹೀಗೆ ರಚಿಸಿದ ವರ್ಚುಯಲ್ ಮಶೀನ್ಗಳಲ್ಲಿ ಇನ್ಸ್ಟಾಲ್ ಮಾಡಿಕೊಂಡು ಉಪಯೋಗಿಸ ಬಹುದು.

ಈಗ ಸಧ್ಯಕ್ಕೆ ವಿಂಡೋಸ್ ಬಳಸುತ್ತಿರುವ ನಾನು, ಗ್ನು/ಲಿನಕ್ಸ್ ಬಳಸಿ ನೋಡಲಿಕ್ಕೆ ಮತ್ತೊಂದು ಕಂಪ್ಯೂಟರ್ ಇಲ್ಲದ್ದಿದ್ದರಿಂದ ವರ್ಚುಯಲ್ ಬಾಕ್ಸ್ ಬಳಸಲಿಕ್ಕೆ ಶುರುಮಾಡಿದ್ದೇನೆ. ನೀವೂ ಉಪಯೋಗಿಸಿ ನೋಡಿ.

ಹೆಚ್ಚಿನ ಮಾಹಿತಿಗಾಗಿ:
ಕಾಲ್ಪನಿಕ ಪೆಟ್ಟಿಗೆ

ಶಬ್ದಕೋಶ:
*********
ಕಾಲ್ಪನಿಕ ಪೆಟ್ಟಿಗೆ: virtual box
ಕಾಲ್ಪನಿಕ ವ್ಯವಸ್ಥೆ: virtual system
ಸಂಪನ್ಮೂಲ: resource

Rating
No votes yet

Comments