ಚಟುವಟಿಕೆಗಳು ಚುಟುಕಾದಾಗ-೩

ಚಟುವಟಿಕೆಗಳು ಚುಟುಕಾದಾಗ-೩

ನನ್ನ ಚಟುವಟಿಕೆಗಳು "ಚುಟುಕು" ಆದಾಗ... ಬರೆಯುವ ಎನ್ನೋ ಹಂಬಲವುಂಟಾದಾಗ...
ಈ ಪುಟ್ಟ ಪುಟ್ಟ ಕವನಗಳು ಹೊರಬರುತ್ತದೆ... :)

ಮಳೆ
*********

ಮಳೆ ಬಾರದಿದ್ದರೆ ಕೊರಗುವರು ಜನ
ಬ೦ದರೂ ಕೊರಗುವುದು ಹಲವರ ಮನ,
ವರ್ಷವಿಡೀ ಬಂದರೂ ಕಷ್ಟ,
ವರ್ಷಕ್ಕೊಮ್ಮೆ ಬಾರದಿದ್ದರೂ ನಷ್ಟ,
ಇದನ್ನು ಹಿಡಿತದಲ್ಲಿಡಲಾಗದು ನಮ್ಮಿಂದ,
ಏಕೆ೦ದರೆ ಈ ವರ ಬ೦ದಿದೆ ಪ್ರಕೃತಿಯಿಂದ.

ಹೀಲ್ಡ್(ಹಿಡಿತವಿಲ್ಲದ) ಚಪ್ಪಲ್
*********************

ಈಗೀಗ ಹಾಕುವರು
ಹೀಲ್ಡ್ ಚಪ್ಪಲ್!
ಸರಿಯಾಗಿ ನಡೆಯಲಾಗದು,
ಅವರಿಂದಲೂ.....
ಆದರೂ ಪ್ರಯತ್ನ
ಪಡುವರು ಈ ರೋಡಿನಲ್ಲೂ,
ಸ್ವಲ್ಪ ಅಡಿ ಮಗುಚಿದರೂ..
ಸೇರಬೇಕಾಗುವುದು..
ಹಾಸ್ಪಿಟಲ್!!! :)

ಹೂವು
******

ಹೂಗಳೇ ನೀವೆಷ್ಟು ಸುಂದರ..!!
ನಮ್ಮನ್ನ ಬಳಿಗೆ ಕರೆದಿರಾ..?
ಒಂದು ದಿನದ ನಲಿವನ್ನು ಹಂಚಿ,
ನಮ್ಮ ನೋವನ್ನು ಕೊಂಡೊಯ್ದಿರಾ..
ಹೂಗಳೇ ನೀವೆಷ್ಟು ಸುಂದರ....
ನೀವು ಬಾಡಿದರೂ ನಿಮ್ಮ,
ನಗು ಅಮರ..!!! :)

ಚಟುವಟಿಕೆಗಳು ಚುಟುಕಾಗುವುದು ಮುಂದುವರೆಯುವುದು.... :)

Rating
No votes yet

Comments