ಮೈಸೂರು ಅರಸರ ತೆಲುಗು ಕೀರ್ತನೆ?

ಮೈಸೂರು ಅರಸರ ತೆಲುಗು ಕೀರ್ತನೆ?

ಶ್ರೀವರಲು ಗಣಪತಿನಿ| ಚಿತ್ತಮುಗ ತಲಚಿ||

ಲಾಲಿ ಪಾಡಿದರೆ ಜನಲು| ಲಾವಣ್ಯವತುಲು||

ಚೆನ್ನಧರ ಕೃಷ್ಣ ಚಂದ್ರುನ್ನಿ ಬಟ್ಟಿ||೧||

ಲಾಲಿ ಲಾಲ್ಯಮ್ಮ ಲಾಲಿ||ಪ||

ಲಾಲಿ ಚಾಮುಂಡ್ಯಮ್ಮ|ಬಂಗಾರು ಬೊಮ್ಮ||

ಲಾಲಿ ಶಂಕರ ಕೊಮ್ಮ| ಲಲಿತಾಂಗಿವಮ್ಮ||ಅ|ಪ||

ಮಹಿಷಾಸುರನಿ ಪಟ್ಟಿ | ಮದಮಣಚಿನಾವು|

ಮೈಲಿಬುಧಜನಲುಕುನು| ಮಹಿಮ ತೆಲುಪಿತಿವೋ|

ಶ್ರೀಧರುಡು ಕೃಷ್ಣರಾಜೇಂದ್ರ ಪಾಲಿಂಪ||

ತಲ್ಲಿ ಚಾಮುಂಡ್ಯಮ್ಮ| ಬಂಗಾರುಬೊಮ್ಮ||೨||

ಲಾಲಿ ಲಾಲ್ಯಮ್ಮ| ಲಾಲಿ||ಪ|| 

 

ಈ ಕೀರ್ತನೆ ಚಮುಂಡಿದೇವಿಯನ್ನು ಕುರಿತಂತೆ ರಚಿಸಲಾಗಿದೆ. ಕೀರ್ತನೆಯಲ್ಲಿ ಎರಡು ಶಬ್ಧಗಳು ನಮ್ಮ ಗಮನವನ್ನು ಸೆಳೆಯುತ್ತವೆ. ಮೊದಲನೆಯದು ಚನ್ನಧರ ಹಾಗೂ ಎರಡನೆಯದು ಕೃಷ್ಣರಾಜೇಂದ್ರ. ಇವು ಮೈಸೂರು ಅರಸರ ಹೆಸರನ್ನು ಸೂಚಿಸುತ್ತಿದೆ ಅಲ್ಲವೆ! ಮುಮ್ಮಡಿ ಕೃಷ್ಣರಾಜೇಂದ್ರ ಒಡೆಯರ್ ಅವರೋ ಅಥವ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರೊ? ಇದನ್ನು ಯಾರು ರಚಿಸಿರಬಹುದು? ಮೈಸೂರು ಅರಸರ ಹೆಸರನ್ನು ಪ್ರಸ್ತಾಪಿಸಿ, ಚಾಮುಂಡಿಯ ಬಗ್ಗೆ ತೆಲುಗಿನಲ್ಲಿ ಬರೆದವರು ಯಾರು? 

ಈ ವಿಶಿಷ್ಠ ತೆಲುಗು ರಚನೆಯ ಬಗ್ಗೆ ಹೆಚ್ಚಿನ ವಿಷಯಗಳು ನಿಮಗೆ ತಿಳಿದಿದ್ದರೆ ದಯವಿಟ್ಟು ಬರೆದು ತಿಳಿಸಿ.

 -ನಾಸೋ

www.yaksparashne.org 

Rating
No votes yet

Comments