ಜಾಣೆ!

ಜಾಣೆ!

ಸಖೀ,
ಊರ
ಬಾವಿಯಿಂದ
ನೀರ ಸೇದಿ,
ಕೊಡವನೇರಿಸಿ
ಸೊಂಟದ ಮೇಲೆ,
ಬಳುಕುತ್ತಾ
ಬರುತ್ತಿದ್ದ ನೀರೆಯ
ಕಂಡು ಆತ:
"ಆಹಾ ಆ
ಕೊಡದ ಭಾಗ್ಯವೇ,
ನಾನಾದರೂ
ಆ ಕೊಡವಾಗಿದ್ದಿದ್ದರೇ.."
ಎಂದೆನ್ನಲು,
ಆ ಜಾಣೆ:
"ಈ ಕೊಡವ
ನೆಲಕ್ಕಪ್ಪಳಿಸಿ
ದಿನವೂ
ನೀ ಕೊಡುವ
ಕಿರುಕುಳದಿಂದ
ಎಂದೋ
ತಪ್ಪಿಸಿ ಕೊಳ್ಳುತ್ತಿದ್ದೆ"
ಎನ್ನಬೇಕೆ?!

Rating
No votes yet

Comments