ಬೇಱೆಯರ್ಥಮಿಲ್ಲದೊಡೆ ಪದದ ಕೊನೆಯ ಎಕಾರಕ್ಕಿಕಾರಂ ಬಡಗುಗನ್ನಡದೊಳ್ ವಾಡಿಕೆಯೊಳ್

ಬೇಱೆಯರ್ಥಮಿಲ್ಲದೊಡೆ ಪದದ ಕೊನೆಯ ಎಕಾರಕ್ಕಿಕಾರಂ ಬಡಗುಗನ್ನಡದೊಳ್ ವಾಡಿಕೆಯೊಳ್

Comments

ಬರಹ

ಸಾಮಾನ್ಯವಾಗಿ ತೆಂಗನ್ನಡಿಗರು ಪದದ ಕೊನೆಗೆ ಬೞಸುವ ಎಕಾರಕ್ಕೆ ಬಡಗನ್ನಡಿಗರು (ಉತ್ತರ ಕರ್ಣಾಟಕದವರು) ಬೇಱೆ ಅರ್ಥದ ಎಕಾರದ ಇನ್ನೊಂದು ಪದವಿಲ್ಲದಿದ್ದರೆ ಇಕಾರಾಂತವಾಗಿ ಉಚ್ಚರಿಸುತ್ತಾರೆ.

ಉದಾಹರಣೆ: ಎಣ್ಣೆ(ತೆಂ)=ಎಣ್ಣಿ(ಬ), ಬೆಣ್ಣೆ=ಬೆಣ್ಣಿ.
ಆದರೆ ಬಂಡಿ, ಬಂಡೆ, ಗಾದಿ, ಗಾದೆ, ಬಲಿ, ಬಲೆ ಎಂಬ ಬೇಱೆ ಬೇಱೆ ಅರ್ಥದ ಎರಡು ಪದಗಳಿರುವುದಱಿಂದ ಬಂಡಿ=ಗಾಡಿ, ಬಂಡೆ=ಕಲ್ಲು ಬಲಿ=victim ಬಲೆ=net, ಹಾಗೆಯೇ ಗಾದಿ=ಹಾಸಿಗೆ, ಗಾದೆ=ಪಡೆನುಡಿ ಎಂಬುದಾಗಿ ಎಲ್ಲ ಕನ್ನಡಿಗರು ಒಂದೇ ತೆಱನಾಗಿ ಬೞಸುತ್ತಾರೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet