ಡಿಜಿಟಲ್ ಲೈಬ್ರರಿ‍ ಡೌನ್‍ಲೋಡ್ ಸಲಕರಣ

ಡಿಜಿಟಲ್ ಲೈಬ್ರರಿ‍ ಡೌನ್‍ಲೋಡ್ ಸಲಕರಣ

ನಮಸ್ಕಾರ ಗೆಳೆಯರೆ,

ಡಿಜಿಟಲ್ ಲೈಬ್ರರಿ‍ಯಲ್ಲಿ ಪುಸ್ತಕಗಳನ್ನು ಓದಲು ಯತ್ನಿಸಿದ ನನ್ನಂಥವರು ಅದರ ಕಷ್ಟ ಮತ್ತು ನೋವುಗಳನ್ನು ತಿಳಿದಿರುತ್ತಾರೆ. ಪುಸ್ತಕಗಳನ್ನು PDFನಲ್ಲಿ ಓದಲು ಸಹಾಯವಾಗುವಹಾಗೆ, ಮೊದ ಮೊದಲಿಗೆ ಈ ತರಹ ಕಷ್ಟಗಳನ್ನು ಪಟ್ಟ ನಾಡಿಗರು unix scriptನ್ನು ಮತ್ತು ಸುನಿಲ್ ಜಯಪ್ರಕಾಶ್‍ರವರು java ಕ್ರಮವಿಧಿ‍ಯನ್ನು ನಿಮ್ಮೊಂದಿಗೆ ಹಂ‍ಚಿಕೊಂಡರು. ಅದೇ java ಕ್ರಮವಿಧಿಯನ್ನು ಬಳಸಿ ನಾನೊಂದು ಸಣ್ಣ GUI ಸಲಕರಣವನ್ನು ರಚಿಸಿದ್ದೇನೆ.

BookCreator version 1.0ನ್ನು ಡೌನ್‍ಲೋಡ್ ಮಾಡಿ  

ಇದನ್ನು ಉಪಯೋಗಿಸಲು ತಮ್ಮ ಗಣಕಯಂತ್ರದಲ್ಲಿ java(JDK ಅಥವಾ JRE) ಸ್ಥಾಪಿಸಿರಬೇಕು. javaದ ಕೋಶಕ್ಕನುಗುಣವಾಗಿ ನಿಮ್ಮ ಗಣಕಯಂತ್ರದ PATH ಮತ್ತು CLASSPATHಗಳನ್ನು ನಿಯಮಿಸಬೇಕು. ತದನಂತರ, DOS promptನಲ್ಲಿ 'java -jar bookcreator.jar' ಎಂದು ಈ ತಂತ್ರಾಂಶವನ್ನು ಉಳಿಸಿರುವ ಕೋಶದಿಂದ ಮೇಲ್ಕಂಡ ಆಙ್ಞೆಯನ್ನು ಟೈಪಿಸಿಬೇಕು.

ನನಗೆ ತಿಳಿದಿರುವ ಲೋಪದೋಷಗಳು ಹೀಗಿವೆ:

  • ಪುಸ್ತಕಗಳನ್ನು ಡೌನ್‍ಲೋಡ್ ಮಾಡುವಾಗ, ಈ ಉಪಕರಣ ಕೆಲವೊಮ್ಮೆ ನಿಮ್ಮ ತೋರು ಉಪಕರಣಕ್ಕೆ ಪ್ರತಿಕ್ರಿಯಿಸುವುದಿಲ್ಲ ಅಥವಾ ತಡವಾಗಿ ಪ್ರತಿಕ್ರಿಯಿಸುತ್ತದೆ. 
  • firewall ಸ್ಥಾಪಿತವಾಗಿರುವ ಜಾಲದಲ್ಲಿ ಇದು ನಡೆಯುವುದಿಲ್ಲ.

 ಈ ಉಪಕರಣವನ್ನು ಉಪಯೋಗಿಸಿ, ನಿಮಗೆ ತಿಳಿದ ದೋಷಗಳನ್ನು ಮತ್ತು ಇತರೆ ಅನಸಿಕೆಗಳನ್ನು ನನಗೆ ತಿಳಿಸಿರಿ.

Rating
No votes yet

Comments