ಋಣವಿದ್ದಷ್ಟೂ...

ಋಣವಿದ್ದಷ್ಟೂ...

ನನ್ನ ಮಗ ಗಲಾಟೆಮಾಡ್ತಿದ್ದ, 'ಟೆಡ್ಡಿಬಿಯರ್' ಕೊಡಿಸು ಅಂತ ನಾನು ಅಷ್ಟೊಂದು ಆಕಡೆ ಗಮನ ಕೊಟ್ಟಿರಲಿಲ್ಲ. ಒಂದು ದಿನ ವಿಪರೀತ ಹಠ ಮಾಡಿದ,
ಕೊಡಿಸುವವರೆಗೂ ಊಟ ಮಾಡಲ್ಲ ಅಂತ. ಕೊನೇಗೆ ಸೋತು ಹುಂ ತರ್ತೀನಿ ಅಂದೆ. ಒಂದು ಗುರುವಾರ ಬಂದೇಬಿಟ್ಟಿತು ಜೀವಂತ ಟೆಡ್ಡಿಬಿಯರ್. ಮಕ್ಕಳಿಬ್ಬರೂ ಸ್ಕೂಲ್ಗೆ ಹೋಗಿದ್ರು. ಪೂರ್ತಿ ಕಪ್ಪು ಬಣ್ಣ ಪಿಳಿ ಪಿಳಿ ಕಣ್ಣು ಬಿಡ್ತಿತ್ತು, ಅದೇರೀ ನಾಯಿಮರಿ. 'ಸ್ಪಿಟ್ಜ್' ಜಾತಿಗೆ ಸೇರಿದ್ದು. ಮೈತುಂಬಾ ಕೂದಲು ತುಂಬಾ ಮುದ್ದಾಗಿತ್ತು, ಸ್ಕೂಲ್ನಿಂದ ಬಂದ ಮಕ್ಕಳಿಗೆ ಖುಶಿಯೋ ಖುಶಿ ತುಂಬಾ ಸಂತೋಷ ಪಟ್ಟವು. ಮಕ್ಕಳಿಗೆ ಹೇಳಿಬಿಟ್ಟೆ ಖುಶಿ ಪಡೋದಲ್ಲ ಅದ್ರ ಪೂರ್ತಿ ಜವಾಬ್ದಾರಿ ನಿಮ್ಮದೇ, ಮಕ್ಕಳು ಹುಂ ಅಂತ ತಲೆ ಅಲ್ಲಾಡಿಸಿದವು. ಹೇಳಿದ್ದಷ್ಟೇ ಅದರ ಜವಾಬ್ದಾರಿ ನನಗೇ ಬಿತ್ತು. ಬೆಳಗ್ಗೆ, ಸಾಯಂಕಾಲ ವಾಕಿಂಗ್, ಸ್ನಾನ ವಾರಕ್ಕೊಮ್ಮೆ, ಸ್ವಲ್ಪ ಕೆಲ್ಸ ಜಾಸ್ತಿ ಆಯ್ತು.

ಗೇಟೊಳಗೆ ಯಾರನ್ನೂ ಬರಲು ಬಿಡುತ್ತಿರಲಿಲ್ಲ. ರಾತ್ರಿ ವರಾಂಡಾದಲ್ಲಿ ಚೇರ್ಮೇಲೆ ಮಲ್ಕೋತಿತ್ತು ಅಲ್ಲಿಂದಾನೇ ಬೊಗಳ್ತಿತ್ತು. ನನ್ನ ನೋಡುದ್ರೆ ಕೆಳಗೆ ಇಳೀತಿತ್ತು ವಾಚ್ಮನ್ ಡ್ಯೂಟಿ ಚೆನ್ನಾಗಿ ಮಾಡ್ತಿತ್ತು.

ನಮ್ಮನೆಗೆ ಬಂದಾಗ 20ದಿನದ ಮರಿ. ಬಾಟಲ್ನಲ್ಲಿ ಹಾಲು ಕುಡಿಸ್ತಿದ್ವಿ. ಹೇಗೆ ಬೆಳೆದು ದೊಡ್ಡದಾಯಿತೋ ಹೊತ್ತಾಗಲೇ ಇಲ್ಲ. ಬೆಳಗ್ಗೆ 6ಗಂಟೆಗೆ ವಾಕಿಂಗ್ ಕರ್ಕೊಂಡು ಹೋಗ್ತಿದ್ದೆ ಇಬ್ಬರು ಮಕ್ಕಳ ಜೊತೆ ನಾವು ಮೂವರೂ 1ಕಿ.ಮಿ. ವರೆಗೂ ಹೋಗ್ತಿದ್ವು ಇದರಿಂದ ನಮಗೂ ವ್ಯಾಯಾಮ ಆಗ್ತಿತ್ತು.

ಮನೆಯಲ್ಲಿ ನಾನೊಬ್ಬಳೇ ಹೀಗಾಗಿ ಇದೇ ನನ್ನ ಸಂಗಾತಿ. ನನ್ನ ಹಿಂದೆ ಮುಂದೆ ಸುತ್ಕೊಂಡಿರ್ತಿತ್ತು, ಅಡಿಗೆ ಮನೆ ಬಿಟ್ಟು ಎಲ್ಲಾಕಡೆ ತಿರುಗಾಡ್ತಿತ್ತು. ಡ್ರೆಸಿಂಗ್ ಟೇಬಲ್ ಮುಂದೆ ನಿಂತ್ಕೊಂಡು ತನ್ನ ಪ್ರತಿ ಬಿಂಬಕ್ಕೆ ಬೊಗಳ್ತಿತ್ತು ಬೇರೆ ಯಾವುದೋ ನಾಯಿ ಬಂದಿದೆ ಅಂತ ಇದು ಮಕ್ಕಳಿಗೆ ತಮಾಷೆ. ಸಂಜೆ ಹೊತ್ತು ಆಡಣ ಬಾ ಅಂತಿತ್ತು ಜೂಟಾಟ ಆಡ್ತಿದ್ವಿ,ನಾನು ಮತ್ತು ಟೆಡ್ಡಿ. ನಾನು ಓಡುವಾಗ ಬೇಗಬಂದು ಔಟ್ ಮಾಡ್ಬಿಡೋದು, ಅದು ಓಡುವಾಗ ನನಗೆ ಸಿಗ್ತಾನೇ ಇರ್ಲಿಲ್ಲ, ಇನ್ನೇನು ಸಿಗತ್ತೆ ಅನ್ನೋವಾಗ ಡೈನಿಂಗ್ ಟೇಬಲ್ ಕೆಳಗೆ ನುಸುಳಿ ತಪ್ಪಿಸ್ಕೋತಿತ್ತು, ಇದು ಮೋಸ ಅಪ್ಪ ಅಂದ್ರೆ ಜೋರಾಗಿ ಬೊಗಳೋದು, ನಾನೇ ಸೋತು ಮತ್ತೆ ಜೂಟ್ ಅಂತಿದ್ದೆ ಡೈನಿಂಗ್ ಟೇಬಲ್ ಸುತ್ತ ಜೂಟಾಟ ಮತ್ತೆ ಶುರುವಾಗ್ತಿತ್ತು. ಹೀಗೆ ಸುಮಾರು ಸುಸ್ತಾಗೋವರೆಗೂ ಆಡ್ತಿದ್ವು.

ಭಾನುವಾರ ನಾವೆಲ್ಲಾದ್ರೂ ಹೊರಟ್ರೆ ನಮಗಿಂತ ಮುಂಚೆ ಬಂದು ಕಾರ್ನಲ್ಲಿ ಕೂತ್ಕೋತಿತ್ತು, ಸಾಮಾನ್ಯವಾಗಿ ಗಂಡೀಪೇಟ್ ಕಡೆ ಕರ್ಕೊಂಡು ಹೋಗ್ತಿದ್ವು, ಎಲ್ಲಿ ಹೋದ್ರೂ ಕಿಟಕಿ ಸೀಟು ಬೇಕು ಇಲ್ದಿದ್ರೆ ಅಳೋಕ್ಕೆ ಶುರು ಮಾಡ್ಬಿಡೋದು. ಅದರ ಗಲಾಟೆ ತಡೀಲಾರದೇ ನನ್ನ ದೊಡ್ಡ ಮಗ ಸೀಟು ಬಿಡ್ಕೊಡ್ತಿದ್ದ ಬೈಕೊಂಡು. ರಾಜನಹಾಗೆ ಎಲ್ಲಾರನ್ನೂ ನೋಡ್ಕೊಂಡು ಬರ್ತಿತ್ತು. ದಾರಿಹೋಕರೆಲ್ಲಾ ಅದನ್ನೇ ನೋಡೋರೇ.

ಒಮ್ಮೆ ಏನನ್ನುಸ್ತೋ ಏನೋ ಟ್ಯಾಂಕ್ ಬಂಡ್ ರೋಡಲ್ಲಿ ಚಲಿಸ್ತಾಇರೋ ಕಾರಿಂದ ನೆಗೆದೇ ಬಿಡ್ತು ನಾನು 'ನೆಗೆದ್ ಬಿತ್ತು' ಅಂದ್ಕೊಂಡು ಗಾಭರಿಯಾದೆ. ಈ ರೋಡಲ್ಲಿ ಟ್ರಾಫಿಕ್ ತುಂಬಾಇರತ್ತೆ. ಸದ್ಯ ಏನಾಗಿರಲಿಲ್ಲ ಎತ್ಕೊಂಡು ಮತ್ತೆ ಕಾರ್ನಲ್ಲಿ ಕೂರಿಸ್ಕೋಂಡ್ವು.

ಅದು ಒಂದು ಅಡಿಗಿಂತ ಮೇಲೆ ಬೆಳೀಲಿಲ್ಲ, ಆಜಾತೀನೇ ಹಾಗೆ ಸ್ನಾನ ಮಾಡಿಸಿದ್ರೆ ಬೆಡಶೀಟ್ ನೆಲದಮೇಲೆ ಹಾಸುದ್ರೆ ಸಾಕು ತಾನೇ ಮೈ ಒರೆಸಿ ಕೊಳ್ಳೋದು ಬೇರೆ ಜಾಗದಲ್ಲಿ ಊಟ ಹಾಕುದ್ರೆ ತನ್ನಜಾಗಕ್ಕೇ ಎಳಕೊಂಡು ಹೋಗಿ ತಿನ್ನೋದು, ತನ್ನ ಆರೋಗ್ಯ ತುಂಬಾಚೆನ್ನಾಗಿ ಇಟ್ಕೊಂಡಿತ್ತು 15 ದಿನಕ್ಕೊಮ್ಮೆ ಉಪವಾಸ ಮಾಡೋದು ತಪ್ತಿರಲಿಲ್ಲ

ಒಂದು ಸರ್ತಿ ಬೀದಿನಾಯಿ ಮನೆಹತ್ರ ಬಂತುಂತ ಅಟ್ಟಿಸಿಕೊಂಡು ಹೋಗಿದೆ 4,5 ನಾಯಿಗಳು ಸೇರಿ ಕಚ್ಚಾಕಿದೆ ನಾವು ಹೊರಬಂದು ನೋಡಿ ಬೇರೆ ನಾಯಿಗಳನ್ನು ಓಡಿಸಿ ಆಸ್ಪತ್ರೆಗೆ ಕರಕೊಂಡುಹೋದ್ವು ಆಗಲೇ ರಾತ್ರಿ 11 ಗಂಟೆ. ವಿಪರೀತ ಗಾಯಮಾಡ್ಕೊಂಡಿತ್ತು ಎಲ್ಲಾ ಕಡೇನೂ ರಕ್ತ ಬರ್ತಿತ್ತು ಎಲ್ಲಾ ಅಳ್ತಿದ್ವಿ ಔಷಧಿಕೊಡಿಸಿದ್ವಿ 2,3 ದಿನ ಆದಮೇಲೆ ಓಡಾಡೋಕ್ಕೆ ಶುರು ಮಾಡ್ತು ಅಬ್ಬ ಅಂತ ನಿಟ್ಟುಸಿರು ಬಿಟ್ಟೆವು.

ಊಟ ಹಾಕಕ್ಕೆ ಸ್ವಲ್ಪ ತಡ ಮಾಡುದ್ರೆ ತನ್ನ ಬಟ್ಟಲು ಬೋರಲುಮಾಡಿ ವಿಪರೀತ ಗಲಾಟೆ ಮಾದೋದು. ನಮ್ಮ ಮಾತು ಚೆನ್ನಾಗಿ ಅರ್ಥ ಮಾಡ್ಕೋತಿತ್ತು ನಾನು ಬೇಸಿಗೆಯಲ್ಲಿ ಊರಿಗೆ ಹೋದಾಗ 2ದಿನ ಊಟ ಮಾಡ್ತಿರಲಿಲ್ಲ ನಾನು ಫೋನ್ ಮಾಡಿ ಹೇಳಿದ ಮೇಲೆ ಊಟ ಮಾಡ್ತಿತ್ತು. ಆದ್ರೂ ಬಾಗಿಲ ಕಡೇನೇ ನೋಡ್ತಿರೋದಂತೆ ಹಾಕಿದ ಅನ್ನಾನೆಲ್ಲಾ ಚೆಲ್ಲಾಡ್ತಿತ್ತಂತೆ.

ಮಕ್ಕಳಿಗೀ ಕ್ರಿಕೆಟ್ ಅಡಲು ಬಿಡ್ತಿರಲಿಲ್ಲ ಬಾಲ್ ಹೊಡುದ್ರೆ ಕಚ್ಕೊಂಡು ನನಗೆ ತಂದು ಕೊಡೋದು. ಚಿಕ್ಕಮಗ ಅತ್ಕೊಂಡು ಬಂದು ತೆಡ್ಡೀಗೆ ಹೊಡ್ಯೋನು ಆಟ ಕೆಡುಸ್ತೀಯಾಂತ ಐಸ್ ಪೈಸ್ ಆಡುದ್ರೆ ದೊಡ್ಡ ಮಗ ಅವಿತಿಟ್ಟು ಕೊಂಡ್ರೆ ತೋರಿಸ್ತಿರ್ಲಿಲ್ಲ, ಚಿಕ್ಕವನನ್ನು ತೋರಿಸೋದು ಯಾವಾಗಲೂ ಅವನ ಹಿಂದೇ ಇರೋದು. ಅವನನ್ನು ಕಂಡರೆ ಪ್ರೀತಿ ಜಾಸ್ತಿ.

ಬಂಗಲೆ ಬಿಟ್ಟು ಪ್ಲಾಟ್ಗೆಬಂದ ಮೇಲೆ ಅದಕ್ಕೆ ಸ್ವಲ್ಪ ಇರುಸು ಮುರುಸಾಯಿತು ಓಡಾಡಕ್ಕೆ ಜಾಗಾನೇ ಇಲ್ವಲ್ಲಾ ಮನೇ ಒಳಕ್ಕೆ ಬರಕ್ಕೆ ಒಪ್ತಾನೇ ಇರ್ಲಿಲ್ಲ ಬಾ ಅಲ್ಲಿಗೇ ಹೋಗೋಣ ಎಂಬಂತಿತ್ತು ಅದರ ನೋಟ.
ಮುಂದು ವರೆಯುವುದು

ಸೀತ ಆರ್. ಮೊರಬ್

Rating
No votes yet

Comments