ಹದಿಮೂರು ಸಾವಿರದೆಡೆಗೆ

ಹದಿಮೂರು ಸಾವಿರದೆಡೆಗೆ

ಕಾಲಚಕ್ರದ ಜೊತೆಗೆ ಮತ್ತಾರು ಚಕ್ರಗಳು
ಕರೆದೊಯ್ಯುತ್ತಿದ್ದವುನನ್ನ ಕಾರ್ಯಕ್ಷೇತ್ರದೆಡೆಗೆ
ವರ್ಷಾನುವರ್ಷ ಬೆಂಬಿಡದ ತ್ರಿವಿಕ್ರಮನಂತೆ
ಬಿದ್ದಿದ್ದೆ ನಾನದರ ಹಿಂದೆ.

ಗೊತ್ತೂ ಗೊತ್ತಿಲ್ಲದೆ ಬಿದ್ದ ಕನಸು
ನಾಲ್ಕು ಚಕ್ರದ ಆಸೆ
ವ್ಯಯಿಸಿದ ನಂತರ ಝಣ ಝಣ ಕಾಂಚಾಣ
ಆದೆ ನಾನದರ ಯಜಮಾನ.

ಮೊದಲ ತಿಂಗಳೇ ಆಯ್ತು ನನ್ನ ರಥಕ್ಕೆ
ಮಂಗಳಾರತಿ..
ಗುದ್ದಿದ್ದಲ್ಲ ಗುದ್ದಿಸಿಕೊಂಡದ್ದು
ಸಧ್ಯ ಆಗಲಿಲ್ಲ ಅದು ದೊಡ್ಡ ಪಜೀತಿ!

ಗುದ್ದದೇ ಗುದ್ದಿಸಿಕೊಂಡು
ನಂತರ ಇನ್ಷ್ಯೂರೆನ್ಸ್ ಕ್ಲೈಮ್ ಮಾಡಿ
ಧೂಳ್ ಕೊಡವಿ ಸಿಂಗರಿಸಿ
ಮುದ್ದು ಮಾಡಿದ್ದಾಗಿದೆ ಬಹಳ ಸಲ.

ಕಾಲ ಕಳೆದಂತೆ ಕಲಿತ ಬ್ರಹ್ಮವಿದ್ಯೆ
ಇಂದು ಬರೀ ಕೋತಿ ವಿದ್ಯೆ
ಕೆಲ ಸಲ ರಸ್ತೆಯಲಂತೂ ಬರಿ ಸರ್ಕಸ್ಸು
ಬರ್ತೀರಾ ಎಫ್-೧ ರೇಸು?

ಮೊದಲ ದಿನ ನೂರು
ಸ್ವಲ್ಪ ನಂತರ ಸಾವಿರ
ನೋಡು ನೋಡುತ್ತಿದ್ದಂತೆ ಓಡುತ್ತಿದೆ
ಈಗ ಹದಿಮೂರು ಸಾವಿರ..

ಗಣಪ! ಮತ್ತೊಮ್ಮೆ ನಿನಗೆ ನಮಸ್ಕಾರ..
ಕಾಯಿಸಿ ಕಾದು ಕಾಯುತ್ತಿರುವುದಕ್ಕೆ..
ನನ್ನನ್ನೂ ಮತ್ತು ರಸ್ತೆಯ ಮೇಲಿರುವ ಇತರರನ್ನೂ
ಇನ್ನೂ ಹೋಗ್ಬೇಕು ಕಾಶಿ ರಾಮೇಶ್ವರ..

Rating
No votes yet

Comments