ನಂಗೆ ನಾನೆ ದೇವ್ರು

ನಂಗೆ ನಾನೆ ದೇವ್ರು

ಸಂಪದಾ ತಾಣ ಎಲ್ಲಾ ಜಾಲಾಡ್ತಿದ್ದೆ. ದೇವರ ಬಗ್ಗೆ ತುಂಬಾ ಚರ್ಚೆ ಆಗಿದೆ ಇಲ್ಲಿ.ದೇವರಿದ್ದಾನೆ ಅನ್ನೋರು ಕರ್ಕೊಂಡ್ಬಂದ್ತೋರಿಸ್ಲಿ ಆಗ ಎಲ್ಲಾ ಮಾತಾ,ಡ್ಬೋದು.
ಇಲ್ದೋರನ್ನ ಇದಾನೆ ಇದಾನೆ ಅಂತ ಮೂಗ್ಗೆ ತುಪ್ಪ ಸವರ್ತಾ ತಲೆ ಬೋಳ್ಸ್ತಾರೆ. ನಮ್ತಾಯಿ ದೇವ್ರು ದೇವ್ರು ಅಂತ ಮೂರೊತ್ತು ಪೂಜೆ ಮಾಡ್ತಾ ಇದ್ರು ಅವರ್ಗೇನು ಸಿಕ್ತು. ?
ಬರೀ ಕಷ್ಟ ಕಷ್ಟ . ಅಲ್ಲೊಬ್ರು ಪೂಜಾರಿ ಅದ್ಯಾವ್ದೋ ಪೊಜೆ ಹೇಳಿದ್ರು ಅಂತ ಎಷ್ಟೊಂದು ಖರ್ಚು ಮಾಡಿ ಪೂಜೆ ಮಾಡ್ಸಿದ್ರು. ಅದಾದ ಮೂರು ದಿನಕ್ಕೆ ನಮ್ಮ
ನಮ್ಮ ಗಾರ್ಮೆಂಟ್ಸ್ ಅಂಗಡಿ ಲಾಸ್ ಆಯು. . ಅಪ್ಪ ಕಾಯ್ಲೆ ಬಂದು ಮಲ್ಕ್ಕೊಂಡ್ರು. ಇನ್ನೂ ಚೇತರಿಸ್ಕೊಂಡಿಲ್ಲ .ನನ್ನ ಓದು ಅಲ್ಲೇ ನಿಂತೋಯ್ತು
ಅವಾಗಿಂದ ನಂಗೆ ದೇವರ್ಯಾಕೆ ಯಾರಮೇಲೂ ನಂಬ್ಕೆ ಇಲ್ಲ. ಏನಿದ್ರೂ ನನ್ನ್ ಅನ್ನ ನಾನು ಸಂಪಾದ್ನೆ ಮಾಡಬೇಕು, ತಿನ್ಬೇಕು. ಅಷ್ಟೇ. ದೇವರೆ ಅನ್ನ ಕೊಡ್ತಾನೆ ಅನ್ಕೊಂಡು ಸುಮನ್ನಿದ್ರೆ
ಇಶ್ಟು ಹೊತ್ಗೆ ಸಾಯ್ಬೇಕಾಗಿತ್ತು..ನನ್ನ ಜೀವನದ ನಿರ್ಧಾರ ನಂದು ಹಂಗಾಗಿ ನಾನೆ ದೇವರು
ಇಲ್ಲದ ದೇವರ್ನ ನಂಬ್ಕೊಂಡು ಮನಸ್ಸಿನ್ ನೆಮ್ದಿ ಹಾಳ್ಮಾಡ್ಕೊಳ್ಳೋ ಬದ್ಲು ನಮ್ಕೈಲಾಗೋದನ್ನ ಮಾಡ್ತಾ ಇದ್ರೆ ಬಾಳು ಮುಂದೆ ಸಾಗುತ್ತೆ ಅಲ್ವಾ

Rating
No votes yet

Comments