ಕವನ

ಕವನ

ಈ ಕವನ ಪೂರ್ತಿಯಾಗಿ ನನಗೆ ಜ್ಞಾಪಕವಿಲ್ಲದಿದ್ದರೂ, ಆ ಅತ್ತ್ಯುತ್ತಮ ಸಾಲುಗಳನ್ನು ನಾನು ಎಂದಿಗೂ ಮರೆಯಲಾರೆ.
ಈ ಕವನದ ಈ ತುಣುಕುಗಳನ್ನು ನಿಮಗಾಗಿ ಇಲ್ಲಿ ಬರೆಯುತ್ತಿದ್ದೇನೆ.

"ಕೂಸುಗಳಿಗೆ ಹಾಲು ಇಲ್ಲ ಪಶುಬಲಿಯೇ ನಡೆದಿದೆ
ಕಾಳು ಇದೆ ಕೂಳು ಇಲ್ಲ ಹಣದ ಹುಚ್ಚು ಹಿಡಿದಿದೆ
ಎಲ್ಲ ಇದೆ ಎಲ್ಲೆ ಇಲ್ಲ ಇಲ್ಲೇ ಸುತ್ತು ಮುತ್ತಿದೆ
ಬೆಣ್ಣೆ ಎಣ್ಣೆ ಎರೆಯ ಬನ್ನಿ ಹಸಿದ ಹೊಟ್ಟೆ ನೆತ್ತಿಗೆ."

ಈ ಕೆಳಗಿನ ಈ ಪದಗಳು ಈ ಕವನದ ಜೀವಾಳ ಎಂದರೆ ತಪ್ಪಾಗಲಾರದು.

" ಮತ್ತೆ ಭುವಿಯ ಎದೆಯ ಮೇಲೆ ತೆನೆಯ ಧ್ವಜವು ನಿಲ್ಲಲಿ
ಸಾವಿಗಿಂತ ಬಾಳು ಮೇಲು ಎಂಬ ಮಾತು ಗೆಲ್ಲಲಿ
ವಿಷದ ಒಡಲಿನಿಂದ ರಸದ ಊಟೆ ಚಿಮ್ಮಿ ಚೆಲ್ಲಲಿ
ಪ್ರೇಮವೇ ಹಣ್ಣಾಗಿ ಬರಲಿ,ಕವಿಯ ಬಲ್ಲ ಸೊಲ್ಲಲಿ."

ಇದು ಶ್ರೀಯುತ ಬೇಂದ್ರೆಯವರ ಅತ್ತ್ಯುತ್ಕ್ರುಷ್ಟ ಕವನಗಳಲ್ಲೊಂದು.
ಇಂತಹ ಕವನಗಳು ಬೇಂದ್ರೆಯವರು ನಿಜಕ್ಕೂ "ಅಂಬಿಕೆಯ ತನಯ" ಎಂದು ಸಾರಿ ಹೇಳುತ್ತವೆ.

Rating
No votes yet

Comments