ನಾನೂ ಹಾಕಿದೆ ನನ್ನ ಮೊದಲ ಓಟು :)

ನಾನೂ ಹಾಕಿದೆ ನನ್ನ ಮೊದಲ ಓಟು :)

ಅಂದು ಬುಧವಾರ ಮಧ್ಯಾಹ್ನ ತರಗತಿ ಮುಗಿಸಿ ವಿದ್ಯಾರ್ಥಿನಿ ನಿಲಯಕ್ಕೆ ಬಂದಾಗಿತ್ತು. ಪುನಃ ಊಟ ಮಾಡಿ ತರಗತಿಗೆ ಹೋಗಬೇಕಿತ್ತು.
ನಮ್ಮ ವಿಭಾಗ ಬಿಟ್ಟರೆ ಬೇರೆಲ್ಲರಿಗೂ ಕಿರು ಪರೀಕ್ಷೆ ಮುಗಿದಿತ್ತು. ನಿರಂತರವಾಗಿ ರಜವಿದ್ದುದರಿಂದ ಬೇರೆ ವಿಭಾಗದವರೆಲ್ಲ ಗಂಟು ಮೂಟೆ ಹೊತ್ತು ನಾವು ಓಟು ಹಾಕಿ ಬರುತ್ತೇವೆ ಪ್ರಥಮಬಾರಿ ಎಂದು ನುಡಿಯುತ್ತಾ ನಗು ಮೊಗದಲ್ಲಿ ಮನೆಯತ್ತ ಪಯಣಿಸುತ್ತಿದ್ದರೆ,ನಾವು ಸಪ್ಪೆ ಮುಖದಲ್ಲಿ "ಬಾಯ್" ಎಂದು ವಿದಾಯ ಕೋರುತ್ತಿದ್ದೆವು. ಬರಿ ಒಂದೇ ಒಂದು ಶನಿವಾರದ ಪರೀಕ್ಷೆ ಬಾಕಿ ಉಳಿದಿತ್ತು.ಇನ್ನೇನು ಊಟ ಮಾಡಿ ಮಹಡಿ ಮೆಟ್ಟಿಲು ಹತ್ತುತ್ತಿದ್ದೆ. ಆಗ ಗೆಳತಿಯೊಬ್ಬಳು.. "ಹೆಯ್ ದಿವ್ಯ ಊರಿಗೆ ಹೋಗಲ್ವಾ? ಟೆಸ್ಟ್ ಪೋಸ್ಟ್ ಪೋನ್ ಆಯ್ತು.. " ಕೇಳಿ ಇದು ನಿಜವೇ ಎಂದು ಮೊದಲು ವಿಚಾರಿಸಿ, ನಾನೂ ಹೊರಟೆ, ಓಟು ಹಾಕಲು ಊರಿಗೆ! :)
ಎಲ್ಲರಿಗೂ ಮೆಸ್ಸೇಜ್ ಕಳುಹಿಸಿದೆ ನಾನು ಓಟು ಹಾಕುತ್ತಿದ್ದೇನೆ ಎಂದು! ಎಲ್ಲಿಲ್ಲದ ಸಂತೋಷ! ಬಸ್ಸು ಹತ್ತಿ ಮನೆ ತಲುಪಿ.. ಮೊದಲು ಗುರುತು ಪ್ರತಿ ಹುಡುಕಿ ಎದುರೆ ತೆಗೆದಿರಿಸಿ; ನಾನು, ನನ್ನ ತಂಗಿಯೂ ಪ್ರಥಮ ಬಾರಿ ಓಟು ಹಾಕುವವರಾಗಿದ್ದೆವು.. ಬರಿ ಅದೇ ಮಾತಾಗುತಿತ್ತು.

ಅಂತೂ ಬೆಳಗಾಯಿತು. ಬೇಗನೆ ಇಬ್ಬರೂ ಸ್ನಾನ ಮಾಡಿ ಅಮ್ಮನೂ ನಮ್ಮೊಂದಿಗೆ ಬರುವವರಾಗಿದ್ದರಿಂದ ಕೆಲಸಕ್ಕೆ ಸಹಾಯ ಮಾಡಿ ಮೂವರೂ ಹೊರಟು ನಿಂತೆವು. ಅಪ್ಪ "ಇದೇನು ಒಳ್ಳೆ ದೇವಸ್ಥಾನಕ್ಕೆ ಹೊರಟಂತೆ ಹೊರತಿದ್ದೀರಿ!! ಓಟು ಹಾಕಿ ಸೀದಾ ಬರಿತ್ತೀರಲ್ಲಾ?? " ಎಂದು ಗೇಲಿಸಿದರು :)
ಹೌದು ಎಂದು ತಲೆ ಆಡಿಸಿ ಹೊರಟೆವು. ಓಟು ಹಾಕೋ ಜಾಗ ಬಂದೇ ಬಿಟ್ಟಿತು. ಸರದಿಯಲ್ಲಿ ನಿಲ್ಲಬೇಕೋ ಏನೋ ಎಂದೆಲ್ಲಾ ಆಲೋಚಿಸುತ್ತಾ ಒಳ ನೋಡಿದರೆ ನಾವೆ ಹಾಕುವವರಾಗಿದ್ದೆವು!! ನಮ್ಮ ನಂಬ್ರ ಹುಡುಕಿ ಕೊಟ್ಟರು. ಸಹಿ ಹಾಕಿದಕೂಡಲೆ ನನ್ನ ಸಂಚಾರಿ ದೂರವಾಣಿಯನ್ನು ಫೊಟೋ ತೆಗೆಯೋ ಮೋಡ್ ಗಿಟ್ಟು ಅಣಿ ಮಾಡಿಟ್ಟೆ. ಇನ್ನೇನು ಬೆರಳಿಗೆ ಹುರುತು ಹಾಕಿದಾಗ ಫೊಟೋ ಕ್ಲಿಕ್ಕಿಸಿದೆ.

ಒಳಗೆ ಹೋಗಿ ಬಟನ್ ಒತ್ತಿ ಬಂದೆ, ಮನದಲ್ಲಿ ಇಬ್ಬರಿಗೂ ಎನೋ ಸಾಹಸ ಮಾಡಿದ ಗೆಲುವು. :) ಆದರೆ ಗುರುತು ದೊಡ್ಡದಾಗೆ ಎಳೆದಿದ್ದರು. ಇದನ್ನು ಉಜ್ಜಲು ಹೋಗಿ ಇಡೀ ಬೆರಳುಗಳಲ್ಲಿ ಗುರುತು :(
ಮನೆಗೆ ಬಂದು ಬಟ್ಟೆ ಒಗೆಯುವ ಕಲ್ಲಿನ ಮೊರೆ ಹೋಗಬೇಕಾಯಿತು... :(
ಅಂತೂ ಮೊದಲ ಓಟನ್ನು ಹಾಕಿಯೇ ಬಿಟ್ಟೆ. ಮರಳಿ ಇವತ್ತು ವಿದ್ಯಾರ್ಥಿನಿ ನಿಲಯಕ್ಕೆ! :)

Rating
No votes yet

Comments