ಹೀಗೊಂದು ಮದುವೆ ಮಾತುಕತೆ!--ನಮ್ಮ ಬೀದರ ಭಾಷೆಯಲ್ಲಿ

ಹೀಗೊಂದು ಮದುವೆ ಮಾತುಕತೆ!--ನಮ್ಮ ಬೀದರ ಭಾಷೆಯಲ್ಲಿ

ವರ್ಷದ ಹಿಂದೆ ಗೆಳೆಯ ಹನುಮಂತನ ಜೊತೆ ಅವನ ಮನೆಗೆ ಹೋಗಿದ್ದೆ, ಆಗ ಹನುಮಂತ್ ಮತ್ತು ಅವರ ತಂದೆ ನಡುವೆ ನಡೆದ ಮಾತುಕತೆ.(ಹನುಮಂತನ ತಂಗಿಯ ಮದುವೆ ಕುರಿತು)

***********************************************************************

ಶ್ರೀಮಂತಪ್ಪ:- ಪಾರ ಬಿ. ಎ. ಮಾಡ್ಯಾನ, ಮನಿಗ್ ಒಬ್ಬಾನೆ ಮಗ ಹನಾ, ೨೦ ಏಕ್ಕರ್ ಹೊಲ ಅದಾ, ರಾಧಾನ್ ಸಲ್ಯಕ ಕೆಳತವಾ ಯಾನ್ ಮಾಡರಿ?
ಹನುಮಂತ್ :- ಹುಂಡ ಎಟ್ ಕೆಳತನ್ರಿ?
ಶ್ರೀಮಂತಪ್ಪ:- ಹುಂಡ ಬ್ಯಾಡ ಅಂತ, ಬರಿ ಪೋರಿ ಕೊಟ್ಟುರ್ ಸಾಕ ಅಂತ.
ಹನುಮಂತ್ :- ಮತ್ತ ಮೊನ್ನ ಇಕಡಿ ಬೀದರ್ ನಿಂದ ನೋಡಾಕ್ ಬಂದಿರ ಅಲಾ, ಎನಂದುರು?
ಶ್ರೀಮಂತಪ್ಪ:- ಆ ಪಾರ ಇಂಜಿನಿಯರ್ ಹನಾ ಅಂತ, ಕಮ್ಮಿ ಅಂದುರ್ ಅದ್ಯನೋ ೧ ಸಿಟ್ಸಿ(ಸಿ ಟಿ ಸಿ) ಬೇಕಂತ, ಹಂಗಂದುರು ಯಾನೋ? ಭಾಳ ರೊಕ್ಕ ಅಗ್ತಾವೆನೋ? ನಂಗ ತಿಳಿಲಿಲ್ಲ, ಅದಕ್ಕ ನಿಂಗ ಕೆಳರಿ ಅಂತ ಸುಮ್ಮಕುಂತಾ ನೋಡು,
ಹನುಮಂತ್ :- ೬ ತಿಂಗುಳ ಹಿಂದ ಹುಡುಗಿ ನೋಡ್ಲಕಿನ ಪೈಲೇ ಹುಂಡಾ ಎನಬಿ ಬ್ಯಾಡಾ ಅಂತ ಹೇಳಿನ್ ಅಲಾ, ಇಗೆನಾತ್ ಅಂತ?
ಶ್ರೀಮಂತಪ್ಪ:- ಆಗ ನೌಕ್ರಿ ಇದ್ದಿಲ್ಲಾ, ಈಗ ಇಂಜಿನಿಯರ್ ಆಗ್ಯಾನ ಅಂತ,ಅದಕೆ ಆಗೇ ಹೇಳಿಲ್ಲ ನಿಂಗ ೧ ಸಿಟ್ಸಿ ರೊಕ್ಕ ಬೇಕಂತ. ಹಂಗಂದುರ್ ಏಟೂ?
ಹನುಮಂತ್:- ಅವನ ಪಗಾರ್ ಎಟ್ ಅದಾ ಅಂತಾ?
ಶ್ರೀಮಂತಪ್ಪ:- ತಿಂಗಳಿಗಿ ತೀಸ್ ಹಜಾರ ಅದಾ ಅಂತಾ ನೋಡು?
ಹನುಮಂತ್:- ಅವ್ನಿಗಿ ೪ ಲಾಕ್ ಬೇಕಂತ, ೧ ಸಿಟ್ಸಿ ಅನ್ದುರು ೪ ಲಾಕ್ ಆಗ್ತಾವ....
ಹೋಗ್ಲಿ ಮತ್ತ ಅಟು ಯದುಕ್ ಕೊಡೋದು, ಈ ಪಾರೆ ನೋಡರಿ ಮತ್ತ, ನಿ ಏನಂತಿ?
ಶ್ರೀಮಂತಪ್ಪ:- ಹುಂಡ ಬ್ಯಾಡ ಅಂತಾನಲಾ, ಏನಾರಾ ಕಮ್ಮಿ ಇದ್ದಿರಬೇಕು, ಪಾರಿನಾಗ?
ಹನುಮಂತ್:- ಹಂಗೇನು ಇರಲ್ಲ, ಹುಡುಗಿ ಹಿಡ್ಸಿರಬೇಕು, ಅದಕ ಹುಂಡ ಬ್ಯಾಡ ಅಂತಾನ, ಆದರು ನೀ ವಿಚಾರ ಮಾಡು, ನಿ ಹ್ಯಾಂಗ ಅಂದುರ್ ಹಾಂಗ ಮಾಡರಿ,
ಶ್ರೀಮಂತಪ್ಪ:- ನಂಗ ಏನ್ ತಿಳಿತುದೋ, ನೀವು ಹ್ಞೂ ಅಂದ್ರೆ ನನಗು ಹ್ಞೂನೆ.

************************************************************************

ಮೊನ್ನೆ ಹನುಮಂತನ ಮದುವೆಗೆ ಹೋಗಿದ್ದೆ, ಆಗ ಯಾರೋ (ಹುಡುಗಿ ಕಡೆಯವರೇ ಇರ್ಬೇಕು )ಮಾತಾಡ್ತಾ ಇದ್ದದ್ದು ಕೇಳಿಸಿಕೊಂಡೆ,

ಇಲ್ಲಾರಿ ಪೈಲೆ ಬಿದರನ ಹುಡುಗನ್ನ (ಮೊದಲು ರಾಧಾನ ಸಲುವಾಗಿ ನೋಡಿದ ಗಂಡು)ನೋಡಿದ್ದೆವು, ಅದ್ಯಾನೋ ಇಂಜಿನಿಯರ್ ಇದ್ದ ಅಂತ, ೪ ಲಾಕ್ ಕೇಳಿದ್ದ, ಆಯ್ತು ಅಂದಿದ್ದೆವು, ಆದ್ರೆ ಮೊನ್ನೆ ಅವ್ನಿಗಿ ನೌಕ್ರಿಲಿಂದ ತೆಗ್ದಾರ ಅಂತ, ಈಗ ಅವ ಇಂಜಿನಿಯರ್ ಇಲ್ಲಾ ಅಂತ ಅದಕ್ಕೆ ಇವ್ನಿಗಿ ನೋಡಿದ್ವಿ, ಇವ ಪೂನದಾಗ ಇರ್ತನ, ಇಂಜಿನಿಯರ್ ಹನಾ, 5 ಲಾಕ್ ತೊಗೊಂಡ ನೋಡ್ರಿ,

************************************************************************

ಶಶಿ ಬಿರ್ಗೆ

Rating
No votes yet

Comments