ಬರಾಕ್ ಒಬಾಮನ ಬಫೆಲೋ ಪುರಾಣ

ಬರಾಕ್ ಒಬಾಮನ ಬಫೆಲೋ ಪುರಾಣ

ಬರಾಕ್ ಒಬಾಮಮೊನ್ನೆ ಅಮೆರಿಕಾದ ಅಧ್ಯಕ್ಷ ಒಬಾಮನ ಹೇಳಿಕೆಯಿಂದ ಇಡೀ ಭಾರತದ ಅದರಲ್ಲೂ ಬೆಂಗಳೂರಿನಲ್ಲಿ ಬಿ.ಪಿ.ಓ. ಕಾಲ ಸೆಂಟರ್ನಲ್ಲಿ ಕೆಲಸ ನಿರ್ವಹಿಸುತ್ತಿರುವ ಹಾಗೂ ಪರೋಕ್ಷವಾಗಿ ಅಮೇರಿಕಾ ಸಂಸ್ಥೆಗಳಿಗೆ ಸೇವೆ ಒದಗಿಸುತ್ತಿರುವ ಭಾರತಿಯ ಸಂಸ್ಥೆಗಳು ತಮ್ಮ ಮುಂದಿನ ಭವಿಷ್ಯದ ಕುರಿತು ಕಳವಳಗೊಂಡಿದ್ದಾರೆ.
ಈಗಾಗಲೇ ಬಡ ಭಾರತವೆಂದೆ ಅಂದಿಗೂ ಇಂದಿಗೂ ಕುಖ್ಯಾತವಾಗಿರುವ ಭಾರತಕ್ಕೆ ಮತ್ತೊಮ್ಮೆ ಜಾಗತೀಕರಣ ಬಿಸಿ ತಟ್ಟಿದ್ದರೂ, ಒಬಾಮಾನ ಹೇಳಿಕೆಯಿಂದ ಮತ್ತಷ್ಟು ತತ್ತರಗೊಳ್ಳುವ ಪರಿಸ್ಥಿತಿ ಉಂಟಾಗಿದೆ. ಈಗಷ್ಟೆ ಚುನಾವಣೆಯೆಂಬ ರಾಜಕೀಯ ಕೆಸರಿಗೆ ನಲುಗಿ ಮತ ನೀಡಲು ಅರ್ಹತೆ ಇಲ್ಲದ ಪ್ರತಿನಿಧಿಗಳಿಗೆ ಬೇರೆ ದಾರಿಕಾಣದೆ ಯಾಂತ್ರಿಕವಾಗಿ ಮತ ನೀಡಿದ್ದಾಗಿದೆ.

ರಾಜಕೀಯ ಪ್ರೇರಿತ ಕೇಸರನ್ನೇ ಶ್ರೀಗಂಧವೆಂದು ಮ್ಯೆ ಕ್ಯೆಗೆ ಪೂಸಿಕೊಂಡಿರುವ ನಮ್ಮ ಮಹಾನ್ ನಾಯಕರಿಗೆ ಒಬ್ಬ ಬಡ ಪ್ರಜೆಯ ಅಂತಃಕರಣದ ಒಂದು ಮಾತನ್ನು ಕೇಳಿಸಿಕೊಳ್ಳುವ ವ್ಯವಧಾನವೆಲ್ಲಿ, ಇನ್ನು ಕೋಮುವಾದವೇ ನನ್ನ ಮೂಲ ಮಂತ್ರವೆಂದು ತಿಳಿದಿರುವ ಪಕ್ಷವೊಂದು ಒಬಾಮನ ಹೇಳಿಕೆಯಿಂದ ಯಾವುದೇ ಹಾನಿಯಿಲ್ಲವೆಂಬ ಅದೇ ಹಳೆಯ ಗೊಡ್ಡು ಆಶ್ವಾಸನೆಗಳನ್ನೇ ಮೆಲುಕು ಹಾಕುತ್ತಿವೆ.

ಭಾರತ ಸರ್ಕಾರವನ್ನು ಮತ್ತದರ ನಿರ್ಣಯವನ್ನು ನೆಚ್ಚಿಕೊಳ್ಳದೆ ಹೀಗೊಂದು ಅಭಿಯಾನವನ್ನು ಮಾಡುವ ಬಯಕೆ, ಇದಕ್ಕೆ ನಿಮ್ಮಗಳ ಅಭಿಪ್ರಾಯವನ್ನು, ಸಹಮತವನ್ನು ತಿಳಿಸಬೇಕಾಗಿ ಸವಿನಯ ಪ್ರಾರ್ಥನೆ.

ಒಬಾಮಾ ತನ್ನ ಹೇಳಿಕೆಯನ್ನು ಹಿಂತೆಗೆದುಕೊಳ್ಳುವವರೆಗೂ ಈ ರೀತಿ ನಮ್ಮ ಪಾಲನೆಗಳಿದ್ದರೆ ಹೇಗೆ
?

ಅಮೆರಿಕಾದ ಯಾವುದೇ ಉತ್ಪನ್ನಗಳನ್ನು ಕೊಂಡುಕೊಳ್ಳದಿರುವುದು.
(ಅವುಗಳೆಂದರೆ ಪೆಪ್ಸಿ, ಕೋಕ್ ಹೆಸರಿನ ವಿಷ, ಇಂಟೆಲ್ ಸರಕುಗಳು, ಮೋಟೊರೋಲ, ಜಿ ಈ, ಲೆವಿಸ್, ಲಿ ತ್ರಾನ್ಸ್ಸೆಂದ್, ಆಪಲ್ ಮುಂತಾದುವುಗಳು)
ನಮ್ಮ ಭಾರತಿಯ ಮಾನವ ಶಕ್ತಿ ದೊಡ್ಡದಿದೆ, ಅದರಲ್ಲೂ ಬುದ್ದಿವಂತಿಕೆಯಲ್ಲಿ ಭಾರತೀಯರನ್ನು ಮಿರಿಸುವಷ್ಟು ಪ್ರಬುದ್ದತೆ ಅಮೆರಿಕನ್ನರಿಗಿಲ್ಲ. ನಾವುಗಳು ಖಂಡಿತ ನಮ್ಮದೇ ಆದ ಶಕ್ತಿಯನ್ನು, ಹಾಗೂ ಕೆಲಸಗಳ ಅವಶ್ಯಕತೆಯನ್ನು ನೀಗಿಸೋಣ, ನಿರುದ್ಯೋಗದ ಅಧಪತನಕ್ಕೆ ಯುವ ಶಕ್ತಿಗಳದ್ದೆ ಮೇಲುಗ್ಯೆ, ಅದಕ್ಕೆ ಭಾರತವೊಂದೆ.ಉದಾಹರಣೆ ಎಂಬುದನ್ನು ಜಗತ್ತಿಗೆ ಸಾರೋಣ, ಭಾರತದಲ್ಲಿ ನಿರ್ಮಾಣವಾದ ವಸ್ತುಗಳನ್ನೇ ಬಳಸೋಣ. 

ನಿರುದ್ಯೋಗ

ಅಮೆರಿಕಾಗೆ ಪ್ಯೆಪೋಟಿ ನೀಡುವ ಭಾರತದ ವಸ್ತುಗಳನ್ನು ಮುಂದಿನ ಬ್ಲಾಗಿನಲ್ಲಿ ಬರೆಯುತ್ತೇನೆ.

 

 

ಅರವಿಂದ್

Rating
No votes yet

Comments