ಮಾತಾಪಿತರಿಗೆ ಎಲ್ಲಿವೆ ಇನ್ನು ಇದಕ್ಕಿಂತ ಖುಷಿಯ ದಿನಗಳು!!!

ಮಾತಾಪಿತರಿಗೆ ಎಲ್ಲಿವೆ ಇನ್ನು ಇದಕ್ಕಿಂತ ಖುಷಿಯ ದಿನಗಳು!!!

ಅಂದಿತ್ತು ನನಗೆ ಓದುಗರೇ ನಿಮ್ಮೆಲ್ಲರ ಹರಕೆಯ ನಿರೀಕ್ಷೆ*
ಏಕೆಂದರೆ ಶುರುವಾಗಿತ್ತಂದು ಮಗಳು ಸ್ಮಿತಾಳಿಗೆ ಪರೀಕ್ಷೆ

ಮಗಳು ಜಯಿಸಿದ್ದಾಳೆ ನಮ್ಮ ನಿರೀಕ್ಷೆಯ ಸುಳ್ಳಾಗಿಸದೇ
ಇಂದು ಹೇಗೆ ಸುಮ್ಮನಿರಲಿ ಖುಷಿಯ ನಾ ಹಂಚಿಕೊಳ್ಳದೇ

ನಿನ್ನೆ ೨೧ನೇ ವರುಷಕ್ಕೆ ಕಾಲಿಡ್ತು ನಮ್ಮ ದಾಂಪತ್ಯ ಜೀವನ
ಒಂದು ದಿನ ಮೊದಲೇ ಸಿಕ್ತು ಮಗಳಿಂದೆಮಗೆ ಬಹುಮಾನ

ನನ್ನವಳಿಗೆ ನಾ ಅಂದೆ ಇದೆಂತಹ "ಹ್ಯಾಪ್ಪೀ ಆನಿವರ್ಸರೀ!"
ಅಕೆಯೆಂದಳು ಮುಗುಳ್ನಕ್ಕು "ಕಣ್ಣಂಚಿನ ಆ ಹನಿ ಒರೆಸಿರೀ"

ಮಾತಾಪಿತರಿಗೆ ಎಲ್ಲಿವೆ ಇನ್ನು ಇದಕ್ಕಿಂತ ಖುಷಿಯ ದಿನಗಳು
ನನ್ನೆಲ್ಲ ಓದುಗ ಬಂಧುಗಳಿಗೆ ನಮ್ಮ ಹಾರ್ದಿಕ ಧನ್ಯವಾದಗಳು

* http://sampada.net/blog/asuhegde/13/03/2009/17878

ಆಂಗ್ಲ: ೮೭
ಹಿಂದಿ: ೯೫
ಭೌತಶಾಸ್ತ್ರ: ೯೮
ರಸಾಯನ ಶಾಸ್ತ್ರ: ೯೬
ಗಣಿತಶಾಸ್ತ್ರ: ೯೦
ಜೀವಶಾಸ್ತ್ರ: ೯೩
ಒಟ್ಟು: ೫೫೯
ಶೇಕಡಾ: ೯೩.೧೬

Rating
No votes yet

Comments