ನಾ ಓದಿದ ಪುಸ್ತಕ - ಡಾ|| ಬಿ.ಜಿ.ಎಲ್ ಸ್ವಾಮಿಯವರ "ಪಂಚಕಲಶ ಗೋಪುರ"

ನಾ ಓದಿದ ಪುಸ್ತಕ - ಡಾ|| ಬಿ.ಜಿ.ಎಲ್ ಸ್ವಾಮಿಯವರ "ಪಂಚಕಲಶ ಗೋಪುರ"

ಇದೊಂದು ಅಪ್ರತಿಮ ಕೃತಿ.. ಡಾ. ಬಿ.ಜಿ.ಎಲ್ ಸ್ವಾಮಿಯವರ ಈ ಪುಸ್ತಕದಲ್ಲಿ, ಅವರು ತಮ್ಮ ಐವರು ಗುರುಗಳ ವ್ಯಕ್ತಿತ್ವದ ಬಗ್ಗೆ ಕೊಡುವ ಚಿತ್ರಣ ನನ್ನ ಕಣ್ಣೆದುರಲ್ಲೇ ನೆಡೆಯಿತೇನೋ ಎಂದು ಭಾಸವಾಗುತ್ತಿದೆ. ಕನ್ನಡದ ಬಗ್ಗೆ, ಕರ್ನಾಟಕ ಸಂಘದ ಬಗ್ಗೆ, ತಮ್ಮ ಸುತ್ತಮುತ್ತಲು ನೆಡೆಯುವ ವಿಷಯಗಳ ಬಗ್ಗೆ ತಿಳಿ ಹಾಸ್ಯದ ಜೊತೆ ಸರಳವಾಗಿ ಹೇಳುತ್ತಾ ಹೋಗಿದ್ದಾರೆ.

ಬೆಳ್ಳಾವೆ ವೆಂಕಟನಾರಾಯಣಪ್ಪನವರು, ಟಿ.ಎಸ್. ವೆಂಕಣ್ಣಯ್ಯನವರು, ಬಿ.ಎಂ ಶ್ರೀಕಂಠಯ್ಯನವರು, ಎ.ಆರ್. ಕೃಷ್ಣಶಾಸ್ತ್ರೀ ಅವರು, ವಿ. ಸೀತಾರಾಮಯ್ಯನವರು - ಈ ಮಹಾವ್ಯಕ್ತಿಗಳ ವ್ಯಕ್ತಿತ್ವದ ಒಂದು ಕಿರುನೋಟವನ್ನ ನಮಗೆ ಪರಿಚಯಮಾಡುವ ರೀತಿಯಂತೂ ಅದ್ಭುತ. 

ಪುಸ್ತಕ ಓದೋದು ಇನ್ನೆಲ್ಲಿ ಮುಗಿದೇ ಹೋಗುತ್ತೋ ಅಂತ ಚಿಂತೆ ಕಾಡುತ್ತಿದ್ದರೂ.. ಇವತ್ತು ಮುಗಿಸದೇ ಮೇಲೇಳಲು ಮನಸ್ಸಾಗಲೇ ಇಲ್ಲ. ಈಗ ಓದಿ ಮುಗಿಸಿದ್ದೇನೆ. ಮತ್ತೆ ಅದರ ಪುಟಗಳನ್ನು ತೆರೆದು ಬರೆದ ಶೈಲಿಯ ಮಂಪರಲ್ಲಿ ಮುಳುಗಿ ಏಳುವ ಆಸೆ ಆಗುತ್ತಿದೆ.

ನೀವು ಇದನ್ನ ಓದಿಲ್ಲಾ ಅಂತಾದರೆ ಖಂಡಿತ ಓದಿ. ಇದರ ಬಗ್ಗೆ ಹೆಚ್ಚು ಬರೆಯಲಿಕ್ಕೆ ಪದಗಳ ಹುಡುಕಾಟದಲ್ಲಿದ್ದೇನೆಯೇ ಹೊರತು ಹೆಚ್ಚು ವಿಷಯಗಳು ಝರಿಯಾಗಿ ಹರಿಯುತ್ತಿಲ್ಲ. ಈಗ ಅವರ ಮೈಸೂರು ಡೈರಿಯ ಕಡೆ ಕಣ್ಣಾಯಿಸುವ ಹುನ್ನಾರದಲ್ಲಿದ್ದೇನೆ. ಇತರೆ ಸಂಪದಿಗರು ಈ ಪುಸ್ತಕದ ಬಗ್ಗೆ ತಮ್ಮ ಅನಿಸಿಕೆಗಳನ್ನು ಧಾರಾಳವಾಗಿ ಹಂಚಿಕೊಳ್ಳುತ್ತಾರೆಂಬ ನಂಬಿಕೆಯಿಂದ :) 

Rating
No votes yet

Comments