ಡೈರಿಯ ಪುಟಗಳಿಂದ...

ಡೈರಿಯ ಪುಟಗಳಿಂದ...

ನಮ್ಮ ಸರ್ ಪಾಠದ ಶೈಲಿಯ ಒಂದು sample ನಿಮಗೆ ಈಗಾಗಲೆ ತೋರ್ಸಿದ್ದೀನಿ. ಇಲ್ಲಿ ಇನ್ನೊಂದಷ್ಟಿದೆ. ಸರ್ ಪಾಠ ಮಾಡುವಾಗ ಅಲ್ಲಲ್ಲಿ ಅವರು ಹೇಳಿದ ಕೆಲವು ಅಣಿಮುತ್ತುಗಳನ್ನು ಬರೆದಿಟ್ಟುಕೊಂಡಿದ್ದೆ. ಈಗ ಅವೆಲ್ಲವನ್ನೂ ಸೇರಿಸಿ ಒಂದು ಕಥೆ ತರ ಮಾಡಿದ್ದೀನಿ.. ಇದು ತುಂಬಾ ಅಸಂಬದ್ಧ ಅನ್ನಿಸಿದ್ರೂ ಅವ್ರು ಪಾಠ ಮಾಡೋದು ಹೀಗೆನೇ..

ಅಲ್ಲಲ್ಲಿ ಇಂಗ್ಲೀಶ್ ಪದಗಳನ್ನ ಬಳಸಿದ್ದಕ್ಕೆ ಕ್ಷಮೆ ಇರಲಿ.. ಅದನ್ನ ಹಾಗೆ ಬಳಸಿದ್ರೆ ಚೆನ್ನಾಗಿರುತ್ತೆ ಅನ್ನಿಸ್ತು

ವಾಕ್ಯ ಪೂರ್ಣ ಮಾಡಕ್ಕೆ ಬಳಸಿರೋ ಪದಗಳಷ್ಟೇ ನಂದು.. ಇನ್ನೆಲ್ಲ ಅವರದ್ದೆ..

ನಮ್ಮ ಸರ್ ಅವರ ಡೈರಿ ಬರೆದರೆ ಹೇಗಿರುತ್ತೆ ಅನ್ನೋ ಕಲ್ಪನೆಯಲ್ಲಿ ಇದನ್ನ ಬರ್ದಿದ್ದೀನಿ. ಅರ್ಥ ಆಗದಿದ್ರೆ ದಯ್ವಿಟ್ಟು ಬೈಕೋಬೇಡಿ.. ನನ್ನ ಬಗ್ಗೆ ,ನನ್ನ ಕ್ಲಾಸ್ ಮೇಟ್ಸ್ ಬಗ್ಗೆ ಮರುಕ ಪಡಿ :(

********************************************************************

ಸಂಬಂಧಪಟ್ಟಂತೆ ಮುಖ್ಯವಾಗಿ especially ಸಾಮಾನ್ಯವಾಗಿ, roof ನ top ನಲ್ಲಿ , ನಾನೇ met with accident ಮಾಡಿದೆ. ಪಾಪ ಅವನು kill ಆಗಿಬಿಟ್ಟ..

ಅವನು kill ಆದಮೇಲೆ, ನಾನು ತಪ್ಪಿಸಿಕೊಳ್ಳಕ್ಕೆ ಬೈಕ್ ನಲ್ಲಿ ಓಡಿಹೋದೆ.. ಹೋಗ್ತಿರ್ವಾಗ ದಾರಿಗಡ್ಡವಾಗಿ ಒಬ್ಳು ಹುಡುಗಿ ಬಂದ್ಲು.. kill ಮಾಡುವಾಗ ಕುಡಿದಿದ್ದ ನಾನು ಹುಡುಗಿನ ಸರಿಯಾಗಿ ನೋಡದೆ ಹೋಗಿ ಅವಳಿಗೆ ಗುದ್ದಿದೆ. ಆಗ್ಲೇ ರಾತ್ರಿ ೧೨ ಘಂಟೆ ಆಗಿತ್ತು.. ಅವಳಿಗೆ ಗುದ್ದಿದ ಕೂಡ್ಲೆ ಅವಳ ಮೈ ಮೇಲೆಲ್ಲ ದೊಡ್ಡ ಗಂಧೆ ಏಳ್ತು ..hit and run case ಆದಾಗ ಇದು ನಾನು ಆ ಹುಡುಗಿನಾ ಆಸ್ಪತ್ರೆಗೆ ಸೇರಿಸ್ದೆ ಅಲ್ಲಿಂದ ಓಡಿಹೋದೆ.. ನಾನು ಹಾಕ್ಕೊಂಡಿದ ಕೂಲಿಂಗ್ ಗ್ಲಾಸ್ ನಿಂದ ನನ್ನ ಕಂಡು ಹಿಡಿಯಬಹುದು ಅನ್ನೋ ಅನುಮಾನ ನನಗಿತ್ತು..ಮಂಡ್ಯದಿಂದ ಮದ್ದೂರಿನ ತನಕ ಬೈಕ್ ನಲ್ಲಿ ಹೋದ ನಾನು ಅಲ್ಲಿ ಹಡಗನ್ನು ಹತ್ಕೊಂಡೆ..

ಆದ್ರೆ ಹಡಗು ಮುಂದೆ ಹೋಗ್ಲಿಲ್ಲ.. ಅದಕ್ಕೆ ಸ್ವಲ್ಪ ಪೆಟ್ರೋಲ್ ಹಾಕಿ ಅಲ್ಲೆ ಸುತ್ತ ಮುತ್ತ ಇದ್ದ ಜನರನ್ನು ಅದನ್ನ ಸ್ವಲ್ಪ ತಳ್ಳಿ ಅಂತ ಕೇಳ್ಕೊಂಡೆ.. ಅವರು ತಳ್ಳಿದ್ದು ಜೋರಾಯ್ತು.. ಹಡಗಿನ ಸ್ಪೀಡ್ ಕಂಟ್ರೋಲ್ ಗೆ ಸಿಗಲಿಲ್ಲ ನನಗೂ ಹಡಗಿನ ಡ್ರೈವಿಂಗ್ ಸರಿಯಾಗಿ ಬರ್ತಿರ್ಲಿಲ್ಲ.. ಅಷ್ಟರಲ್ಲಿ ಅಲ್ಲಿ ಒಬ್ಬಳು ಹುಡುಗಿ ಕಾಣ್ಸಿದ್ಳು.. ಅವಳ್ನೇ ನೋಡ್ತಿದ್ದಾಗ ಅಲ್ಲೇ ಸಮುದ್ರದಲ್ಲಿದ್ದ ಹಳ್ಳದ ಕಡೆ ಹಡಗು ಹೋಯ್ತು.. ಅದನ್ನ ಅವಾಯ್ಡ್ ಮಾಡಕ್ಕೆ ಆಗ್ಲಿಲ್ಲ.. ಹಳ್ಳ ಜಂಪ್ ಮಾಡ್ಸಣ ಅಂತ ಹೋದೆ.. ಹಡಗು ಮುರಿದು ಹೋಗಿ loss ಆಗಿಹೋಯ್ತು ನಾನು ಸಮುದ್ರದಿಂದ ಜಂಪ್ ಮಾಡಿ ಆದ ನಷ್ಟದ ನಿರ್ದಿಷ್ಟ ಸರಾಸರಿ ಲೆಕ್ಕ ಮಾಡಿ ವಿಮ ಕಂಪನಿಗೆ ಕೊಟ್ಟೆ. ಅದೂ ಅಲ್ಲದೆ ಹಡಗನ್ನು ಕಟ್ಟುವಾಗ ಅದರಲ್ಲಿ ತೊಂದರೆ ಆಗಿ constructive loss ಕೂಡ ಆಗಿತ್ತು.. ಎಲ್ಲ ನಷ್ಟಗಳನ್ನು ಸೇರಿಸಿ ಕಂಪನಿಗೆ ಕೊಟ್ಟೆ.. ಈ ಹಡಗಿನ ಸಹವಾಸ ಸಾಕಾಗಿ ಪ್ರೀತಿ ವಾತ್ಸಲ್ಯದಿಂದ ಅದನ್ನು ನನ್ನ ಹೆಂಡತಿಗೆ ಪರಿತ್ಯಜನೆ ಮಾಡಿದೆ..

ಅಲ್ಲಿಂದ ಮನೆಗೆ ಬಂದೆ.. ನನ್ನ ಮಿಸ್ಸೆಸ್ಸು ಡಬ್ಬದಲ್ಲಿ ಸೀಮೆ ಎಣ್ಣೆ ಇಟ್ಟಿದ್ಳು.. ನಾನು ಇನ್ನೊಂದು ಮೂಲೆಲಿ ಬೀಡಿ ಸೇದ್ತಿದ್ದೆ.. ಅಷ್ಟು ಹೊತ್ತಿಗೆ ಜೋರಾಗಿ ಗಾಳಿ ಬೀಸ್ತು... ಬೀಡಿಯಿಂದ ಒಂದು ಬೆಂಕಿ ಸೀಮೆ ಎಣ್ಣೆ ಡಬ್ಬಕ್ಕೆ ಬಿತ್ತು.. ಮನೆಯೆಲ್ಲ ಹತ್ತಿ ಉರಿದು short circuit ಆಯ್ತು.. ಆಗ electricity board ಮೇಲೆ ಹತ್ಕೊಂಡು ಕೆಲ್ಸ ಮಾಡ್ತಿದ್ದಾಗ met with accident ಆಯ್ತು.. ಅಲ್ಲಿ ರಿಪೇರಿ ಮಾಡ್ತಿದ್ದ ೨೦ ವರ್ಷದ ಹುಡುಗ , ಹುಡುಗಿ ತರ ಕಾಣ್ಸಕ್ಕೆ ಶುರು ಆದ.. ಇಷ್ಟೆಲ್ಲಾ ಅನಾಹುತಕ್ಕೆ ಕಾರಣ ಏನು ಅಂತ ಯೋಚಿಸ್ತಿದ್ದಾಗ ನಾನು ಬೀಡಿ ಸೇದ್ತಿದ್ದಿದ್ದೆ ಕಾರಣ ಅಂತ ಗೊತ್ತಾಯ್ತು... ತಪ್ಪು ನನ್ನಿಂದ್ಲೆ ಆದ್ರಿಂದ ಯಾವ ಅನಾಹುತಕ್ಕೂ claim ಮಾಡದೆ ಸುಮ್ನೆ ಕೂತ್ಕೊಂಡೆ

ಮುಂದುವರಿಯುವುದು............

Rating
No votes yet

Comments