ಚೆನ್ನೈ ಊರು

ಚೆನ್ನೈ ಊರು

ರವಿವಾರ ಯಾವುದೋ ಕಾರಣಕ್ಕೆ ಚೆನ್ನೈಗೆ ಹೋಗಬೇಕಾಯಿತು.. ನಗಗೋ‌ ಭಯಾ ಒಂಥರ... ಅಲ್ಲಿ ಜನಕ್ಕೇ ತಮಿಳು ಬಿಟ್ಟರೆ ಬೇರೆ ಭಾಷೆ ಬರಲ್ಲ ಅಂತ ಕೇಳಿದ್ದು... ಯೇನ್ ಮಾಡೋದು ಅನ್ನುವಷ್ಟರಲ್ಲೇ ವಾದಿ [friend] ನನ್ ಜೊತೆ ಬರೋಕೆ ತಯಾರಾದಾ. ಅಬ್ಬಾ ಅವನಿಗೆ ಹರಕು ಮುರುಕು ತಮಿಳ್ ಬರ್ತಿತ್ತು...
ನನಗೆ ಚೆನ್ನೈ ಅಂದ್ರೆ ಏನೋ ಕಲ್ಪನೆ ಇತ್ತು....

೧. ತುಂಬಾ ದೊಡ್ಡ ಊರು...
೨. ನೋಡೋಕೆ ತುಂಬಾ ಮಸ್ತ್ ಆಗಿರುತ್ತೆ.
೩. ಜನಾ ಅಷ್ಟೇನು ಒಳ್ಳೆಯವರಲ್ಲಾ... [ಯಾಕೋ ಗೊತ್ತಿಲ್ಲಾ ನನಗೆ ಹಂಗೇ ಅನಿಸಿತ್ತು]
೪. ತಮಿಳು ಬಿಟ್ಟು ಬೇರೆ ಭಾಷೆ ಮಾತನಾಡುವುದಿಲ್ಲ...

ರವಿವಾರ ಸಂಜೆ ರಾಷ್ಟ್ರೋಥ್ಥಾನ ಸಭಾಂಗಣದಲ್ಲಿ ಕಾರ್ಯಕ್ರಮ ಮುಗಿಸಿ ಹೊರಟೆ Majesticಗೆ.
೮:೩೦ ರ bus ಬಂದಾಗ ಸಮಯ ಸರಿಯಾಗಿ ೯:೩೦.....Busನಲ್ಲಿ ಎಲ್ಲರೂ ತಮಿಳರೇ..... ಅಯ್ಯಪ್ಪಾ ಅಲ್ಲಿ ಹೇಂಗಿರೋದೋ ಅಂತಿದ್ದೆ.. ಪುಣ್ಯಾ ವಾದಿ ಇದಾನಲ್ಲಾ ಅನ್ಕೋಂಡು.. ಮಲ್ಕೊಂಡೆ.... ಬೆಳಗ್ಗೆ ೩:೧೫ಕ್ಕೆ ಚೆನ್ನೈ Bus stand....

ಅಲ್ಲಿ ಇಳಿದು ಅಡ್ಡಾಡಿದ ಮೇಲೆ ನನಗೆ ನನ್ನ ಕಲ್ಪನೆಯ ಕೆಲವು ಅಂಶಗಳು ತಪ್ಪು ಅನಿಸಿತು...

೧. ನೋಡೋಕೆ ತುಂಬಾ ಗಲೀಜು ಅನ್ನಿಸಿತು.. ನಾನು ಅಡ್ಡಾಡಿದ್ದು... Main bus stand, Central railway station ಮತ್ತೆ egmore. ಇವನ್ನು ಬಿಟ್ಟು ಬೇರೇ ಚನ್ನಾಗಿರೋ‌ ಪ್ರದೇಷಗಳಿರಬಹುದು ನಾನು ನೋಡಲಿಲ್ಲ.. ರಸ್ತೆ ಪಕ್ಕದಲ್ಲೇ ಎಷ್ಟೋಂದುಕಡೆ ಜನ ೧-೨ ಮಾಡಿರ್ತಿದ್ರು.. ಟೀ ಅಂಗಡಿಯವರು ಎಲ್ಲಾ ಗಲೀಜನ್ನು ರಸ್ತೆಮೇಲೇ ಹಾಕ್ತಾರೆ... ಇನ್ನು bus stand ಕೇಳಲೇ ಬಾರದು.. ಊಟಾ ಅಲ್ಲೇ ಮಾಡೋದು ಅಲ್ಲೇ ಕಸಾ ಹಾಕೋದು ಅಲ್ಲೇ ಮಲಗೋದು.. ನನಗಂತೂ ಥೂ ಅನ್ನಿಸ್ತು...

೨. City Bus ವ್ಯವಸ್ಥೆ ಇಲ್ಲಿಯ ಹಾಗೇ ಇದೆ.

೩. ನನಗೆ ಸಿಕ್ಕ ಎಲ್ಲಾ ಜನರೂ ಒಳ್ಳೆಯವರೇ.... Lodge owner [ಕನ್ನಡದವನು], Police, Bus conductor etc etc. ನನಗೇ central ಇಂದ egmore ನಲ್ಲಿರೋ ಅಪೋಲೋ ಆಸ್ಪತ್ರೆಗೆ ಹೋಗಬೇಕಾಗಿತ್ತು, ಒಬ್ಬ ಪೋಲೀಸ್ ನ್ನ ಕೇಳಿದೆ [ಹಿಂದಿ ನಲ್ಲಿ], ಅವನು ನನ್ನ ಹೆಗಲಮೇಲೆ ಕೈ ಹಾಕಿಕೊಂಡು ಸ್ವಲ್ಪ ದೂರ ಕರೆದುಕೋಂಡು ಹೋಗಿ bus ಎಲ್ಲಿ ಸಿಗತ್ತೇ, ಯಾವ ಯಾವ bus route number ಹೇಳಿ ವಾಪಸ್ ಹೋದ. ನನಗಂತೂ ಆಶ್ಚರ್ಯ..

೪. ಹೆಚ್ಚು ಕಡಿಮೆ ಎಲ್ಲರೂ ಹಿಂದಿನಲ್ಲಿ ಮಾತಾಡಿದರು. bus conductor, police, ಆಸ್ಪತ್ರೆನಲ್ಲಿ, ಟೀ ಅಂಗಡಿನಲ್ಲಿ, ತಿಂಡಿ ತಿಂದ ಹೊಟೇಲ್ ನಲ್ಲಿ, ರಾತ್ರಿ ಊಟ ಮಾಡಿದ ಹೊಟೇಲ್ ಎಲ್ಲಾ ಕಡೆ ಹಿಂದಿ ಮಾತಾಡಿದರು [ಅವರೆಲ್ಲಾ ತಮಿಳರೇ]. ಆಗ ಅನ್ನಿಸ್ತು.. ಚೆನ್ನೈನಲ್ಲಿ ತಮಿಳು ಬರದಿದ್ರು ಇರಬಹುದು ಅಂತ.

೫. Traffic ತುಂಬಾನೇ ಕಡಿಮೆ. [ನಾನು ಹೋದಕಡೆ ಹಾಗಿತ್ತು ಬೇರೆಕಡೆ ಗೊತ್ತಿಲ್ಲ]

೬. ಸೆಕೆ... ಅಬ್ಬಾ.. ನನಗಂತೂ ಸಾಕಾಗಿ ಹೋಯ್ತು..

ಒಟ್ಟಾರೆ.. ಚೆನ್ನೈಗೆ ಹೋಗಿ ಬಂದೆ... ಬೆಂಗಳೂರು bus stand ಬಂದಾಗ ಅದೇನೋ‌ ಖುಷಿ......

Rating
No votes yet

Comments